IPL ಫೈನಲ್‌ ಪ್ರವೇಶಿಸಿದ ಆರ್‌ಸಿಬಿಗೆ ವಿಜಯ್‌ ಮಲ್ಯ ಸ್ಪೆಷಲ್​ ವಿಶ್.. ಏನಂದ್ರು ಗೊತ್ತಾ?

ಪಂಜಾಬ್‌ ವಿರುದ್ಧ ಭರ್ಜರಿ ಗೆಲವು ಸಾಧಿಸಿ ಫೈನಲ್​ಗೆ ಲಗ್ಗೆ ಇಟ್ಟ ಆರ್‌ಸಿಬಿ ತಂಡಕ್ಕೆ ಉದ್ಯಮಿ ವಿಜಯ್ ಮಲ್ಯ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

“ಪಂಜಾಬ್‌ ವಿರುದ್ಧ ಸರ್ವಾಧಿಕಾರದ ಗೆಲುವು ಸಾಧಿಸಿ ಐಪಿಎಲ್ ಫೈನಲ್‌ಗೆ ಪ್ರವೇಶಿಸಿದ್ದಕ್ಕಾಗಿ ಆರ್‌ಸಿಬಿಗೆ ಅಭಿನಂದನೆಗಳು. ಹೆಚ್ಚಿನ ಒತ್ತಡದ ಸ್ಪರ್ಧೆಯಲ್ಲಿ ಅತ್ಯುತ್ತಮ ಆಲ್-ರೌಂಡ್ ಪ್ರದರ್ಶನ ಬಂದಿದೆ. ಧೈರ್ಯದಿಂದ ಆಟವಾಡಿ ಮತ್ತು ಕಪ್‌ ಗೆಲ್ಲಿ” ಎಂದು ಶುಭ ಹಾರೈಸಿದ್ದಾರೆ.

ನಿನ್ನೆ ನಡೆದ ಐಪಿಎಲ್‌ 2025ರ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ಆರ್‌ಸಿಬಿ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಐಪಿಎಲ್‌ ಇತಿಹಾಸದಲ್ಲಿ ನಾಲ್ಕನೇ ಬಾರಿಗೆ ಆರ್‌ಸಿಬಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್‌ 14.1 ಓವರ್‌ಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು ಕೇವಲ 101 ರನ್‌ ಗಳಿಸಿತು. ಆರ್‌ಸಿಬಿ 10 ಓವರ್‌ಗೆ ಗುರಿ ತಲುಪಿ ಗೆದ್ದು ಬೀಗಿದೆ.

ಇದನ್ನೂ ಓದಿ : ಪಂಜಾಬ್ ಕಿಂಗ್ಸ್‌ ವಿರುದ್ಧ ರೋಚಕ ಜಯ – 9 ವರ್ಷಗಳ ಬಳಿಕ ಫೈನಲ್​ಗೆ ‘ರಾಯಲ್’ ಎಂಟ್ರಿ ಕೊಟ್ಟ RCB!

Btv Kannada
Author: Btv Kannada

Read More