Download Our App

Follow us

Home » ರಾಜಕೀಯ » ರಾಜ್ಯಸಭೆ ಚುನಾವಣೆಗೆ 5ನೇ ಮೈತ್ರಿ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಕಣಕ್ಕೆ..!

ರಾಜ್ಯಸಭೆ ಚುನಾವಣೆಗೆ 5ನೇ ಮೈತ್ರಿ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಕಣಕ್ಕೆ..!

ಬೆಂಗಳೂರು : ರಾಜ್ಯಸಭೆ ಚುನಾವಣಾ ಅಖಾಡಕ್ಕೆ ಐದನೇ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಅವರು ಕಣಕ್ಕಿಳಿಯೋದು ಫಿಕ್ಸ್ ಆಗಿದೆ. ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿಯವರು ಕುಪೇಂದ್ರ ರೆಡ್ಡಿ ಸ್ಪರ್ಧೆ ಬಗ್ಗೆ ಘೋಷಿಸಿದ್ದಾರೆ. ಮೈತ್ರಿ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಸ್ಪರ್ಧಿಸಲಿದ್ದಾರೆ.

ಕುಪೇಂದ್ರ ರೆಡ್ಡಿ ಸ್ಪರ್ಧೆ ಘೋಷಣೆ ನಂತರ ಕಾಂಗ್ರೆಸ್​ನ ಲೆಕ್ಕಾಚಾರ ಹೆಚ್ಚಾಗಿದೆ. ಮೂರನೇ ಅಭ್ಯರ್ಥಿ ಆಯ್ಕೆ ಮಾಡಿಕೊಳ್ಳಲು ಕಾಂಗ್ರೆಸ್ ಹೊಸಾ ಪ್ಲಾನ್​​​ ಮಾಡ್ತಿದೆ. ಮೂರನೇ ಅಭ್ಯರ್ಥಿಗೆ ಒಂದು ಅಥವಾ ಎರಡು ಮತ ಕೊರತೆ ಆಗಬಹುದು, ಹೀಗಾಗಿ ಮತಗಳ ಕ್ರೋಢೀಕರಣಕ್ಕೆ ಕಾಂಗ್ರೆಸ್ ಪ್ಲಾನ್​ ಮಾಡ್ತಿದೆ.
ಜೆಡಿಎಸ್​, ಬಿಜೆಪಿಯಿಂದಲೇ ಕೆಲವರ ಸೆಳೆಯೋ ಪ್ಲಾನ್​ ಮಾಡ್ತಿದ್ದಾರೆ.

ರಾಜ್ಯದ ನಾಲ್ಕು ಸ್ಥಾನಗಳಿಗೆ ಫೆಬ್ರವರಿ 27ಕ್ಕೆ ಚುನಾವಣೆ ನಡೆಯಲಿದ್ದು, ಈಗಾಗಲೇ ಕಾಂಗ್ರೆಸ್​, ಬಿಜೆಪಿಯಿಂದ ಅಭ್ಯರ್ಥಿಗಳ ಆಯ್ಕೆಯಾಗಿದೆ. ಕಾಂಗ್ರೆಸ್​ನಿಂದ ಮೂರು, ಬಿಜೆಪಿಯಿಂದ ಒಬ್ಬರ ಹೆಸರು ಘೋಷಣೆಯಾಗಿದ್ದು, ಒಬ್ಬ ಅಭ್ಯರ್ಥಿ ಗೆಲ್ಲಿಸಿಕೊಳ್ಳಲು 45 ಮತಗಳ ಅಗತ್ಯ ಇದೆ.

ಕಾಂಗ್ರೆಸ್​ ಬಳಿ 135 ಶಾಸಕರಿದ್ದಾರೆ, ಮೂವರ ಆಯ್ಕೆ ಸಲೀಸಾಗಿದ್ದು, ಬಿಜೆಪಿ ಬಳಿ 66 ಶಾಸಕರಿದ್ದು ಒಬ್ಬರ ಆಯ್ಕೆ ಸುಗಮವಾಗಿದೆ. ಬಿಜೆಪಿ ಬಳಿ 19, ಜೆಡಿಎಸ್​ ಬಳಿ 19 ಶಾಸಕರು ಉಳಿಯಲಿದ್ದಾರೆ, ಇಬ್ಬರು ಪಕ್ಷೇತರರು​, ಕಾಂಗ್ರೆಸ್​ನ ಅಸಮಾಧಾನಿತರ ಬೆಂಬಲದ ತಂತ್ರ ರೂಪಿಸಲಿದ್ದಾರೆ. ಇದೀಗ ಕೊನೆ ಕ್ಷಣದಲ್ಲಿ ಐದನೇ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಕಣಕ್ಕಿಳಿಯೋದು ಫಿಕ್ಸ್ ಆಗಿದೆ.

ಕಾಂಗ್ರೆಸ್ ಅಭ್ಯರ್ಥಿಗಳು : ಕಾಂಗ್ರೆಸ್​ನಿಂದ ಮೂವರು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ದೆಹಲಿಯ ಕಾಂಗ್ರೆಸ್​ ನಾಯಕ ಅಜಯ್​ ಮಕೇನ್​​​​​, ಈಗಾಗಲೇ ರಾಜ್ಯಸಭೆ ಸದಸ್ಯರಾಗಿರುವ ಡಾ.ನಾಸೀರ್​​​ ಹುಸೇನ್​​​, ಜಿ.ಸಿ.ಚಂದ್ರಶೇಖರ್​ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸುತ್ತಿದೆ. ಇಂದು ಕಾಂಗ್ರೆಸ್​ನ ಮೂವರೂ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ಗೋಲ್ಡ್ ಕಂಪನಿಗೆ ನುಗ್ಗಿ ಸುಮಾರು 250 ಗ್ರಾಂ ಚಿನ್ನ, 1.8 ಲಕ್ಷ ನಗದು ದೋಚಿದ ಖತರ್ನಾಕ್ ಕಳ್ಳರು..!

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here