Download Our App

Follow us

Home » ಅಪರಾಧ » ಬಿಬಿಎಂಪಿ‌ ಅಕ್ರಮ ಖಾತಾ ಹಗರಣ : ಇಬ್ಬರು ಅಧಿಕಾರಿಗಳ ವಿರುದ್ಧ FIR..!

ಬಿಬಿಎಂಪಿ‌ ಅಕ್ರಮ ಖಾತಾ ಹಗರಣ : ಇಬ್ಬರು ಅಧಿಕಾರಿಗಳ ವಿರುದ್ಧ FIR..!

ಬೆಂಗಳೂರು : ಬಿಬಿಎಂಪಿ‌ ಅಕ್ರಮ ಖಾತಾ ಹಗರಣ ಸಂಬಂಧ ಇಬ್ಬರು ಅಧಿಕಾರಿಗಳ ವಿರುದ್ಧ FIR ದಾಖಲಾಗಿದೆ. ಅಕ್ರಮವಾಗಿ ಖಾತಾ ಹಗರಣ ಮಾಡಿದ್ದ ಕಂದಾಯಾಧಿಕಾರಿ ಬಸವರಾಜ ಮಗಿ ಅರೆಸ್ಟ್​ ಆಗಿದ್ದರು. ಮತ್ತೊಬ್ಬ ಸಹಾಯಕ ಕಂದಾಯ ಅಧಿಕಾರಿ‌ ದೇವರಾಜ್ ನಾಪತ್ತೆಯಾಗಿದ್ದರು. ಇದೀಗ ಆರ್. ಆರ್ ನಗರ ಜಂಟಿ ಆಯುಕ್ತರ ದೂರಿನ‌ ಮೇರೆಗೆ ಇವರಿಬ್ಬರ ವಿರುದ್ಧ FIR ದಾಖಲಾಗಿದೆ.

ಬಸವರಾಜ ಮಗಿ ಹಾಗೂ ದೇವರಾಜ್ 200ಕ್ಕೂ ಹೆಚ್ಚು ಖಾತೆ ನಕಲಿ ಮಾಡಿದ್ದ ಆರೋಪ ಕೇಳಿಬಂದಿದೆ. ಅರೆಸ್ಟ್​ ಆಗಿದ್ದ ಬಸವರಾಜ ಮಗಿ ಅನಾರೋಗ್ಯ ನೆಪ ಹೇಳಿ‌ ಜೈಲಿನಿಂದ ತಪ್ಪಿಸಿಕೊಂಡಿದ್ದರು. ಇವರು ಆಸ್ಪತ್ರೆಗೆ ದಾಖಲಾದ ಬಳಿಕ ಜೈಲ್​ಗೆ ಶಿಫ್ಟ್ ಆಗುವ ಸಾಧ್ಯತೆಯಿದೆ.

ಸಹಾಯಕ‌ ಕಂದಾಯ ಅಧಿಕಾರಿ ದೇವರಾಜ್ ನಾಪತ್ತೆಯಾಗಿದ್ದು, ಆರ್ .ಆರ್ ನಗರ ಪೊಲೀಸರಿಂದ ದೇವರಾಜ್ ಪತ್ತೆಗೆ ತಂಡ ರಚನೆಯಾಗಿದೆ. ಇನ್ನೂ ಈ ಅಕ್ರಮಕ್ಕೆ ಸಾಥ್​ ಕೊಟ್ಟ ಮತ್ತಷ್ಟು ಅಧಿಕಾರಿ, ಸಿಬ್ಬಂದಿ ಕೂಡ ಅರೆಸ್ಟ್ ಆಗುವ ಸಾಧ್ಯತೆಯಿದೆ. ಬಿ ಖಾತಾಗಳಿಗೆ ಅಕ್ರಮವಾಗಿ ಎ ಖಾತ ನೀಡಿ ಕೋಟಿ-ಕೋಟಿ ಲೂಟಿ ಆರೋಪ ಮಾಡಿರುವ ಆರೋಪ ವ್ಯಕ್ತವಾಗಿದೆ.

ಇದನ್ನೂ ಓದಿ : ಬೆಂಗಳೂರು ಗ್ರಾಮಾಂತರಕ್ಕೆ ಮೈತ್ರಿ ಅಭ್ಯರ್ಥಿ ಬಗ್ಗೆ ಮಹತ್ವದ ಚರ್ಚೆ ನಡೆಸಿದ ಬಿಜೆಪಿ, ಜೆಡಿಎಸ್ ನಾಯಕರು..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here