ಹಾಸನ : ಹಾಸನದಲ್ಲಿ ಬಿಜೆಪಿ-ಜೆಡಿಎಸ್ ದೋಸ್ತಿಗಳ ನಡುವಣ ವೈಮನಸ್ಸು ಇನ್ನೂ ನಿಂತಿಲ್ಲವೇ ಎಂಬ ಅನುಮಾನ ಮತ್ತಷ್ಟು ಬಲವಾಗಿದೆ. ಇದಕ್ಕೆ ಪ್ರಬಲ ಕಾರಣ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ನೀಡಿರುವ ಹೇಳಿಕೆ. ಹೊಳೆನರಸೀಪುರದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಿತ್ರ ಪಕ್ಷ ಜೆಡಿಎಸ್ ನಾಯಕ ಹೆಚ್ಡಿ ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದ್ದಲ್ಲದೆ, ಎದುರಾಳಿ ಕಾಂಗ್ರೆಸ್ ಪಕ್ಷದ ಸಂಸದ ಶ್ರೇಯಸ್ ಪಟೇಲ್ರನ್ನು ಹಾಡಿಹೊಗಳಿದ್ದಾರೆ.
ಹೆಚ್.ಡಿ ರೇವಣ್ಣ ವಿರುದ್ಧ ಬಿಜೆಪಿ ಮುಖಂಡ ಪ್ರೀತಂಗೌಡ ವಾಗ್ದಾಳಿ ನಡೆಸಿ, ಹೊಳೆನರಸೀಪುರದಲ್ಲಿ ಮಾನವೀಯತೆ ಎನ್ನೋದು ಕಳೆದೋಗಿತ್ತು. ಶ್ರೇಯಸ್ ಬಂದ ಮೇಲೆ ಮಾನವೀಯತೆ ಮರಳಿ ಸಿಕ್ಕಿದೆ. ಮೊದಲೆಲ್ಲಾ ಸಂಭ್ರಮ ಅಂದ್ರೆ ತೋಟದ ಮನೆಗೆ ಸಿಂಗಾರ ಮಾಡ್ತಿದ್ರು, ಒಂದೋ ಎರಡೋ ಮನೆಗೆ ಲೈಟ್ ಬಿಡ್ತಾ ಇದ್ರು. ಇಡೀ ಹೊಳೆನರಸೀಪುರದಲ್ಲಿ ಲೈಟ್ ಇರೋದನ್ನು ನೋಡಿರಲಿಲ್ಲ, 2024 ರ ನಂತರ ವಾಸ್ತು, ದಿಕ್ಕು, ದಿಸೆ ಎಲ್ಲಾ ಬದಲಾಗಿದೆ ಎಂದಿದ್ದಾರೆ.
ಈ ಶ್ರೇಯಸ್ಸು ಸಂಸದ ಶ್ರೇಯಸ್ ಪಟೇಲ್ಗೆ ಸಲ್ಲಬೇಕು, ಶ್ರೇಯಸ್ ಅವರೊಂದಿಗೆ ಹೊಳೆನರಸೀಪುರದ ಶ್ರೇಯಸ್ಸು ಕೂಡ ಅಡಿಗಿದೆ. ನಿಮ್ಮನ್ನೆಲ್ಲಾ ನೋಡಿದ್ಮೇಲೆ ಹೊಳೆನರಸೀಪುರಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಅನ್ನುಸ್ತು, ಈಗ ಶ್ರೇಯಸ್ ತಮ್ಮ ತಾತನ ಕಾಲಕ್ಕೆ ಹೊಳೆನರಸೀಪುರ ಕೊಂಡ್ಯೊಯ್ದಿದ್ದಾರೆ. ಹೊಳೆನರಸೀಪುರವನ್ನು ಮಾದರಿಯನ್ನಾಗಿ ಮಾಡೋಣ, ಶ್ರೇಯಸ್ ಗೆಲ್ಲೋವರೆಗೂ ನಾನು ಈ ಕಾರ್ಯಕ್ರಮಕ್ಕೆ ಬರ್ತಾ ಇರ್ತೀನಿ ಎಂದು ಮಾಜಿ ಸಚಿವ ರೇವಣ್ಣ ಕುಟುಂಬದ ಹೆಸರು ಹೇಳದೇ ಪ್ರೀತಂ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : 47 ವರ್ಷಗಳ ಬಳಿಕ ಆಸ್ಟ್ರೇಲಿಯಾದಲ್ಲಿ ಭಾರತಕ್ಕೆ ಐತಿಹಾಸಿಕ ಜಯ – BGT ಟೆಸ್ಟ್ನಲ್ಲಿ ಬುಮ್ರಾ ಪಡೆಗೆ ಶುಭಾರಂಭ..!