Download Our App

Follow us

Home » ಸಿನಿಮಾ » 10ನೇ ವಾರಕ್ಕೆ ಬಿಗ್​ಬಾಸ್ ಮನೆಯ ಕ್ಯಾಪ್ಟನ್​ ಆಗಿ ಹೊರಹೊಮ್ಮಿದ ಧನರಾಜ್..!

10ನೇ ವಾರಕ್ಕೆ ಬಿಗ್​ಬಾಸ್ ಮನೆಯ ಕ್ಯಾಪ್ಟನ್​ ಆಗಿ ಹೊರಹೊಮ್ಮಿದ ಧನರಾಜ್..!

ಕನ್ನಡ ಬಿಗ್​ಬಾಸ್ ಸೀಸನ್ 11ರ ಆಟ ರಂಗೇರಿದೆ. 60ನೇ ದಿನ್ಕಕೆ ಕಾಲಿಟ್ಟ ಬಿಗ್​ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಪಟ್ಟಕ್ಕಾಗಿ ಸ್ಪರ್ಧಿಗಳು ಹೋರಾಟ ನಡೆಸಿದ್ದಾರೆ. ಈ ವಾರ ಇಡೀ ಮನೆ ಬಿಗ್​ಬಾಸ್ ಸಾಮ್ರಾಜ್ಯವಾಗಿ ಬದಲಾಗಿ ಬಿಟ್ಟಿತ್ತು. ಮಹಾರಾಜ ಮಂಜಣ್ಣ ಹಾಗೂ ಯುವರಾಣಿ ಮೋಕ್ಷಿತಾ ತಂಡ ನಡುವೆ ಬಿಗ್​ ಫೈಟ್​ ನಡೆದಿತ್ತು.

ಕೊನೆಯ ಹಂತದಲ್ಲಿ ಮಹಾರಾಜ ಮಂಜಣ್ಣ ತಂಡ ಈ ವಾರದ ಕ್ಯಾಪ್ಟನ್ಸಿ ಓಟಕ್ಕೆ ಆಯ್ಕೆಯಾಗಿದ್ದರು. ​ಅದರಲ್ಲೂ ಮೋಕ್ಷಿತಾ ಅವರು ಕ್ಯಾಪ್ಟನ್ಸಿ ಓಟದಿಂದ ತ್ರೀವಿಕ್ರಮ್​ ಅವರನ್ನು ಆಚೆಗೆ ಇಟ್ಟಿದ್ದರು. ಅವರನ್ನು ಹೊರತುಪಡಿಸಿ ಮಂಜು, ಐಶ್ವರ್ಯ, ಭವ್ಯಾ, ಧನರಾಜ್​, ಗೌತಮಿ ಹಾಗೂ ಗೋಲ್ಡ್​ ಸುರೇಶ್ ಕ್ಯಾಪ್ಟನ್ಸಿ ಓಟಕ್ಕೆ ಆಯ್ಕೆಯಾಗಿದ್ದರು.

ಇನ್ನೂ, ಈ ಆರು ಮಂದಿಗೆ ಬಿಗ್​ಬಾಸ್​ ಟಾಸ್ಕ್​ವೊಂದನ್ನು ನೀಡಿದ್ದರು. ಕ್ಯಾಪ್ಟನ್ಸಿ ಆಡುವ 6 ಅಭ್ಯರ್ಥಿಗಳು ಅಂತಿಮ ಸ್ಥಾನದಲ್ಲಿ ತಮಗೆ ಮಿಸಲಿರುವ ಜಾಗದಲ್ಲಿ ನಿಲ್ಲಬೇಕು. ಟಾಸ್ಕ್​ ಆರಂಭವಾದ ಕೂಡಲೇ ಆರಂಭಿಕ ಸ್ಥಾನದಲ್ಲಿರೋ ಸದಸ್ಯರು ಒಂದು ಹಿಡಿಕೆಯನ್ನು ತೆಗೆದುಕೊಂಡು, ಲೋಟದಲ್ಲಿ ನೀರು ತುಂಬಿಸಿ, ಲೋಟವನ್ನು ಹಿಡಿಕೆಯ ಮೇಲ್ಭಾದಲ್ಲಿರುವ ತಟ್ಟೆಯಲ್ಲಿ ಇಡಬೇಕು. ನಂತರ ನೀರಿನ ಲೋಟ ಕೆಳಗೆ ಬಿಳದಂತೆ ಕ್ಯಾಪ್ಟನ್ಸಿ ಆಟದಿಂದ ಹೊರಗಡೆ ಹಾಕುವ ಅಭ್ಯರ್ಥಿಯ ಬುಟ್ಟಿಗೆ ನೀರು ಹಾಕಬೇಕು. ಯಾವ ಸ್ಪರ್ಧಿಯ ಬುಟ್ಟಿಯಲ್ಲಿ ಜಾಸ್ತಿ ನೀರು ಇರುತ್ತದೆ ಅವರು ಈ ಓಟದಿಂದ ಹೊರಗಡೆ ಉಳಿಯುತ್ತಾರೆ.

ಈ ಟಾಸ್ಕ್​ನಲ್ಲಿ ಧನರಾಜ್ ಆಚಾರ್ಯ ಅವರು ಗೆದ್ದು ಬೀಗಿದ್ದು, ಸದ್ಯ ಈ ವಾರದ ಮನೆಯ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಮೊದಲ ಬಾರಿಗೆ ಕ್ಯಾಪ್ಟನ್ ಆದ ಖುಷಿಯಲ್ಲಿ ಧನರಾಜ್, ಮನೆಯ ತುಂಬ ಕುಣಿದಾಡಿದ್ದು, ಕ್ಯಾಪ್ಟನ್ ರೂಮ್‌ನಲ್ಲಿ ಬಿದ್ದು ಹೊರಳಾಡಿದರು.

ಇದನ್ನೂ ಓದಿ : ವೈಲ್ಡ್‌ ಕಾರ್ಡ್‌ ಸ್ಪರ್ಧಿ ಶೋಭಾಗೆ ಕಳಪೆ ಪಟ್ಟ – ಜೈಲಿನಲ್ಲಿ ಕಣ್ಣೀರಿಟ್ಟ ನಟಿ..!

Leave a Comment

DG Ad

RELATED LATEST NEWS

Top Headlines

ನನ್ನ ಮಾರ್ಗದರ್ಶಕನನ್ನು ಕಳೆದುಕೊಂಡಿದ್ದೇನೆ – ಮನಮೋಹನ್‌ ಸಿಂಗ್‌ ನಿಧನಕ್ಕೆ ಕಂಬನಿ ಮಿಡಿದ ರಾಗಾ..

ನವದೆಹಲಿ : ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನಿಧನಕ್ಕೆ ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಕಂಬನಿ ಮಿಡಿದಿದ್ದಾರೆ. ನನ್ನ ಮಾರ್ಗದರ್ಶಕನನ್ನು ಕಳೆದುಕೊಂಡಿದ್ದೇನೆ ಎಂದು ನೋವಿನಿಂದ ನುಡಿದಿದ್ದಾರೆ.

Live Cricket

Add Your Heading Text Here