ರಾಕಿಂಗ್ ಸ್ಟಾರ್ ಯಶ್ ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಿಂದ ಬಂದ ವ್ಯಕ್ತಿ. ಇದೀಗ ಸ್ಟಾರ್ ಆಗಿದ್ದಾರೆ. ಹೀಗಿದ್ದರೂ, ಸರಳತೆಯ ವಿಚಾರದಲ್ಲಿ ಯಶ್ ಸದಾ ಮುಂದು. ಇತ್ತೀಚೆಗಷ್ಟೇ ಭಟ್ಕಳದ ಬಳಿಯ ಚಿತ್ರಾಪುರಕ್ಕೆ ಕುಟುಂಬ ಸಮೇತ ತೆರಳಿದ್ದರು. ಈ ವೇಳೆ ಸಾಮಾನ್ಯನಂತೆ ಎಲ್ಲೆಂದರಲ್ಲಿ ಓಡಾಡಿದ್ದಾರೆ. ರಸ್ತೆ ಬದಿಯ ಅಂಗಡಿಯಲ್ಲಿ ಪತ್ನಿಗೆ ಐಸ್ ಕ್ಯಾಂಡಿ ಕೊಡಿಸಿದ್ದಾರೆ.
ನಟ ಯಶ್, ರಾಧಿಕಾ ಪಂಡಿತ್ ಇತ್ತೀಚೆಗಷ್ಟೇ ಉತ್ತರ ಕನ್ನಡದ ಭಟ್ಕಳ ತಾಲೂಕಿನ ಚಿತ್ರಾಪುರ ಮಠಕ್ಕೆ ಕುಟುಂಬ ಸಮೇತ ಭೇಟಿ ನೀಡಿದ್ದರು. ಮಠದ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಗಳನ್ನೂ ಭೇಟಿ ಮಾಡಿ, ಸ್ವಾಮೀಜಿಗಳ ಜತೆಗೆ ಒಂದಷ್ಟು ಹೊತ್ತು ಸಮಯ ಕಳೆದಿದ್ದಾರೆ.
ಹೀಗೆ ಯಶ್ ಮಠಕ್ಕೆ ಬಂದಿದ್ದಾರೆ ಎಂಬ ಸುದ್ದಿ ತಿಳಿದ ಅವರ ನೂರಾರು ಅಭಿಮಾನಿಗಳು, ಮಠದ ಆವರಣದ ಬಳಿ ಜಮಾಯಿಸಿದರು. ಯಶ್ ಕಂಡೊಡನೆ ಅವರ ಬಳಿ ಕೈ ಬೀಸಿ ಅಭಿಮಾನ ಮೆರೆದರು. ಇದೆಲ್ಲದಕ್ಕಿಂತ ವಿಶೇಷ ಏನೆಂದರೆ, ಗುರುವಾರ ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಿದ್ದ ಯಶ್ ಕುಟುಂಬ, ಬಿಡುವಿನ ಸಮಯವನ್ನು ಸಖತ್ ಎಂಜಾಯ್ ಮಾಡಿದ್ದಾರೆ.
ಪತ್ನಿ ರಾಧಿಕಾ ಪಂಡಿತ್ಗೆ ರಸ್ತೆ ಬದಿಯ ಅಂಗಡಿಯಲ್ಲಿನ ಐಸ್ ಕ್ಯಾಂಡಿ ಕೊಡಿಸಿದ್ದಾರೆ. ಅದೇ ಅಂಗಡಿ ಮುಂದೆಯೇ ಕುಳಿತು ಐಸ್ ಕ್ಯಾಂಡಿ ಸವಿದಿದ್ದಾರೆ ರಾಧಿಕಾ. ಸದ್ಯ ಯಶ್ ಅವರ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಅವರ ಅಭಿಮಾನಿಗಳು ಸರಳತೆಯ ಸಾಹುಕಾರ ಎಂದು ಕೊಂಡಾಡುತ್ತಿದ್ದಾರೆ. ಗುರುವಾರ ಮಠಕ್ಕೆ ಆಗಮಿಸಿ, ಶುಕ್ರವಾರ ಬೆಳಗ್ಗೆ ಎಂದಿನಂತೆ ಬೆಂಗಳೂರಿನತ್ತ ಇಡೀ ಕುಟುಂಬ ಪ್ರಯಾಣ ಬೆಳೆಸಿದೆ.
ಇದನ್ನೂ ಓದಿ : ಹಾವೇರಿ : ಹೆಂಡತಿ ಜೊತೆ ಅಕ್ರಮ ಸಂಬಂಧ ಶಂಕೆ – ತಮ್ಮನ ಎದೆಗೆ ಚೂರಿ ಇರಿದು ಕೊಂ*ದ ಅಣ್ಣ..!