Download Our App

Follow us

Home » ಅಪರಾಧ » ಯೂಟ್ಯೂಬ್ ನೋಡಿ ಕಳ್ಳತನ ಮಾಡ್ತಿದ್ದ ಕಿಲಾಡಿ ಕಳ್ಳ ಅರೆಸ್ಟ್..!

ಯೂಟ್ಯೂಬ್ ನೋಡಿ ಕಳ್ಳತನ ಮಾಡ್ತಿದ್ದ ಕಿಲಾಡಿ ಕಳ್ಳ ಅರೆಸ್ಟ್..!

ಬೆಂಗಳೂರು : ಯೂಟ್ಯೂಬ್ ನೋಡಿ ಕಳ್ಳತನ ಮಾಡ್ತಿದ್ದ ಕಿಲಾಡಿ ಕಳ್ಳನೊಬ್ಬ ಪೊಲೀಸ್ ಠಾಣೆ ಮುಂದೆಯೇ ಮನೆ ಮಾಡಿಕೊಂಡಿದ್ದ. ಈ ಐನಾತಿ ಕಳ್ಳ ಪೊಲೀಸ್ ಸಿಬ್ಬಂದಿ ಜತೆ ಸಲುಗೆ ಬೆಳೆಸಿ ತಾನೇ ಕದ್ದ ಜಾಗಕ್ಕೆ ಭೇಟಿ ಕೊಡ್ತಿದ್ದ. ಈ ವೇಳೆ ಕಳ್ಳ, ಕದ್ದ ಬಳಿಕ ಸಾಕ್ಷಿ ನಾಶದ ಬಗ್ಗೆ ತಿಳಿದುಕೊಳ್ತಿದ್ದ.

ನಟೋರಿಯಸ್ ಕಳ್ಳ ಸುನೀಲ್​​ನ್ನು ಇದೀಗ ಮೈಕೋ ಲೇಔಟ್ ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ. ಸುನೀಲ್​​ ಮನೆ ಕಳವು ಮಾಡಿಯೇ ಬೈಕ್​ ಖರೀದಿ ಮಾಡಿದ್ದ. ಕಿಲಾಡಿ ಕಳ್ಳ ಯೂಟ್ಯೂಬ್ ನೋಡಿಕೊಂಡು ಅದೇ ರೀತಿ ಕಳ್ಳತನ ಮಾಡ್ತಿದ್ದ. ಕೈಗೆ ಗ್ಲೌಸ್ ಬಳಸಿ ಕೃತ್ಯ ಎಸಗಿ ಪೊಲೀಸರ ಚಲನವಲನ ವೀಕ್ಷಿಸುತ್ತಿದ್ದ.

ಒಮ್ಮೊಮ್ಮೆ ಫ್ರೆಂಡ್ಲಿಯಾಗಿ ಪೊಲೀಸರ ಜೊತೆ ಕದ್ದ ಮನೆಗೇ ಹೋಗ್ತಿದ್ದ. ಈ ಚಾಲಾಕಿ ಕಳ್ಳ 3 ವರ್ಷದಲ್ಲಿ ನಾಲ್ಕು ಮನೆ ಕಳವು ಮಾಡಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈತನನ್ನು ಪೊಲೀಸರು ರೆಡ್​ ಹ್ಯಾಂಡ್​ ಆಗಿ ಹಿಡಿದು ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ : ಬೆಂಗಳೂರು : ಮದುವೆಯಾಗಿ ಎರಡೇ ವರ್ಷದಲ್ಲಿ ಆ*ತ್ಮಹ*ತ್ಯೆಗೆ ಶರಣಾದ ಗೃಹಿಣಿ..!

Leave a Comment

DG Ad

RELATED LATEST NEWS

Top Headlines

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ : ಪುರುಷರ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟ ನವದೀಪ್ ಸಿಂಗ್..!

ಪ್ಯಾರಿಸ್ : ಪ್ಯಾರಾಲಿಂಪಿಕ್ಸ್​ನಲ್ಲಿ ಶನಿವಾರ ನಡೆದ ಪುರುಷರ ಜಾವೆಲಿನ್ ಥ್ರೋ ಎಫ್​41 ಸ್ಪರ್ಧೆಯಲ್ಲಿ ಭಾರತದ ಜಾವೆಲಿನ್ ಎಸೆತಗಾರ ನವದೀಪ್ ಸಿಂಗ್ ಚಿನ್ನದ ಪದಕ ಗೆದ್ದಿದ್ದಾರೆ. 47.32 ಮೀಟರ್‌ ದೂರಕ್ಕೆ

Live Cricket

Add Your Heading Text Here