ಧಾರವಾಡ : ಹೋಟೆಲ್ವೊಂದರಲ್ಲಿ ಕುಕ್ ಆಗಿದ್ದ ಯುವಕನನ್ನು ರಾಡ್‌ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ನಗರದ ಭೋವಿಗಲ್ಲಿಯಲ್ಲಿ ನಡೆದಿದೆ. ಫಕಿರೇಶ್ ಪ್ಯಾಟಿ ಹತ್ಯೆಯಾದ ದುರ್ದೈವಿಯಾಗಿದ್ದಾನೆ.
ಸದ್ಯ ಕೊಲೆ ಮಾಡಿರುವ ಆರೋಪಿ ದಾಂಡೇಲಿ ಮೂಲದ ಕನ್ಯಯ್ಯನನ್ನು ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ. ಈ ಇಬ್ಬರು ನಗರದಲ್ಲಿರುವ ವಿಮಲ್ ಎಗ್ ರೈಸ್ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದರು.
ಕೊಲೆಯಾದ ಯುವಕ ಕುಕ್ ಆಗಿದ್ದನು. ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದ್ದು, ಗಲಾಟೆ ತಾರಕಕ್ಕೇರುತ್ತಿದ್ದಂತೆ ಆರೋಪಿಯು, ಯುವಕ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದಾನೆ.
ಇದರಿಂದ ನೆಲಕ್ಕೆ ಬಿದ್ದು ತಲೆಯಲ್ಲಿ ರಕ್ತ ಸುರಿದು ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸದ್ಯ ಈ ಸಂಬಂಧ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಶಹರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಕಾಂಗ್ರೆಸ್ನ ದೆಹಲಿ ಚಲೋಗೆ ಬಿಜೆಪಿಯಿಂದಲೂ ಸೆಡ್ಡು : ರಾಜ್ಯದಲ್ಲಿ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ..!