ಬೆಂಗಳೂರು : ಚಾಲಾಕಿ ಕಳ್ಳನೊಬ್ಬ ಮಟ ಮಟ ಮಧ್ಯಾಹ್ನವೇ ಚಿನ್ನಾಭರಣ ಕದ್ದಿರುವ ಘಟನೆ ಶೇಷಾದ್ರಿಪುರಂ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಫೆ. 4ರಂದು ರಾಜಸ್ಥಾನ ಮೂಲದ ಮಂಜುಳಾ ದೇವಿ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಫೆ. 4ರಂದು ಮಂಜುಳಾ ಕುಟುಂಬ ಹುಟ್ಟೂರು ರಾಜಸ್ಥಾನಕ್ಕೆ ಹೋಗಿತ್ತು, ಹಾಗಾಗಿ ಬೃಹತ್ ಬಂಗಲೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಕಳ್ಳ ಚಿನ್ನಾಭರಣ ಕದ್ದಿದ್ದಾನೆ. ಮಂಜುಳಾ ದೇವಿ ಮನೆಗೆ ಡಿಜಿಟಲ್ ಲಾಕ್, ಹತ್ತೋಕು ಮೆಟ್ಟಿಲಿಲ್ಲ, ಬಾಗಿಲಂತೂ ಕಾಣೋದೆ ಇಲ್ಲ ಆದ್ರೂ ಬಂಗಲೆಗೆ ನುಗ್ಗಿ ಕಳ್ಳ ಕೈಚಳಕ ತೋರಿಸಿದ್ದಾನೆ.
ಮುಖಕ್ಕೆ ಮಾಸ್ಕ್ ಹಾಕಿಕೊಂಡು ಪಕ್ಕದ ಮನೆ ಹತ್ತಿ ಜಂಪ್ ಮಾಡಿ ಎಂಟ್ರಿ ಕೊಟ್ಟು ಗ್ರಿಲ್ ಕಟ್ ಮಾಡಿ ಕಳ್ಳತನ ಮಾಡಿದ್ದಾನೆ. ಎರಡು ಮೂರು ದಿನ ಸತತವಾಗಿ ಕಳ್ಳ ಬಂಗಲೆ ವಾಚ್ ಮಾಡಿದ್ದ. ಮನೇಲಿ ಯಾರೂ ಇಲ್ಲ ಅಂತಾ ಗೊತ್ತಾಗ್ತಿದ್ದ ಹಾಗೆ ಕಳ್ಳ ಮನೆಗೆ ನುಗ್ಗಿದ್ದಾನೆ.
ಮನೆಯಲ್ಲಿದ್ದ 2.250ಗ್ರಾಂ ಚಿನ್ನ, ಬೆಳ್ಳಿ ವಸ್ತುಗಳು ಕಳ್ಳತನವಾಗಿದ್ದು, ಚಿನ್ನದ ಬಿಸ್ಕತ್, ಚಿನ್ನಾಭರಣಗಳು, ಬೆಳ್ಳಿಯ ಲೋಟಗಳು, ಬೆಳ್ಳಿಯ ಹಸುವೊಂದನ್ನ ಚಾಲಾಕಿ ಕಳ್ಳ ಕದ್ದಿದ್ದಾನೆ.
ಮಂಜುಳಾ ಕುಟುಂಬ ರಾಜಸ್ಥಾನದಿಂದ ವಾಪಸ್ ಬಂದಾಗ ಈ ಘಟನೆ ತಿಳಿದಿದೆ. ಸದ್ಯ ಮನೆ ಮಾಲೀಕರು ಘಟನೆ ಸಂಬಂಧ ಶೇಷಾದ್ರಿಪುರಂ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಮತ್ತೆ ಬಿಜೆಪಿ ತೆಕ್ಕೆಗೆ ಚಂದ್ರಬಾಬು ನಾಯ್ಡು : NDA ಮೈತ್ರಿಕೂಟ ಸೇರಲು ಅಮಿತ್ ಶಾ ಜೊತೆ ಮಹತ್ವದ ಮೀಟಿಂಗ್..!