Download Our App

Follow us

Home » ಅಪರಾಧ » ಅಮೃತಹಳ್ಳಿ ಠಾಣೆ ಮೇಲೆ ಮಾನವ ಹಕ್ಕು ಆಯೋಗ ದಾಳಿ‌ ಕೇಸ್ : ಪೊಲೀಸ್ ಇನ್ಸ್​ಪೆಕ್ಟರ್ ಅಂಬರೀಶ್​ಗೆ ನೋಟಿಸ್ ಜಾರಿ..!

ಅಮೃತಹಳ್ಳಿ ಠಾಣೆ ಮೇಲೆ ಮಾನವ ಹಕ್ಕು ಆಯೋಗ ದಾಳಿ‌ ಕೇಸ್ : ಪೊಲೀಸ್ ಇನ್ಸ್​ಪೆಕ್ಟರ್ ಅಂಬರೀಶ್​ಗೆ ನೋಟಿಸ್ ಜಾರಿ..!

ಬೆಂಗಳೂರು : ಆರೋಪಿಯನ್ನು 9 ದಿನಗಳ ಕಾಲ ಅಕ್ರಮವಾಗಿ ‌ಬಂಧನದಲ್ಲಿಟ್ಟುಕೊಂಡಿದ್ದ ಆರೋಪದಡಿ ಅಮೃತಹಳ್ಳಿ ಠಾಣೆ ಮೇಲೆ ಮಾನವ ಹಕ್ಕು ಆಯೋಗ ದಾಳಿ‌ ಮಾಡಿತ್ತು. ಇದೀಗ ಮಾನವ ಹಕ್ಕುಗಳ ಆಯೋಗ ಇನ್ಸ್​ಪೆಕ್ಟರ್ ಅಂಬರೀಶ್​ಗೆ ನೋಟಿಸ್ ಜಾರಿ ಮಾಡಿದೆ.

ಅಕ್ರಮ ಬಂಧನ ಪ್ರಕರಣದ ಸಂಬಂಧ ಡಿಟೇಲ್ಸ್ ನೀಡುವಂತೆ ನೋಟಿಸ್ ನೀಡಿದೆ. ಹಾಗೆಯೇ ನಾಳೆ ಮಾನವಹಕ್ಕುಗಳ ಆಯೋಗದ ಕಚೇರಿಗೆ ಹಾಜರಾಗುವಂತೆ ಸೂಚನೆ ನೀಡಿದೆ. ಈ ಬಗ್ಗೆ DySP ಸುಧೀರ್ ಹೆಗಡೆ ತಂಡದಿಂದ ವಿಚಾರಣೆ ನಡೆದಿದ್ದು, ವಾರಂಟ್ ಜಾರಿಯಾಗಿದ್ದ ಆರೋಪಿ ಯಾಸಿನ್ ಮೆಹಬೂಬ್​ ಖಾನ್​​​ ಎಂಬಾತನನ್ನು ಅಕ್ರಮವಾಗಿ ಬಂಧಿಸಿದ್ದರು.

ಯಾಸಿನ್ ಮೆಹಬೂಬ್​ ಖಾನ್​​ನ್ನು ಇನ್ಸ್​ಪೆಕ್ಟರ್​​ ಅಂಬರೀಶ್​ ಸೂಚನೆ ಮೇರೆಗೆ ಕರೆತಂದಿದ್ದ ಆರೋಪ ಕೇಳಿಬಂದಿದೆ. 9 ದಿನಗಳ ಕಾಲ ಇನ್ಸ್​ಪೆಕ್ಟರ್ ಅಂಬರೀಶ್ ಅಕ್ರಮವಾಗಿ ‌ಬಂಧನದಲ್ಲಿರಿಸಿದ್ದರು. ಆರೋಪಿಯನ್ನು ಬಂಧಿಸಲು ಕ್ರೈಂ ಕಾನ್​​ಸ್ಟೇಬಲ್​ಗಳು ಹಿರಿಯ ಅಧಿಕಾರಿಗಳ ಗಮನಕ್ಕೆ ತರದೇ ಮುಂಬೈಗೆ ಹೋಗಿದ್ರು.

ಕಾನ್​​ಸ್ಟೇಬಲ್​​ಗಳು ರೂಲ್ಸ್ ವೈಲೇಶನ್ ಮಾಡಿ ಅಕ್ರಮ ಬಂಧನದಲ್ಲಿ ಇಟ್ಟಿದ್ದು ಸಾಬೀತಾಗಿದ್ದು, ಕಮಿಷನರ್ ದಯಾನಂದ್ ಪ್ರಕರಣ ಸಂಬಂಧ ಡಿಸಿಪಿಯಿಂದ ವರದಿ ಕೇಳಿದ್ದಾರೆ. ಅಂಬರೀಶ್ ಕೆ.ಆರ್ ಪುರಂ ಇನ್ಸ್​ಪೆಕ್ಟರ್​ ಆಗಿದ್ದ ವೇಳೆ MLA ಗೆ ಬೆಳ್ಳಿ ಗಧೆ ನೀಡಿದ್ದರು. ಇದೇ ಇನ್ಸ್​ಪೆಕ್ಟರ್ ಅಂಬರೀಶ್ ಮೇಲೆ 3 ವರ್ಷಗಳ ಹಿಂದೆ ಗಂಭೀರ ಆರೋಪವಿತ್ತು.

ಇದನ್ನೂ ಓದಿ : ಇನ್ಮುಂದೆ 6 ವರ್ಷ ಮೇಲ್ಪಟ್ಟ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ..!

Leave a Comment

DG Ad

RELATED LATEST NEWS

Top Headlines

ಬೆಂಗಳೂರು : ಕುಡಿದ ಮತ್ತಲ್ಲಿ ಅಪಾರ್ಟ್​ಮೆಂಟ್​ನ ಬೇಸ್​ಮೆಂಟ್​​ನಲ್ಲಿ ಯುವಕರ ಮಧ್ಯೆ ಹೊಡೆದಾಟ – ವಿಡಿಯೋ ವೈರಲ್​..!

ಬೆಂಗಳೂರು : ಬೆಳಂದೂರಿನ ಜುನ್ನಸಂದ್ರದ ಅಪಾರ್ಟ್​ಮೆಂಟ್​ನ ಬೇಸ್​ಮೆಂಟ್​​ನಲ್ಲಿ ಯುವಕರ ಮಧ್ಯೆ ಗಲಾಟೆ ನಡೆದಿದೆ. ಕುಡಿದ ನಶೆಯಲ್ಲಿ ಹುಡುಗರು ಹೊಡೆದಾಡಿಕೊಂಡಿದ್ದು, ಪುಂಡರ ಕ್ವಾಟ್ಲೆಗೆ ಅಕ್ಕಪಕ್ಕದ ನಿವಾಸಿಗಳು ಹೈರಾಣಾಗಿದ್ದಾರೆ. ಯುವಕರ

Live Cricket

Add Your Heading Text Here