ಉತ್ತರ ಪ್ರದೇಶ : ಉತ್ತರ ಪ್ರದೇಶದ ಜ್ಞಾನವಾಪಿ ಮಸೀದಿ ವಿವಾದ ಪ್ರಕರಣ ಸಂಬಂಧ ಪುರಾತತ್ವ ಇಲಾಖೆಯ ಸರ್ವೇ ವರದಿ ಬಹಿರಂಗವಾಗಿದೆ. 839 ಪುಟಗಳ ಸರ್ವೇ ವರದಿಯಲ್ಲಿ ಬೃಹತ್ ದೇಗುಲವಿದ್ದ ಅಸ್ತಿತ್ವದ ಸುಳಿವು ಪತ್ತೆಯಾಗಿದೆ.
17ನೇ ಶತಮಾನದಲ್ಲಿ ಮಸೀದಿಗಾಗಿ ಮಂದಿರದ ಕೆಲ ಭಾಗ ನಾಶ ಪಡಿಸಿದ್ದಾರೆ ಎಂದು ಮಸೀದಿ ಜಾಗದಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸಿದ್ದ ASI ಹೇಳಿದೆ. ಮಸೀದಿ ನಿರ್ಮಾಣಕ್ಕೂ ಮುನ್ನ ದೇಗುಲ ಇತ್ತೆಂದು ವರದಿಯಲ್ಲಿ ಉಲ್ಲೇಖವಾಗಿದೆ. ಹಿಂದೂ ಸಂಘಟನೆಗಳ ಪರ ವಕೀಲ ವಿಷ್ಣು ಜೈನ್ ಈ ಮಾಹಿತಿ ನೀಡಿದ್ದಾರೆ. ಕೋರ್ಟ್ನಿಂದ ಸರ್ವೇ ಮಾಡುವಂತೆ ಪುರಾತತ್ವ ಇಲಾಖೆಗೆ ಆದೇಶವಿತ್ತು. ಹೀಗಾಗಿ ಬಿಗಿ ಬಂದೋಬಸ್ತ್ನಲ್ಲಿ ಸರ್ವೆ ನಡೆದಿತ್ತು.
ಸಮೀಕ್ಷೆಯಲ್ಲಿ 32 ಸ್ಥಳಗಳಲ್ಲಿ ಪುರಾವೆಗಳು ಸಿಕ್ಕಿವೆ. ಮಸೀದಿ ಹಿಂದೆ ಹಿಂದೂ ದೇವಾಲಯವಿತ್ತು ಎಂದು ತೋರಿಸುತ್ತದೆ. 2 ಸೆಪ್ಟೆಂಬರ್ 1669 ರಂದು ದೇವಾಲಯವನ್ನು ಕೆಡವಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಜನಾರ್ದನ, ರುದ್ರ ಮತ್ತು ವಿಶ್ವೇಶ್ವರನ ಬಗ್ಗೆ ಶಾಸನಗಳು ಕಂಡುಬಂದಿವೆ.
ದೇವಾಲಯವನ್ನು ಕೆಡವಿದ ನಂತರ, ಅದರ ಕಂಬಗಳನ್ನು ಮಸೀದಿಯನ್ನು ನಿರ್ಮಿಸಲು ಬಳಸಲಾಗಿದೆ. ಹಿಂದೂ ದೇವರು ಮತ್ತು ದೇವತೆಗಳ ಪ್ರತಿಮೆಗಳನ್ನು ಒಳಗೊಂಡಿದೆ. ಜ್ಞಾನವಾಪಿಯ ಪಶ್ಚಿಮ ಗೋಡೆಯು ಹಿಂದೂ ದೇವಾಲಯದ ಭಾಗವಾಗಿತ್ತು. ಅದನ್ನು ಸುಲಭವಾಗಿ ಗುರುತಿಸಬಹುದಾಗಿದೆ.
ಇದನ್ನೂ ಓದಿ : ಬೆಂಗಳೂರು : ಬಂದೂಕಿನಿಂದ ಗುಂಡು ಹಾರಿಸಿ ಮಗನನ್ನೇ ಹ*ತ್ಯೆಗೈದ ತಂದೆ..!