Download Our App

Follow us

Home » ಸಿನಿಮಾ » ನಟಿ ದೀಪಿಕಾ ದಾಸ್ ಮದುವೆ ಫೋಟೋ ನೋಡಿ ಶೈನ್ ಶೆಟ್ಟಿಗೆ ಕರಿಮಣಿ ಮಾಲೀಕ ನೀನಲ್ಲ ಎಂದ ನೆಟ್ಟಿಗರು..!

ನಟಿ ದೀಪಿಕಾ ದಾಸ್ ಮದುವೆ ಫೋಟೋ ನೋಡಿ ಶೈನ್ ಶೆಟ್ಟಿಗೆ ಕರಿಮಣಿ ಮಾಲೀಕ ನೀನಲ್ಲ ಎಂದ ನೆಟ್ಟಿಗರು..!

ಕಿರುತೆರೆ ನಟಿ, ಬಿಗ್​ಬಾಸ್ ಖ್ಯಾತಿಯ ದೀಪಿಕಾ ದಾಸ್ ಸದ್ದಿಲ್ಲದೇ ಹಸೆಮಣೆ ಏರಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮದುವೆ ಫೋಟೊಗಳನ್ನು ಹಂಚಿಕೊಂಡಿರುವ ದೀಪಿಕಾ ದಾಸ್ ತಮ್ಮ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ. ದೀಪಿಕಾ ದಾಸ್ ಮದುವೆ ಫೋಟೋ ವೈರಲ್ ಆಗ್ತಿದ್ದಂತೆ ಶೈನ್ ಶೆಟ್ಟಿಗೆ ಕರಿಮಣಿ ಮಾಲೀಕ ನೀನಲ್ಲ ಎಂದು ನೆಟ್ಟಿಗರು ಹೇಳಿದ್ದಾರೆ.

ಆದರೂ ಇದು ನಿಜ ಮದುವೆಯಾ? ಅಥವಾ ಶೂಟಿಂಗ್ ಫೋಟೋಗಳಾ ಎಂದು ನೆಟ್ಟಿಗರು ಕನ್​​ಫ್ಯೂಸ್ ಆಗಿದ್ದಾರೆ. ಆದರೆ ಪೋಸ್ಟ್ ನೋಡಿದರೆ ರಿಯಲ್ ಮದುವೆಯಂತಿದೆ. ಹೌದು.. ಮೂರು ಫೋಟೋಗಳನ್ನು ಹಂಚಿಕೊಂಡಿರುವ ದೀಪಿಕಾ ದಾಸ್ ಮಿಸ್ಟರ್ & ಮಿಸೆಸ್ ಡಿ ಎಂದು ಕ್ಯಾಪ್ಷನ್ ನೀಡಿದ್ದಾರೆ. ನಟಿ ದೀಪಿಕಾ ದಾಸ್ ಗೋವಾದಲ್ಲಿ ಮದುವೆ ಮಾಡಿಕೊಂಡಿದ್ದು, ವೆಲ್‌ಕಮ್‌ ಟು ಅಡ್ವೆಂಚರ್ ವರ್ಲ್ಡ್ ಎಂದು ಬರೆದುಕೊಂಡಿದ್ದಾರೆ.

ನಟಿಯ ಬೀಚ್ ವೆಡ್ಡಿಂಗ್ ಡೆಕೊರೇಷನ್ಸ್ ಸೇರಿದಂತೆ ಉಳಿದೆಲ್ಲ ಸಿದ್ಧತೆಗಳು ಅದ್ಧೂರಿಯಾಗಿದ್ದವು. ಕಡಲ ತೀರದಲ್ಲಿ ದೀಪಿಕಾ ದಾಸ್ ಬಿಳಿ ಬಣ್ಣದ ಕೇಸರಿ ಅಂಚಿನ ಸೀರೆಯನ್ನು ಉಟ್ಟಿದ್ದರು. ಆಕರ್ಷಕವಾದ ವರಮಾಲೆ ಧರಿಸಿ ಸುಂದರವಾಗಿ ವಧುವಾಗಿ ಕಂಗೊಳಿಸಿದ್ದಾರೆ.

ವರನ ಕೈ ಹಿಡಿದುಕೊಂಡು ಖುಷಿಯಿಂದ ಹೆಜ್ಜೆ ಹಾಕುತ್ತಿದ್ದ ದೃಶ್ಯ ಫೋಟೋದಲ್ಲಿ ಸೆರೆಯಾಗಿದೆ. ಮದುವೆಯ ಮೂರು ಫೋಟೋಗಳನ್ನು ಶೇರ್ ಮಾಡಿ ದೀಪಿಕಾ ಅವರು ಕಮೆಂಟ್ ಬಾಕ್ಸ್ ಆಫ್ ಮಾಡಿದ್ದಾರೆ.

ಇದನ್ನೂ ಓದಿ : ಟೈಮರ್ ಫಿಕ್ಸ್ ಮಾಡಿ ಬಾಂಬ್​ ಬ್ಲಾಸ್ಟ್ ಮಾಡಿಸಿದ್ದಾರೆ : ಸಿಎಂ ಸಿದ್ದರಾಮಯ್ಯ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here