ಬೆಂಗಳೂರು : ರಾಜ್ಯ ಬಜೆಟ್ 2024-25ಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಸಿಎಂ ಸಿದ್ದರಾಮಯ್ಯನವರು ಇಂದು ಬೆಳಗ್ಗೆ 10:15ಕ್ಕೆ ಬಜೆಟ್ ಮಂಡನೆ ಮಾಡಲಿದ್ದಾರೆ. ಸಿದ್ದರಾಮಯ್ಯ ಮಂಡಿಸುತ್ತಿರುವ 15ನೇ ಬಜೆಟ್ ಇದಾಗಿದ್ದು, ಈ ಬಾರಿ 3.80 ಲಕ್ಷ ಕೋಟಿ ಬಜೆಟ್ ಮಂಡಿಸಲಿದ್ದಾರೆ. ತೆರಿಗೆ ಹೊರೆ ಇಲ್ಲದಂತೆ ಗ್ಯಾರಂಟಿಯೇತರ ಯೋಜನೆಗಳಿಗೆ ಬಜೆಟ್ನಲ್ಲಿ ಹೆಚ್ಚು ಒತ್ತು ನೀಡುವ ಸಾಧ್ಯತೆಯಿದೆ.
ಸಿಎಂ ಮಂಡಿಸಲಿರುವ ಈ ಬಜೆಟ್ ಮೇಲೆ ಹಲವಾರು ನಿರೀಕ್ಷೆಗಳಿದ್ದು, ಯಾರಿಗೆಲ್ಲಾ ಬಂಪರ್ ಗಿಫ್ಟ್ ಸಿಗಲಿದೆ ಎಂಬುದನ್ನು ಕಾದುನೋಡಬೇಕಿದೆ. ಕರ್ನಾಟಕದ ಮಟ್ಟಿಗೆ ಇದೊಂದು ಹೊಸ ದಾಖಲೆಯಾಗಿದೆ. ಲೋಕಸಭೆ ಚುನಾವಣೆಗೆ ಹೊತ್ತಲ್ಲೇ ಬಜೆಟ್ ಮಂಡನೆ ಮಾಡುತ್ತಿರುವುದರಿಂದ ಮಹತ್ವದ ಘೋಷಣೆಗಳು ಹೊರಬೀಳುವ ನಿರೀಕ್ಷೆಗಳಿವೆ.
ಕಳೆದ ಬಾರಿ 3 ಲಕ್ಷದ 27 ಸಾವಿರ ಕೋಟಿ ಗಾತ್ರದ ಬಜೆಟ್ ಮಂಡನೆ ಮಾಡಿದ್ದು, ಈ ವರ್ಷ 3.80 ಲಕ್ಷ ಕೋಟಿಗೂ ಹೆಚ್ಚು ಗಾತ್ರದ ಬಜೆಟ್ ಮಂಡನೆಯಾಗಲಿದೆ. ಹಾಗಾಗಿ ಬೆಂಗಳೂರಿಗೆ ಭರಪೂರ ಅನುದಾನದ ನಿರೀಕ್ಷೆಯಿದ್ದು, ಲೋಕಸಭಾ ಚುನಾವಣಾ ಹೊತ್ತಲ್ಲಿ ಬಂಪರ್ ಘೋಷಣೆಗಳನ್ನು ಮಾಡುವ ಸಾಧ್ಯತೆ ಇದೆ.
ಬೆಂಗಳೂರಿಗೆ ಸಿಗುತ್ತಾ 45,000 ಕೋಟಿ..?
- ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಹೊಸ ಯೋಜನೆ
- ಬ್ರಾಂಡ್ ಬೆಂಗಳೂರುಗೆ 45,000 ಕೋಟಿ ಅನುದಾನ ನಿರೀಕ್ಷೆ
- ಬೆಂಗಳೂರು ಟನಲ್ ನಿರ್ಮಾಣಕ್ಕೆ ಬಜೆಟ್ನಲ್ಲಿ ಹಣ ಮೀಸಲು
- ನಮ್ಮ ಮೆಟ್ರೋಗೆ 30,000 ಕೋಟಿ ನೀಡುವ ಸಾಧ್ಯತೆ..
- ಬೆಂಗಳೂರು ಅಥವಾ ಕಲಬುರಗಿಯಲ್ಲಿ ವಚನ ಮಂಟಪ ನಿರ್ಮಾಣ
- ನಮ್ಮ ಮೆಟ್ರೋದ 3ನೇ ಹಂತದ ವಿಸ್ತರಣೆಗಾಗಿ 1000 ಕೋಟಿ
- ಜೆಪಿ ನಗರ 4ನೇ ಹಂತ-ಕೆಂಪಾಪು, ಹೊಸಹಳ್ಳಿ-ಕಡಬಗೆರೆ ಮಾರ್ಗ ನಿರ್ಮಾಣ
- ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ನೀರು, ಒಳಚರಂಡಿ ವ್ಯವಸ್ಥೆ
ಇದನ್ನೂ ಓದಿ : ಇಂದು ದಾಖಲೆಯ ಬಜೆಟ್ ಮಂಡಿಸಲಿದ್ದಾರೆ ಸಿಎಂ ಸಿದ್ದರಾಮಯ್ಯ..!