Download Our App

Follow us

Home » ಅಪರಾಧ » ಪ್ರೇಯಸಿ ಮನೆಯಿಂದ ಹಿಂತಿರುಗುವಾಗ ದುಷ್ಕರ್ಮಿಗಳ ಅಟ್ಯಾಕ್ – ಬಾಡಿ ಬಿಲ್ಡರ್ ಅಟ್ಟಾಡಿಸಿ​​ ಬರ್ಬರ ಹತ್ಯೆ..!

ಪ್ರೇಯಸಿ ಮನೆಯಿಂದ ಹಿಂತಿರುಗುವಾಗ ದುಷ್ಕರ್ಮಿಗಳ ಅಟ್ಯಾಕ್ – ಬಾಡಿ ಬಿಲ್ಡರ್ ಅಟ್ಟಾಡಿಸಿ​​ ಬರ್ಬರ ಹತ್ಯೆ..!

ಕೋಲಾರ : ವಿವಾಹಿತ ವ್ಯಕ್ತಿಯೊಬ್ಬ ಪ್ರೇಯಸಿ ಮನೆಗೆ ಹೋಗಿ ಹಿಂತಿರುಗುತ್ತಿದ್ದಾಗ ಹಂತಕರು ಅಟ್ಟಾಡಿಸಿ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಕೋಲಾರದ ನೂರ್ ನಗರದಲ್ಲಿ ನಡೆದಿದೆ. 28 ವರ್ಷದ ಉಸ್ಮಾನ್​​​​​​​​​ ಕೊಲೆಯಾದ ಬಾಡಿ ಬಿಲ್ಡರ್​​​.

ಉಸ್ಮಾನ್ ಕಳೆದ 5 ವರ್ಷಗಳ ಹಿಂದೆ ಯುವತಿಯೊಬ್ಬಳನ್ನು ಮದುವೆಯಾಗಿದ್ದ. ಆಕೆಗೆ ಕಿಡ್ನಿ ವಿಫಲವಾಗಿ ಅನಾರೋಗ್ಯದಿಂದ ಬಳಲುತ್ತಿದ್ದು, ಈ ವೇಳೆ ಆರೋಗ್ಯ ವಿಚಾರಿಸಲು ಬಂದಿದ್ದ ಪತ್ನಿಯ ಗೆಳತಿಯೊಂದಿಗೆ ಉಸ್ಮಾನ್‍ಗೆ ಪ್ರೀತಿಯಾಗಿದೆ. ಈ ವಿಷಯ ತಿಳಿದು ಆತನ ಪತ್ನಿ ಮಹಿಳಾ ಠಾಣೆಗೆ ದೂರು ನೀಡಿದ್ದಳು. ಬಳಿಕ ತನ್ನ ಪತಿಯಿಂದ ದೂರಾಗಿ ತವರು ಮನೆ ಸೇರಿದ್ದಳು.

ನಿನ್ನೆ ರಾತ್ರಿ ಪ್ರೇಯಸಿ ಮನೆಗೆ ಹೋಗಿ ವಾಪಸ್ ಆಗ್ತಿದ್ದ ಬಾಡಿ ಬಿಲ್ಡರ್ ಉಸ್ಮಾನ್​​ನ್ನು ಹಂತಕರು ನಡು ರಸ್ತೆಯಲ್ಲೇ ಅಟ್ಟಾಡಿಸಿ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಈ ಪ್ರಕರಣ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಇದನ್ನೂ ಓದಿ : ಕಾಂಗ್ರೆಸ್ ಸರ್ಕಾರದಿಂದ ಹಗಲು ದರೋಡೆ, ಬಸ್​ ದರ ಏರಿಸಿ ಗ್ಯಾರಂಟಿ ಕೊಟ್ರೆ ಏನ್​ ಪ್ರಯೋಜನ – ಹೆಚ್​​ಡಿಕೆ ಕಿಡಿ..!

Leave a Comment

DG Ad

RELATED LATEST NEWS

Top Headlines

“ರಾವಣಾಪುರ” ಟ್ರೇಲರ್ ರಿಲೀಸ್ – ಜ.17ಕ್ಕೆ ಸಿನಿಮಾ ರಿಲೀಸ್..!

ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಸಾಹಸಗಳು ನಡೆಯುತ್ತಲೇ ಇವೆ. ಆ ಪ್ರಯತ್ನಗಳು ಸೋತ್ರು ಗೆದ್ರು ಹೊಸಬರು ತಮ್ಮ ಪ್ರಯತ್ನ ನಿಲ್ಲಿಸುವುದಿಲ್ಲ. ಅದರಂತೆ ಈಗ ಹೊಸ ತಂಡವೊಂದು ಸೇರಿಕೊಂಡು

Live Cricket

Add Your Heading Text Here