Download Our App

Follow us

Home » ಸಿನಿಮಾ » ವೈಲ್ಡ್‌ ಕಾರ್ಡ್‌ ಸ್ಪರ್ಧಿ ಶೋಭಾಗೆ ಕಳಪೆ ಪಟ್ಟ – ಜೈಲಿನಲ್ಲಿ ಕಣ್ಣೀರಿಟ್ಟ ನಟಿ..!

ವೈಲ್ಡ್‌ ಕಾರ್ಡ್‌ ಸ್ಪರ್ಧಿ ಶೋಭಾಗೆ ಕಳಪೆ ಪಟ್ಟ – ಜೈಲಿನಲ್ಲಿ ಕಣ್ಣೀರಿಟ್ಟ ನಟಿ..!

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಶೋ ಬಿಗ್​ಬಾಸ್​ ಸೀಸನ್​ 11, 10ನೇ ವಾರಕ್ಕೆ ಕಾಲಿಡಲು ಸಜ್ಜಾಗಿದೆ. ಈ ವಾರ ಇಡೀ ಬಿಗ್​ಬಾಸ್​ ಮನೆ  ಸಾಮ್ರಾಜ್ಯವಾಗಿ ಬದಲಾಗಿ ಬಿಟ್ಟಿತ್ತು. ಇದೀಗ ಕಳಪೆ ಮತ್ತು ಉತ್ತಮ ಸ್ಪರ್ಧಿಗಳನ್ನು ಸೂಚಿಸುವ ಸಮಯ.

ಹೌದು, ಕಲರ್ಸ್​ ಕನ್ನಡ  ಇಂದಿನ ಸಂಚಿಕೆಯ ಪ್ರೋಮೋವನ್ನು ಬಿಡುಗಡೆ ಮಾಡಿದೆ. ಈ ಪ್ರೋಮೋದಲ್ಲಿ ಬಿಗ್​ ಬಾಸ್​ ಮನೆಗೆ ವೈಲ್ಡ್​ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಶೋಭಾ ಶೆಟ್ಟಿ ಅವರಿಗೆ ಕಳಪೆ ಪಟ್ಟ ಸಿಕ್ಕಿದೆ.

ಧನರಾಜ್​ ಅವರು ಶೋಭಾ ಶೆಟ್ಟಿ ಅವರಿಗೆ ಕಳಪೆ ಕೊಟ್ಟಿದ್ದಾರೆ. ಅವರು ಕೊಟ್ಟಿರುವ ಕಾರಣಕ್ಕೆ ಶೋಭಾ ಅಸಮಧಾನಗೊಂಡಿದ್ದಾರೆ. ಈ ವಾರ ನಿಮ್ಮ ಆ್ಯಕ್ಟಿವಿಟೀಸ್​ ಸ್ವಲ್ಪ ಕಡಿಮೆ ಎಂದು ತಮ್ಮ ಕಾರಣ ತಿಳಿಸಿದ್ದಾರೆ. ಚಪ್ಪಾಳೆ ತಟ್ಟಿದ ಶೋಭಾ, ನೀವ್ ಯಾಕ್​ ನನ್ನನ್ನೇ ಟಾರ್ಗೆಟ್​ ಮಾಡ್ತಿದ್ದೀರ. ಲೈಫಲ್ಲಿ ಏನೇನೋ ಫೇಸ್​ ಮಾಡಿದ್ದೀನಿ, 24 ಗಂಟೆಯ ಜೈಲು ನನಗೇನೂ ಅಲ್ಲ ಎಂದು ತಿಳಿಸಿದ್ದಾರೆ.

ಜೈಲಿಗೆ ಹೋದ ಬಳಿಕ ಅಮ್ಮಾ ಇವತ್ತು ನಾನ್​ ಜೈಲಿಗೆ ಹೋಗ್ತಿದ್ದೀನಿ. ನೀನ್​ ಅದನ್ನು ನೋಡಿ ಅಳ್​ಬೇಡ ಎಂದು ಹೇಳಿದ್ದಾರೆ. ನಂತರ ಜೈಲಿಗೆ ಹೋಗಿ ಕಣ್ಣೀರಿಟ್ಟಿದ್ದಾರೆ. ನನಗೆ ಕಳಪೆ ಕೊಡುತ್ತಾರೆಂದು ನಿರೀಕ್ಷಿಸಿರಲಿಲ್ಲ ಎಂದು ಹೇಳುತ್ತಾ ಭಾವುಕರಾಗಿದ್ದಾರೆ.

ಇದನ್ನೂ ಓದಿ : ಕಲಬುರಗಿ : ವಿದ್ಯುತ್​ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ..!

Leave a Comment

DG Ad

RELATED LATEST NEWS

Top Headlines

ಕೇರಳದಲ್ಲಿ ಭೀಕರ ಅಪಘಾತ.. ಐವರು MBBS ವಿದ್ಯಾರ್ಥಿಗಳ ದುರ್ಮರಣ..!

ಕೇರಳ : ಕೇರಳದ ಅಲಪ್ಪುಳದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ದೇವಾನಂದನ್, ಮುಹಮ್ಮದ್ ಇಬ್ರಾಹಿಂ, ಆಯುಷ್ ಶಾಜಿ,

Live Cricket

Add Your Heading Text Here