Download Our App

Follow us

Home » ರಾಜಕೀಯ » ಆಪರೇಷನ್ ‘ದಳ’ಕ್ಕೆ ಕೈ ಹಾಕಿದ್ರಾ ಡಿಕೆಶಿ ? – ಸಂಕ್ರಾಂತಿ ಮುಗಿಯುತ್ತಿದ್ದಂತೆ ಜೆಡಿಎಸ್​ಗೆ ಮೆಗಾ ಸರ್ಜರಿ ಫಿಕ್ಸ್​?

ಆಪರೇಷನ್ ‘ದಳ’ಕ್ಕೆ ಕೈ ಹಾಕಿದ್ರಾ ಡಿಕೆಶಿ ? – ಸಂಕ್ರಾಂತಿ ಮುಗಿಯುತ್ತಿದ್ದಂತೆ ಜೆಡಿಎಸ್​ಗೆ ಮೆಗಾ ಸರ್ಜರಿ ಫಿಕ್ಸ್​?

ಬೆಂಗಳೂರು : ಒಂದು ಕಡೆ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಸಿದ್ದರಾಮಯ್ಯ ಬಣ & ಡಿಸಿಎಂ ಡಿಕೆ ಶಿವಕುಮಾರ್​ ಬಣದ ಡಿನ್ನರ್ ಪಾಲಿಟಿಕ್ಸ್ ಜೋರು ಮಾಡುತ್ತಿದ್ರೆ ಇನ್ನೊಂದೆಡೆ ಡಿಸಿಎಂ ಡಿಕೆಶಿ ಅವರು ಆಪರೇಷನ್​ ಜೆಡಿಎಸ್​ಗೆ ಕೈ ಹಾಕಿದ್ದಾರೆ ಅನ್ನೋ ಚರ್ಚೆಗಳು ಭಾರೀ ಸಂಚಲನ ಸೃಷ್ಟಿಸಿದೆ. ಜೆಡಿಎಸ್​ನ 2/3 ಶಾಸಕರಿಗೆ ಡಿಕೆ ಶಿವಕುಮಾರ್ ಗಾಳ ಹಾಕಿದ್ದು ಸಂಕ್ರಾಂತಿ ಹಬ್ಬ ಮುಗಿಯುತ್ತಿದ್ದಂತೆಯೇ ಜೆಡಿಎಸ್​ಗೆ ಮೆಗಾ ಸರ್ಜರಿ ಮಾಡುವ ಆಲೋಚನೆ ಕನಕಪುರದ ಬಂಡೆಗೆ ಇದೆ ಎಂಬ ಸುದ್ದಿ ಜೋರು ಮಾಡ್ತಿದೆ.

ಪಕ್ಷಾಂತರ ಕಾಯ್ದೆಗೆ ಧಕ್ಕೆಯಾಗದಂತೆ, ಉಪಚುನಾವಣೆಗಳ ಗೊಡವೆಯೇ ಎದುರಾಗದಂತೆ ಜೆಡಿಎಸ್‌ನ ಮೂರನೇ ಎರಡು ಭಾಗದಷ್ಟು ಶಾಸಕರ ಸೆಳೆಯಲು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಗಂಭೀರ ಪ್ರಯತ್ನ ನಡೆಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಒಟ್ಟು 18 ಶಾಸಕರ ಪೈಕಿ ಮೂರನೇ ಎರಡು ಭಾಗ ಅಂದರೆ, 12ಕ್ಕಿಂತ ಹೆಚ್ಚು ಶಾಸಕರನ್ನು ಸೆಳೆಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ಶಿವಕುಮಾರ್‌ ಪ್ರಯತ್ನ ನಡೆಸಿದ್ದು, ಇದರ ಕೊನೆ ಹಂತದಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ನಿನ್ನೆ ದೆಹಲಿಯಲ್ಲಿ ಕುಮಾರಸ್ವಾಮಿ -ಜಾರಕಿಹೊಳಿ ಮೆಗಾ ಮೀಟಿಂಗ್ ಮಾಡಿದ್ದಾರೆ. ತಮ್ಮನ್ನು ಭೇಟಿ ಮಾಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಬಣದ ಮುಖಂಡರ ಪೈಕಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ತಮ್ಮ ನಿವಾಸಕ್ಕೆ ಉಪಹಾರಕ್ಕಾಗಿ ಆಹ್ವಾನಿಸಿದ ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಈ ವಿಷಯ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.

ಈಗಾಗಲೇ ಶಿವಕುಮಾರ್‌ ನಮ್ಮ ಪಕ್ಷದ ಶಾಸಕರನ್ನು ಸಂಪರ್ಕಿಸಿ ಭಾರಿ ಪ್ರಮಾಣದ ಆಮಿಷ ಒಡ್ಡಿದ್ದಾರೆ. ಕಾಂಗ್ರೆಸ್‌ಗೆ ವಲಸೆ ಹೋಗುವುದಿಲ್ಲ ಎಂಬುದಾಗಿ ನಮ್ಮ ಶಾಸಕರು ಹೇಳುತ್ತಿದ್ದಾರೆ. ಆದರೂ ಅದನ್ನು ಪೂರ್ಣ ಪ್ರಮಾಣದಲ್ಲಿ ನಂಬುವುದು ಕಷ್ಟವಾಗುತ್ತಿದೆ. ಇದನ್ನು ಹೇಗಾದರೂ ತಡೆಗಟ್ಟಬೇಕು ಎಂಬ ಅಭಿಪ್ರಾಯವನ್ನು ಕುಮಾರಸ್ವಾಮಿ ಅವರು ಬೇಸರದಿಂದ ವ್ಯಕ್ತಪಡಿಸಿದ್ದಾರೆ ಎನ್ನಲಾಗ್ತಿದೆ.

ನಮಗೆ ನೀವು ಸಹಾಯ ಮಾಡಿದ್ರೆ, ನಾವು ನಿಮಗೆ ಸಹಾಯ ಮಾಡ್ತೀವಿ ಎಂದು ಯತ್ನಾಳ್ ಬಣದ ಪರ ಸಾಹುಕಾರ್ ಮಾತು ಕೊಟ್ಟಿದ್ದಾರಂತೆ. ಈ ಬಗ್ಗೆ ವಿಸ್ತ್ರತವಾಗಿ ಚರ್ಚೆ ನಡೆಸಿದ ಕುಮಾರಸ್ವಾಮಿ ಮತ್ತು ಜಾರಕಿಹೊಳಿ ಅವರು ಜೆಡಿಎಸ್​ ಶಾಸಕರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಂತ್ರ ರೂಪಿಸುವ ನಿಲುವಿಗೆ ಬಂದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ಹೊಸ ವರ್ಷದ ಬಿಗ್​ ಆಫರ್​.. ಯಾರಿಗುಂಟು ಯಾರಿಗಿಲ್ಲ – ‘ಸೋನು’ ಜೊತೆ 24*7 ಇರಬಹುದಾದ ಸುವರ್ಣಾವಕಾಶ.. ಈಗಲೇ ಅರ್ಜಿ ಹಾಕಿ!

Leave a Comment

DG Ad

RELATED LATEST NEWS

Top Headlines

ಹುಬ್ಬಳ್ಳಿ : ಆಸ್ತಿಗಾಗಿ ತಂದೆ, ಮಲತಾಯಿಯನ್ನ ಕೊಚ್ಚಿ ಕೊಲೆಗೈದ ಮಗ..!

ಹುಬ್ಬಳ್ಳಿ : ಆಸ್ತಿಗಾಗಿ ಪುತ್ರನೊಬ್ಬ ತಂದೆ ಮತ್ತು ಮಲತಾಯಿಯನ್ನ ಕೊಚ್ಚಿ ಕೊಲೆಗೈದಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ನಡೆದಿದೆ. ತಂದೆ ಅಶೋಕ, ಮಲತಾಯಿ ಶಾರದಮ್ಮರನ್ನ ಪುತ್ರ

Live Cricket

Add Your Heading Text Here