ಮೈಸೂರು : ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ನಿನ್ನೆ ಶ್ರೀ ರಾಮಕೃಷ್ಣ ಆಶ್ರಮಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ರಾಮಕೃಷ್ಣ ಆಶ್ರಮದ ಪೂಜ್ಯ ಸ್ವಾಮಿ ಮುಕ್ತಿದಾನಂದ ಜೀ ಯವರೊಂದಿಗೆ ವಿವೇಕ್ ಸ್ಮಾರಕದ ಕುರಿತು ಸುದೀರ್ಘ ಚರ್ಚೆ ನಡೆಸಿದರು.
ಸ್ವಾಮಿ ವಿವೇಕಾನಂದರು ಮೈಸೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತಂಗಿದ್ದ ಜಾಗದಲ್ಲಿ ನಿರ್ಮಿಸಲಾಗುತ್ತಿರುವ ವಿವೇಕ ಸ್ಮಾರಕದ ಬಗ್ಗೆ ಮತ್ತು ಅದರ ಪ್ರಗತಿಯ ಕುರಿತು ನಿರ್ಮಲಾನಂದನಾಥ ಶ್ರೀಗಳು ಚರ್ಚೆ ನಡೆಸಿದರು.
ವಿವೇಕ ಸ್ಮಾರಕವನ್ನು ಸುಮಾರು 36 ಕೋಟಿ ರೂ. ವೆಚ್ಚದಲ್ಲಿ ಮೂರು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲು ಯೋಜಿಸಲಾಗಿದೆ. ಕಟ್ಟಡದಲ್ಲಿ ಸ್ವಾಮಿ ವಿವೇಕಾನಂದ ಯೂತ್ ಸೆಂಟರ್, ಸ್ವಾಮೀಜಿಯವರ ಮ್ಯೂಸಿಯಂ, ಗ್ರಂಥಾಲಯ, ಪುಸ್ತಕ ಪ್ರದರ್ಶನ, ಕೆಫಟೇರಿಯ, ಸುಮಾರು 800 ಮಂದಿ ಕುಳಿತುಕೊಳ್ಳುವ ಸಭಾಂಗಣ, ವಿಶ್ರಾಂತಿ ಕೊಠಡಿ, ಕಚೇರಿ, ಬೇಸ್‌ಮೆಂಟ್‌ನಲ್ಲಿ ವಾಹನ ನಿಲ್ದಾಣ ವ್ಯವಸ್ಥೆ ಸೇರಿದಂತೆ ಒಟ್ಟು 40 ಸಾವಿರ ಚದರ ಅಡಿಯಲ್ಲಿ ಕಟ್ಟಡ ತಲೆ ಎತ್ತಲಿದೆ.
ಇದನ್ನೂ ಓದಿ : ದಾವಣಗೆರೆಯ ಪ್ರತಿಷ್ಠಿತ ಬಡಾವಣೆ ಪಹಣಿಯಲ್ಲೂ ವಕ್ಫ್ ಹೆಸರು..!
Post Views: 53