ಬೆಂಗಳೂರು : ಯುವಕನೊಬ್ಬ ಮೆಡಿಕಲ್ ಶಾಪ್ನಲ್ಲಿ ಹಫ್ತಾ ವಸೂಲಿಗಾಗಿ ಹೈಡ್ರಾಮ ನಡೆಸಿದ ಘಟನೆ ಬೆಂಗಳೂರಿನ ಡಿಜೆ ಹಳ್ಳಿಯ ಪ್ರಿಯಾನಗರದಲ್ಲಿ ನಡೆದಿದೆ. ಇದೀಗ ಯುವಕನ ಪುಂಡಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಬೆಂಗಳೂರಿನ ಡಿಜೆ ಹಳ್ಳಿಯ ಪ್ರಿಯಾನಗರ ಮೆಡಿಕಲ್ ಶಾಪ್ವೊಂದರಲ್ಲಿ ಹಫ್ತಾ ವಸೂಲಿಗಾಗಿ ವೃದ್ಧರೊಬ್ಬರಿಗೆ ಕಿರುಕುಳ ನೀಡಲಾಗಿದೆ. ರಿಝ್ವಾನ್ ಮೆಡಿಕಲ್ ಶಾಪ್ ಬಳಿ ಯುವಕನೊಬ್ಬ ಹುಚ್ಚನಂತೆ ವರ್ತನೆ ಮಾಡಿ ಹೈಡ್ರಾಮ ನಡೆಸಿದ್ದಾನೆ.
ಯುವಕನ ಹುಚ್ಚಾಟ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರೋಲ್ ಕಾಲ್ ಕೊಡದಿದ್ದರೆ ಹಲ್ಲೆ ನಡೆಸೋದಾಗಿ ಪುಂಡ ಬೆದರಿಕೆ ಹಾಕಿದ್ದಾನಂತೆ. ಡಿಜೆ ಹಳ್ಳಿ ಠಾಣೆ ಪೊಲೀಸರು ಸಿಸಿಟಿವಿ ಪರಿಶೀಲನೆ ಮಾಡಿದ್ದಾರೆ.
ಇದನ್ನೂ ಓದಿ : ಕುಂಬಳಗೋಡು ಪರ್ಫ್ಯೂಮ್ ಕಾರ್ಖಾನೆ ಅಗ್ನಿ ದುರಂತ : ಸಾ*ವಿನ ಸಂಖ್ಯೆ 5ಕ್ಕೆ ಏರಿಕೆ..!
Post Views: 271