Download Our App

Follow us

Home » ಸಿನಿಮಾ » ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಂಡ ‘ಆಡುಜೀವಿತಂ’ ಚಿತ್ರ : ಪೃಥ್ವಿರಾಜ್​ ನಟನೆಗೆ ಜನರು ಫುಲ್ ಫಿದಾ..!

ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಂಡ ‘ಆಡುಜೀವಿತಂ’ ಚಿತ್ರ : ಪೃಥ್ವಿರಾಜ್​ ನಟನೆಗೆ ಜನರು ಫುಲ್ ಫಿದಾ..!

ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಅವರ ಬಹುನಿರೀಕ್ಷಿತ ಸಿನಿಮಾ ‘ಆಡುಜೀವಿತಂ’ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ತೆರೆ ಕಂಡಿದೆ. ‘ಆಡುಜೀವಿತಂ’ ನೈಜ ಘಟನಾಧರಿತ ಸಿನಿಮಾವಾಗಿದ್ದು, ಹಲವು ವರ್ಷಗಳ ಶ್ರಮಕ್ಕೆ ಫಲವಾಗಿ ಇದೀಗ ಚಿತ್ರ ಪ್ರೇಕ್ಷಕಪ್ರಭುಗಳ ಮನಸ್ಸು ಗೆದ್ದಿದೆ.

2008ರಲ್ಲಿಯೇ ಚಿತ್ರ ನಿರ್ಮಾಣ ಪ್ರಕ್ರಿಯೆ ಪ್ರಾರಂಭವಾದರೂ, ಮಾರ್ಚ್ 2018ರಿಂದ ಜುಲೈ 2022ರವರೆಗೆ ಚಿತ್ರೀಕರಣವನ್ನು ವಿವಿಧ ಹಂತಗಳಲ್ಲಿ ಮುಗಿಸಲಾಗಿದೆ. ಈ ಸಿನಿಮಾದಲ್ಲಿ ಪೃಥ್ವಿರಾಜ್​ ಸುಕುಮಾರನ್ ಅವರು ಡಿಫರೆಂಟ್​ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ದೇಹದ ತೂಕ ಇಳಿಸಿಕೊಂಡು ಪ್ರೇಕ್ಷಕರನ್ನು ಅಚ್ಚರಿಗೊಳಿಸಿದ್ದಾರೆ. ಸ್ವತಃ ಚಿತ್ರಕ್ಕೆ ಕಥೆ ಬರೆದಿರುವ ರಾಷ್ಟ್ರೀಯ ಪ್ರಶಸ್ತಿ ವಿಜೇತ ಬ್ಲೆಸ್ಸಿ ನಿರ್ದೇಶನದ ಜೊತೆಗೆ ಸಹ-ನಿರ್ಮಾಣವನ್ನೂ ಮಾಡಿದ್ದಾರೆ.

ಬ್ಲೆಸ್ಸಿ ಅವರು ಈ ಸಿನಿಮಾಗಾಗಿ ಹತ್ತಾರು ವರ್ಷ ಕಷ್ಟಪಟ್ಟಿದ್ದಾರೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ‘ಆಡುಜೀವಿತಂ’ ಸಿನಿಮಾ ಬಿಡುಗಡೆಯಾಗಿದ್ದು, ಮೊದಲ ದಿನ ಮೊದಲ ಶೋ ನೋಡಿದ ಪ್ರೇಕ್ಷಕರು ಎಕ್ಸ್​ ಮೂಲಕ ತಮ್ಮ ವಿಮರ್ಶೆ ಹಂಚಿಕೊಂಡಿದ್ದಾರೆ. ಪಾಟ್ನಾದಲ್ಲಿ ಆಡುಜೀವಿತಂ ಸಿನಿಮಾವನ್ನು ನೋಡಬೇಕು ಎಂದು ಬುಕಿಂಗ್​ ಆ್ಯಪ್​ ತೆರೆದರೆ ಹೌಸ್​ಫುಲ್​ ತೋರಿಸುತ್ತಿದೆ. ಪೃಥ್ವಿರಾಜ್​ ಸುಕುಮಾರನ್​ ಅವರಿಗೆ ಆಲ್​ ದಿ ಬೆಸ್ಟ್​ ಎಂದು ಪಾಟ್ನಾದಲ್ಲಿನ ಅಭಿಮಾನಿಯೊಬ್ಬರು ಪೋಸ್ಟ್​ ಮಾಡಿದ್ದರು.

ಈ ಸಿನಿಮಾದಲ್ಲಿ ಪೃಥ್ವಿರಾಜ್​ ಸುಕುಮಾರನ್​ ಜೊತೆ ಅಮಲಾ ಪೌಲ್​, ಜಿಮ್ಮಿ ಜೀನ್​ ಲೂಯಿಸ್​, ಕೆ.ಆರ್​. ಗೋಕುಲ್​ ಮುಂತಾದವರು ನಟಿಸಿದ್ದಾರೆ. ‘ಇದು ತುಂಬ ಒಳ್ಳೆಯ ಸಿನಿಮಾ. ಇದಕ್ಕೆ ಖಂಡಿತವಾಗಿಯೂ ಜನರ ಬೆಂಬಲ ಸಿಗಬೇಕು’ ಎಂದು ನೆಟ್ಟಿಗರೊಬ್ಬರು ಟ್ವೀಟ್​ ಮಾಡಿದ್ದಾರೆ. ‘ಇದು ಸಿನಿಮ್ಯಾಟಿಕ್​ ಮ್ಯಾಜಿಕ್​. ಯಾರೂ ಈ ಚಿತ್ರವನ್ನು ಮಿಸ್​ ಮಾಡಿಕೊಳ್ಳಬೇಡಿ’ ಎಂದು ಕೆಲವು ಪ್ರೇಕ್ಷಕರು ಹೇಳಿದ್ದಾರೆ. ನಜೀಬ್​ ಮೊಹಮ್ಮದ್​ ಎಂಬ ಈ ಪಾತ್ರದಲ್ಲಿ ಅವರು ಜೀವಿಸಿದ್ದಾರೆ’ ಎಂದು ಪ್ರೇಕ್ಷಕರೊಬ್ಬರು ತಮ್ಮ ವಿಮರ್ಶೆ ತಿಳಿಸಿದ್ದಾರೆ. ಮಲಯಾಳಂ ಸಿನಿಮಾಗೆ ಎಲ್ಲ ಕಡೆಗಳಲ್ಲಿ ಈ ರೀತಿ ರೆನ್ಪಾನ್ಸ್ ಸಿಗುತ್ತಿರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ.

ಇದನ್ನೂ ಓದಿ : ಅಭ್ಯರ್ಥಿ ಸೋತ್ರು ಪರವಾಗಿಲ್ಲ ಪಕ್ಷದ ಶಿಸ್ತು ಮೀರಿದ್ರೆ ಕಠಿಣ ಕ್ರಮ ಕೈಗೊಳ್ತೀವಿ : ಮುನಿಯಪ್ಪಗೆ ಡಿಕೆಶಿ ಓಪನ್​​​​ ವಾರ್ನಿಂಗ್​..!

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here