ಕಲಬುರಗಿ : ವಿವಿ ಗ್ರಂಥಾಲಯದಲ್ಲಿ ಸರಸ್ವತಿ ಪೂಜೆ ಮಾಡಲು ವಿದ್ಯಾರ್ಥಿಯೊಬ್ಬ ವಿರೋಧ ವ್ಯಕ್ತಪಡಿಸಿರುವ ಆರೋಪ ಕೇಳಿಬಂದಿದೆ. ಕಲಬುರಗಿ ಕೇಂದ್ರೀಯ ಗ್ರಂಥಾಲಯದಲ್ಲಿ ಈ ಘಟನೆ ನಡೆದಿದೆ.
ವಸಂತ ಪಂಚಮಿ ಹಿನ್ನೆಲೆಯಿಂದಾಗಿ ಇಂದು ಕಲಬುರಗಿ ಕೇಂದ್ರೀಯ ಗ್ರಂಥಾಲಯದ ಸಿಬ್ಬಂದಿ ಸರಸ್ವತಿ ಮೂರ್ತಿಗೆ ಪೂಜೆ ಸಲ್ಲಿಸಲು ಮುಂದಾಗಿದ್ದರು. ಈ ವೇಳೆ ಮಧ್ಯಪ್ರವೇಶಿಸಿದ ಸಂಶೋಧನಾ ವಿದ್ಯಾರ್ಥಿ ನಂದಕುಮಾರ ಪೂಜೆಗೆ ಅಡ್ಡಿಪಡಿಸಿದ್ದಾನೆ.
ಇದು ವಿಶ್ವವಿದ್ಯಾಲಯವೋ ಅಥವಾ ದೇವಸ್ಥಾನನಾ ಎಂದು ಪ್ರಶ್ನೆ ಮಾಡಿ ಪೂಜೆ ಸಲ್ಲಿಸಲು ವಿದ್ಯಾರ್ಥಿ ಅಡ್ಡಿಪಡಿಸಿದ್ದಾನೆ. ಪೂಜೆಗೆ ಅಡ್ಡಿಪಡಿಸಿದ ಜೊತೆಗೆ ವಿದ್ಯಾ ದೇವತೆ ಸರಸ್ವತಿ ಬಗ್ಗೆ ಅವಹೇಳಕಾರಿಯಾಗಿ ನಂದಕುಮಾರ್ ಮಾತನಾಡಿದ್ದಾನೆ ಎಂಬ ಆರೋಪಗಳು ಕೇಳಿ ಬಂದಿವೆ.
ವಿದ್ಯಾದೇವತೆ ಸರಸ್ವತಿಯ ಮೂರ್ತಿ ಪೂಜೆಗೆ ಅಡ್ಡಿ ಪಡಿಸಿರುವ ಎಡಪಂಥಿಯ ವಿಚಾರ ಧಾರೆಯ ವಿದ್ಯಾರ್ಥಿ ನಂದಕುಮಾರ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಂದಕುಮಾರ್ ಪೂಜೆಗೆ ಅಡ್ಡಿಪಡಿಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ನಂದಕುಮಾರ್ ನಡೆಯ ಬಗ್ಗೆ ಪರ-ವಿರೋಧದ ಚರ್ಚೆಗಳು ನಡೆಯುತ್ತಿದೆ.
ಇದನ್ನೂ ಓದಿ : ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿದ ಸುಪ್ರೀಂಕೋರ್ಟ್..!