ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11, ದಿನದಿಂದ ದಿನಕ್ಕೆ ರೋಚಕ ಘಟ್ಟ ತಲುಪುತ್ತಿದೆ. ಶನಿವಾರ ಬಂತೆಂದರೆ ಸಾಕು ಕಿಚ್ಚ ಸುದೀಪ್ ಅವರು, ಇಡೀ ವಾರ ಬಿಗ್ಬಾಸ್ ಮನೆಯಲ್ಲಿ ಏನೆಲ್ಲಾ ಆಯ್ತು, ಯಾರದ್ದು ಸರಿ, ಯಾರದ್ದು ತಪ್ಪು ಅಂತ ಕ್ಲಾಸ್ ತೆಗೆದುಕೊಳ್ಳೋದಕ್ಕೆ ಕಿಚ್ಚ ಸುದೀಪ್ ಅವರು ರೆಡಿಯಾಗಿದ್ದಾರೆ.
ಹೌದು, ಕಲರ್ಸ್ ಕನ್ನಡ ಇಂದಿನ ಸಂಚಿಕೆಯ ಹೊಸ ಪ್ರೋಮೋವನ್ನು ರಿಲೀಸ್ ಮಾಡಿದೆ. ಈ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಅವರು ಚೈತ್ರಾಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವಾರ ಚೈತ್ರಾ ಅವರು, ಉಸ್ತುವಾರಿ ಸರಿಯಾಗಿ ನಿರ್ವಹಿಸದ ಕಾರಣಕ್ಕೆ ಕಿಚ್ಚನ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ರಿಲೀಸ್ ಆದ ಹೊಸ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಮನೆ ಮಂದಿಗೆ ಒಂದು ಅವಕಾಶ ಕೊಟ್ಟಿದ್ದಾರೆ. ಯಾರಿಗೆಲ್ಲಾ ನಾಮಿನೇಷನ್ ಮಾಡುವ ಅವಕಾಶ ಸಿಕ್ಕಿಲ್ಲ ಈಗ ನಾನು ಕೊಡುತ್ತೇನೆ ತೊಗೆದುಕೊಳ್ಳಿ ಅಂತ ಹೇಳಿದ್ದಾರೆ. ಆಗ ಎಲ್ಲರೂ ಚೈತ್ರಾ ಕುಂದಾಪುರ ಅವರ ಹೆಸರನ್ನು ಹೇಳಿದ್ದಾರೆ. ಇದಕ್ಕೆ ಕೋಪಗೊಂಡ ಚೈತ್ರಾ ಮೂರು ಬಾರಿ ಕಳಪೆ ಕೊಡುತ್ತಾರೆ ಸರ್, ಆ ಮೂರು ಬಾರಿಯೂ ಉಸ್ತುವಾರಿ ಬಗ್ಗೆ ಕಾರಣ ಕೊಡುತ್ತಾರೆ. ಅದು ಒಳಗಡೆ ಎಷ್ಟು ಕುಗ್ಗಿಸುತ್ತೆ ಅಂತ ನಮಗೆ ಮಾತ್ರ ಗೊತ್ತು ಅಂತ ಕಣ್ಣೀರು ಹಾಕುತ್ತಾ ಹೇಳಿದ್ದಾರೆ.
ಇದಕ್ಕೆ ಕಿಚ್ಚ ಸುದೀಪ್ ಅವರು, ಯಾರು ನಿಮ್ಮನ್ನು ಕುಗ್ಗಿಸಿದ್ದಾರೆ ಹೇಳಿ ಅಂತ ನೇರವಾಗಿ ಕೇಳಿದ್ದಾರೆ. ಆಗ ಚೈತ್ರಾ, ಒಂದಿಷ್ಟು ಜನ ನನ್ನ ಮೇಲೆ ಒಪಿನಿಯನ್ ತೆಗೆದುಕೊಂಡಿದ್ದಾರೆ ಅದು ನನ್ನನ್ನು ಕುಗ್ಗುಸಿದೆ ಎಂದು ಹೇಳಿದ್ದಾರೆ. ಆಗ ಕಿಚ್ಚ ನೀವು ತೆಗೆದುಕೊಳ್ಳವ ಹೆಸರು ಅವರನ್ನು ಕುಗ್ಗಿಸುವುದಿಲ್ವ, ಬಾಣ ಕೊಡೋದಕ್ಕೆ ರೆಡಿ ಇದ್ದೀರಾ ಅಂದ್ಮೇಲೆ ಬಾಣ ತೆಗೆದುಕೊಳ್ಳುವುದಕ್ಕೆ ರೆಡಿ ಇಲ್ಲ ಅಂದ್ರೆ, ನೀವು ಈ ಆಟಕ್ಕೆ ಫಿಟ್ ಇಲ್ಲ ಅಂತ ಎಲ್ಲರ ಮುಂದೆಯೇ ಹೇಳಿದ್ದನು ಈ ಸಂಚಿಕೆಯಲ್ಲಿ ನೋಡಬಹುದು.
ಇದನ್ನೂ ಓದಿ : ಮಂಡ್ಯದಲ್ಲಿ ಲಾರಿ-ಕಾರು ನಡುವೆ ಭೀಕರ ಅಪಘಾತ – ಸ್ಥಳದಲ್ಲೇ ಮೂವರು ವಿದ್ಯಾರ್ಥಿಗಳ ದುರ್ಮರಣ..!