ಬೆಂಗಳೂರು : ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಆರೋಪ ಕೇಸ್ ತನಿಖೆ ಪೊಲೀಸರಿಗೆ ದೊಡ್ಡ ತಲೆನೋವಾಗಿದೆ. ಈ ಪ್ರಕರಣವನ್ನು ಪೊಲೀಸರು ತೀವ್ರವಾಗಿ ತನಿಖೆ ನಡೆಸುತ್ತಿದ್ದಾರೆ.
ರಾಜ್ಯಸಭಾ ಸದಸ್ಯ ನಾಸೀರ್ ಬೆಂಬಲಿಗರನ್ನು ಪೊಲೀಸರು ವಿಚಾರಣೆ ಮಾಡಿ, 8 ಜನರ ಧ್ವನಿ ಮಾದರಿ ಸಂಗ್ರಹಿಸಿ FSLಗೆ ರವಾನಿಸಿದ್ದರು. ಇದೀಗ FSLಗೆ ಕಳಿಸಿರೋ ಆಡಿಯೋ ವಿಡಿಯೋದಲ್ಲಿ ಕನ್ಫ್ಯೂಷನ್ ಶುರುವಾಗಿದೆ. ಪೊಲೀಸರು 2 ನಿಮಿಷದ ಆಡಿಯೋ, ವಿಡಿಯೋ ಪೂಟೇಜ್ ಕೊಟ್ಟಿದ್ದು, ಪೊಲೀಸರು ಕೊಟ್ಟ ಪೂಟೇಜ್ನಲ್ಲಿ ಧ್ವನಿ ಪತ್ತೆಯಾಗ್ತಿಲ್ಲ.
ವಿಡಿಯೋ, ಆಡಿಯೋಗೆ ತಾಳೆ ಆಗ್ತಿಲ್ಲ ಎಂದು FSL ಟೀಂ ತಿಳಿಸಿದೆ. ಹಾಗಾಗಿ FSL ಅಧಿಕಾರಿಗಳು ಮತ್ತಷ್ಟು ವಿಡಿಯೋ ಫೂಟೇಜ್ ಕೇಳಿದ್ದಾರೆ. ಕಬ್ಬನ್ ಪಾರ್ಕ್ ACPಗಳಿಂದ ಮಹಮದ್ ಶಫಿ ನಾಶಿಪುಡಿ ಸೇರಿದಂತೆ 8 ಜನರ ವಿಚಾರಣೆ ನಡೆಯುತ್ತಿದೆ. ನಾಸೀರ್ ಅವರ 27 ಜನ ಬೆಂಬಲಿಗರಲ್ಲಿ 8 ಜನರನ್ನ ವಿಚಾರಣೆ ನಡಸಿ ಪೊಲೀಸರು ಮಾಹಿತಿ ಕೇಳಿದ್ದಾರೆ. ಉಳಿದಂತೆ 21 ಜನರಿಗೆ ವಿಚಾರಣೆ ಸಲುವಾಗಿ ನೊಟೀಸ್ ನೀಡಿದ್ದಾರೆ.
FSL ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ವಿಚಾರಣೆ ವೇಳೆ ಪಾಕ್ ಪರ ಘೋಷಣೆ ಕೂಗಿಲ್ಲ ಎಂದು ಆರೋಪಿಗಳು ಹೇಳಿದ್ದಾರೆ. ಯಾವುದೇ ಕ್ಷಣ FSL ರಿಪೋರ್ಟ್ ಬರುವ ಸಾಧ್ಯತೆಯಿದೆ.
ಇದನ್ನೂ ಓದಿ : ಸಂಸದ ಉಮೇಶ್ ಜಾಧವ್ ಬಲಗೈ ಬಂಟನ ಬರ್ಬರ ಹ*ತ್ಯೆ..!