Download Our App

Follow us

Home » ಮೆಟ್ರೋ » ರಾಜಾಜಿನಗರ ಮೆಟ್ರೋದಲ್ಲಿ ರೈತನಿಗೆ ಅಪಮಾನ ಪ್ರಕರಣ : ಮಾನವ ಹಕ್ಕುಗಳ ಆಯೋಗದಿಂದ BMRCLಗೆ ನೋಟಿಸ್​..!

ರಾಜಾಜಿನಗರ ಮೆಟ್ರೋದಲ್ಲಿ ರೈತನಿಗೆ ಅಪಮಾನ ಪ್ರಕರಣ : ಮಾನವ ಹಕ್ಕುಗಳ ಆಯೋಗದಿಂದ BMRCLಗೆ ನೋಟಿಸ್​..!

ಬೆಂಗಳೂರು : ಕೊಳೆ ಬಟ್ಟೆ ಧರಿಸಿದ್ದ ರೈತರೊಬ್ಬರಿಗೆ ಮೆಟ್ರೋ ನಿಲ್ದಾಣದೊಳಗೆ ಬಿಡದೇ ಭದ್ರತಾ ಸಿಬ್ಬಂದಿ ಅಮಾನವೀಯವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನವ ಹಕ್ಕು ಆಯೋಗವು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.

ಮಾನವ ಹಕ್ಕುಗಳ ಆಯೋಗದಿಂದ BMRCLಗೆ ನೋಟಿಸ್​ ಜಾರಿಯಾಗಿದೆ. ವ್ಯಕ್ತಿಯ ಬಟ್ಟೆ ಆಧಾರದ ಮೇಲೆ ಸಾರ್ವಜನಿಕ ಸಾರಿಗೆಯಲ್ಲಿ ನಿರ್ಬಂಧಿಸುವಂತಿಲ್ಲ,
ಪ್ರವೇಶ ಅವಕಾಶ ನಿರಾಕರಣೆ ಮಾಡಿರುವುದು ಮಾನವ ಹಕ್ಕು ಉಲ್ಲಂಘನೆಯಾಗಿದೆ. ಈ ಘಟನೆ ಬಗ್ಗೆ ವರದಿ ನೀಡುವಂತೆ BMRCL ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್​ ಜಾರಿಯಾಗಿದೆ.

ನಾಲ್ಕು ವಾರದಲ್ಲಿ ವರದಿ ಕೊಡಲು ಮಾನವ ಹಕ್ಕು ಆಯೋಗ ಸೂಚನೆ ನೀಡಿದೆ. ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ರೈತನಿಗೆ ಪ್ರವೇಶ ನಿರಾಕರಿಸಿದ ಪ್ರಕರಣ ಸೋಷಿಯಲ್​ ಮೀಡಿಯಾ ಸೇರಿ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಘಟನೆ ಸಂಬಂಧ ಭದ್ರತಾ ಸೂಪರ್​ವೈಸರ್​​ನ್ನು BMRCL​ ವಜಾ ಮಾಡಿದೆ.

ಇದನ್ನೂ ಓದಿ : ನೆಲಮಂಗಲದಲ್ಲಿ ಕುಖ್ಯಾತ ಮನೆಗಳ್ಳ ಅರೆಸ್ಟ್ : ಬರೋಬ್ಬರಿ 25 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here