Download Our App

Follow us

Home » Uncategorized » ಬಳ್ಳಾರಿಯಲ್ಲಿ ನಡೀತು ಕಿರಾತಕ ಫಿಲ್ಮಿ ಸ್ಟೈಲ್​​​ ಮ್ಯಾರೇಜ್​​​.. ಕಾರಿನಲ್ಲೇ ಹಾರ ಬದಲಾಯಿಸಿ ಮದ್ವೆಯಾದ ಪ್ರೇಮಿ..!

ಬಳ್ಳಾರಿಯಲ್ಲಿ ನಡೀತು ಕಿರಾತಕ ಫಿಲ್ಮಿ ಸ್ಟೈಲ್​​​ ಮ್ಯಾರೇಜ್​​​.. ಕಾರಿನಲ್ಲೇ ಹಾರ ಬದಲಾಯಿಸಿ ಮದ್ವೆಯಾದ ಪ್ರೇಮಿ..!

ಬಳ್ಳಾರಿ : ಇದು ಸಿನಿಮಾ ಅಲ್ಲಾ ರೀ.. ರಿಯಲ್​ ಸ್ಟೋರಿಯಾಗಿದ್ದು, ಥೇಟ್​ ಸಿನಿಮಾ ಸೀನ್​​​  ರಿಪೀಟ್​ ಆಗಿದೆ. ಬಳ್ಳಾರಿಯಲ್ಲಿ ಕಿರಾತಕ ಫಿಲ್ಮಿ ಸ್ಟೈಲ್​ನಲ್ಲಿ ಮ್ಯಾರೇಜ್​​​ ನಡೆದಿದ್ದು, ಕಾರಿನಲ್ಲೇ ಹಾರ ಬದಲಿಸಿ  ಪ್ರೇಮಿಗಳು ಮದುವೆಯಾಗಿದ್ದಾರೆ.

ಪೋಷಕರ ವಿರೋಧದ ನಡುವೆಯೂ ಬಳ್ಳಾರಿ ತೆಕ್ಕಲಕೋಟೆ ಯುವಕ, ಕೊಪ್ಪಳದ ಯುವತಿ ಮದುವೆಯಾಗಿದ್ದಾರೆ. ಶಿವಪ್ರಸಾದ್​ ಎಂಬಾತ ಕಾರ್​​ನಲ್ಲೇ ಮ್ಯಾರೇಜ್​ ಆದ ಪ್ರಿಯಕರ. ಯುವತಿ ಪೋಷಕರ ವಿರೋಧ ಹಿನ್ನೆಲೆ ಶಾಂತಿಧಾಮಕ್ಕೆ ಶಿಫ್ಟ್​ ಆಗಿದ್ದಳು, ಯುವತಿ ಒಮ್ಮೆ ಪ್ರೇಮಿ, ಮತ್ತೊಮ್ಮೆ ಪೋಷಕರು ಬೇಕು ಎನ್ನುತ್ತಿದ್ದಳು. ಎರಡೂ ಕಡೆ ಪೋಷಕರಿಂದ ಶಾಂತಿಧಾಮದ ಮುಂದೆಯೇ ವಾಗ್ವಾದ ನಡೆದಿದೆ.  ಗಂಡ ಬೇಕು ಎಂದವಳ ಬಲವಂತವಾಗಿ ಎಳೆದೊಯ್ಯಲು ಪೋಷಕರು ಯತ್ನಿಸಿದ್ದಾರೆ. ಪೊಲೀಸರ ಮುಂದೆಯೇ ಹೈಡ್ರಾಮಾ ನಡೆದಿದೆ. ಯುವಕ ಹೆಂಡ್ತಿ ಬೇಕು, ರಕ್ಷಣೆ ಬೇಕು ಎಂದು ಶಾಂತಿಧಾಮದ ಮುಂದೆ ಕುಳಿತಿದ್ದನು. ಹೀಗಾಗಿ ಪೋಷಕರು ಸಾಂತ್ವನ ಕೇಂದ್ರದಲ್ಲೇ ಯುವತಿಯನ್ನು ಬಿಟ್ಟು ಹೋಗಿದ್ದಾರೆ.

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here