Download Our App

Follow us

Home » ರಾಜ್ಯ » ಆತಂಕ ಶುರುವಾಗುವ ಮೊದಲೇ ಬೆಂಗಳೂರಿಗೆ ವಕ್ಕರಿಸಿದ HMPV – 8 ತಿಂಗಳ ಮಗುವಿನಲ್ಲಿ ವೈರಸ್ ಪತ್ತೆ..!

ಆತಂಕ ಶುರುವಾಗುವ ಮೊದಲೇ ಬೆಂಗಳೂರಿಗೆ ವಕ್ಕರಿಸಿದ HMPV – 8 ತಿಂಗಳ ಮಗುವಿನಲ್ಲಿ ವೈರಸ್ ಪತ್ತೆ..!

ಬೆಂಗಳೂರು : ಕೋವಿಡ್ ವೈರಸ್ ಕಾಣಿಸಿಕೊಂಡ ಐದು ವರ್ಷದ ಬಳಿಕ ಮತ್ತೆ ದೇಶದಲ್ಲಿ ವೈರಸ್ ಹಾವಳಿ ಶುರುವಾಗಿದೆ. ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ ಏಕಾಏಕಿ ಚೀನಾದಲ್ಲಿ ಹರಡುತ್ತಿದ್ದು, ಇದೀಗ ಬೆಂಗಳೂರಿಗೂ ಈ ವೈರಸ್ ಎಂಟ್ರಿ ಕೊಟ್ಟಿದೆ.

ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರೋ 8 ತಿಂಗಳ ಮಗುವಿನಲ್ಲಿ ವೈರಸ್ ಪತ್ತೆಯಾಗಿದೆ. ಮಗುವಿಗೆ ಜ್ವರ ಬಂದ ಕಾರಣ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರು. ಬ್ಲಡ್ ಟೆಸ್ಟ್ ಮಾಡಿದಾಗ ಮಗುವಿನಲ್ಲಿ ವೈರಸ್ ಪತ್ತೆಯಾಗಿದ್ದು, ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈರಸ್ ಪತ್ತೆಯಾಗಿರೋದನ್ನು ಆರೋಗ್ಯ ಇಲಾಖೆ ದೃಢ ಪಡಿಸಿದ್ದು, ಜನಸಾಮಾನ್ಯರು ಸದ್ಯಕ್ಕೆ ಆತಂಕ ಪಡೋ ಅಗತ್ಯ ಇಲ್ಲ ಎಂದು ಆರೋಗ್ಯ ಇಲಾಖೆ ಪ್ರ.ಕಾರ್ಯದರ್ಶಿ ಹರ್ಷಗುಪ್ತಾ ಹೇಳಿದ್ದಾರೆ.

ತೀವ್ರ ಚಳಿ ಆರಂಭವಾಗ್ತಿದ್ದಂತೆಯೇ ವೈರಸ್ ಅಟ್ಟಹಾಸ ಶುರುವಾಗಿದ್ದು, ಹೀಗಾಗಿ ಸರ್ಕಾರ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದೆ. ಈಗಾಗ್ಲೇ ಕೇಂದ್ರ ಸರ್ಕಾರ ರಾಜ್ಯಗಳಿಗೆ ವಾರ್ನಿಂಗ್ ಕೊಟ್ಟಿದ್ದು, ಆರೋಗ್ಯ ಇಲಾಖೆ ಇಂದು ಗೈಡ್​ಲೈನ್ಸ್ ರೂಪಿಸಲಿದೆ. ಇನ್ನು ಯಾವುದೇ ಕ್ಷಣದಿಂದ ಕರ್ನಾಟಕದಲ್ಲಿ ಮಾಸ್ಕ್ ಕಡ್ಡಾಯವಾಗುವ ಸಾಧ್ಯತೆಯಿದೆ.

ಇದನ್ನೂ ಓದಿ : ಹೊಸ ನಿಯಮ ಜಾರಿಗೆ ತಂದ ಓಯೋ.. ಇನ್ಮುಂದೆ ಅವಿವಾಹಿತ ಜೋಡಿಗೆ ಹೋಟೆಲ್‌ ರೂಮ್‌ ಇಲ್ಲ..!

Leave a Comment

DG Ad

RELATED LATEST NEWS

Top Headlines

ಹೆಂಡ್ತಿ ಮೇಲೆ ಗಂಡನಿಗೆ ಬೆಂಬಿಡದ ಅನುಮಾನದ ಭೂತ – ಪತ್ನಿಯ ಶೀಲ ಶಂಕಿಸಿ ಮೂವರ ಬರ್ಬರ ಹತ್ಯೆ!

ಬೆಂಗಳೂರು : ಸಿಲಿಕಾನ್​ ಸಿಟಿಯಲ್ಲಿ ಮೂವರ ಬರ್ಬರ ಹತ್ಯೆ ನಡೆದಿದೆ. ಜಾಲಹಳ್ಳಿ ಕ್ರಾಸ್ ಬಳಿ ತಾಯಿ ಹಾಗೂ ಇಬ್ಬರು ಮಕ್ಕಳ‌ನ್ನು ಕೊಲೆ ಮಾಡಲಾಗಿದೆ. ಪತ್ನಿಯ ಶೀಲ ಶಂಕಿಸಿ

Live Cricket

Add Your Heading Text Here