ರಾಜಸ್ತಾನ : 20 ವರ್ಷಗಳ ಹಿಂದೆ ಸರ್ಕಾರಿ ಅಧಿಕಾರಿಗೆ ಗನ್ ತೋರಿಸಿ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜಸ್ತಾನದ ಅಂತಾ ವಿಧಾನಸಭಾ ಕ್ಷೇತ್ರದ ಶಾಸಕ ಕನ್ವರ್ ಲಾಲ್ ಮೀನಾ ಅವರ ಎಂಎಲ್ಎ ಸ್ಥಾನ ಶುಕ್ರವಾರ ರದ್ದಾಗಿದೆ.
ಈ ಬಗ್ಗೆ ವಿಧಾನಸಭೆಯ ಕಾರ್ಯದರ್ಶಿ ಅಧಿಕೃತ ಆದೇಶ ಹೊಡಿಸಿದ್ದಾರೆ. ಮೇ 1ರಿಂದ ಕನ್ವರ್ ಲಾಲ್ ಮೀನಾ ಅವರ ಶಾಸಕ ಸ್ಥಾನ ರದ್ದಾಗಿದೆ ಎಂದು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಸ್ಪೀಕರ್ ಅವರು ವಕೀಲರಿಂದ ಕಾನೂನು ಸಲಹೆ ಪಡೆದು ಈ ಕ್ರಮ ಕೈಗೊಂಡಿದ್ದಾರೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ.
![]()
20 ವರ್ಷಗಳ ಹಿಂದೆ ಸರ್ಕಾರಿ ಅಧಿಕಾರಿಗೆ ಗನ್ ತೊರಿಸಿ ಬೆದರಿಸಿದ ಆರೋಪದ ಹಿನ್ನೆಲೆಯಲ್ಲಿ ಕನ್ವರ್ ಲಾಲ್ ಮೀನಾ ಮೇಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ್ದ ಜಲವಾರ್ ನ್ಯಾಯಾಲಯ 2020ರ ಡಿಸೆಂಬರ್ನಲ್ಲಿ ಕನ್ವರ್ ಲಾಲ್ ಮೀನಾಗೆ ಮೂರು ವರ್ಷಗಳ ಶಿಕ್ಷೆ ವಿಧಿಸಿತ್ತು.
ಇದನ್ನು ಪ್ರಶ್ನಿಸಿ ಕನ್ನರ್ ಲಾಲ್ ಮೀನಾ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಸುಪ್ರೀಂ ಕೋರ್ಟ್ ಕೂಡ ಸ್ಥಳೀಯ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿತ್ತು. ಶಾಸಕ ಸ್ಥಾನವನ್ನು ಉಳಿಸಿಕೊಳ್ಳಲು ಕನ್ವರ್ ಲಾಲ್ ಶಿಕ್ಷೆ ಪ್ರಮಾಣವನ್ನು 23 ತಿಂಗಳಿಗೆ ಇಳಿಸುವಂತೆ ಮನವಿ ಮಾಡಿದ್ದರು. ಅಂತಿಮವಾಗಿ ಸುಪ್ರೀಂ ಕೋರ್ಟ್ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿಯಿತು.
ಸದ್ಯ ಕನ್ವರ್ ಲಾಲ್ ಮೀನಾ ಮೇ 21ರಿಂದ ಜಲವಾರ್ ಜೈಲಿನಲ್ಲಿದ್ದಾರೆ. ಇನ್ನು ಮೂರು ವರ್ಷಗಳ ಕಾಲ ಅವರು ಜೈಲು ಶಿಕ್ಷೆ ಅನುಭವಿಸಲಿದ್ದಾರೆ. ಜನಪ್ರತಿನಿಧಿಗಳ ಕಾಯ್ದೆ ಪ್ರಕಾರ ಎರಡು ವರ್ಷದ ಒಳಗಿನ ಶಿಕ್ಷೆಗೆ ಶಾಸಕ ಸ್ಥಾನ ರದ್ದಾಗುವುದಿಲ್ಲ.
ಇದನ್ನೂ ಓದಿ : ಇಂದು ಸಿಇಟಿ ಫಲಿತಾಂಶ – ಎಷ್ಟು ಗಂಟೆಗೆ? ರಿಸಲ್ಟ್ ಚೆಕ್ ಮಾಡೋದು ಹೇಗೆ? ಇಲ್ಲಿದೆ ಡೀಟೇಲ್ಸ್!







