ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರು ಅಂದ್ರೆ ಕೇಳುವುದೇ ಬೇಡ ಎಲ್ಲೆಡೆ ಟ್ರಾಫಿಕ್ದೇ ಸಮಸ್ಯೆ. ಅದರಲ್ಲೂ ಸಮಯಕ್ಕೆ ಸರಿಯಾಗಿ ಆಫೀಸ್ಗೆ ತಲುಪಬೇಕೆಂಬ ಉದ್ಯೋಗಿಗಳ ಗೋಳು ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎನ್ನುವುದಕ್ಕೆ ಇಲ್ಲೊಂದು ಘಟನೆ ಸಾಕ್ಷಿ ಎಂಬಂತಿದ್ದು, ವ್ಯಕ್ತಿಯೋರ್ವ ತನ್ನ ಸ್ಕೂಟರ್ ಓಡಿಸುತ್ತಲೇ ಲ್ಯಾಪ್ ಟಾಪ್ ನಲ್ಲಿ ಕಚೇರಿ ಮೀಟಿಂಗ್ ಪಾಲ್ಗೊಂಡಿರುವುದು ಕಂಡುಬಂದಿದೆ.
ಪೀಕ್ ಬೆಂಗಳೂರು ಎಂಬ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ಸ್ಕೂಟರ್ ಚಲಾಯಿಸುತ್ತಲೇ ಲ್ಯಾಪ್ ಟಾಪ್ ಅನ್ನು ಓಪನ್ ಮಾಡಿ ಕೆಳಗಿಟ್ಟುಕೊಂಡು ಕಚೇರಿ ಮೀಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾಗಿದೆ. ಸುಮಾರು 11 ಸೆಕೆಂಡುಗಳ ಚಿಕ್ಕ ವಿಡಿಯೋ ತುಣುಕು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಇದೊಂದು ಕಂಪನಿಯ ಟೀಂ ಮೀಟಿಂಗ್ ಎಂದು ಹೇಳಲಾಗುತ್ತಿದೆ.
ಇನ್ನು ವಾಹನ ಚಲಾಯಿಸುವಾಗ ಮೊಬೈಲ್, ಹೆಡ್ ಫೋನ್ ಬಳಸಿಕೊಂಡು ಸಂಚಾರ ನಿಯಮ ಉಲ್ಲಂಘಿಸುವುದು ಅಪರಾಧ. ಹೀಗಾಗಿ ಇದೀಗ ಈ ವಿಡಿಯೋದ ಕುರಿತು ಪರ- ವಿರೋಧಗಳು ಎಲ್ಲೆಡೆ ವ್ಯಕ್ತವಾಗುತ್ತಿದೆ ಎಂದೇ ಹೇಳಬಹುದು.
ಇದನ್ನೂ ಓದಿ : ನಡು ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಟ್ಯಾಂಕರ್ : ಅಸಲಿಗೆ ಆಗಿದ್ದೇನು?