ಬೆಂಗಳೂರು : ಜಗದೀಶ್ ಶೆಟ್ಟರ್ ಕಾಂಗ್ರೆಸ್ ತೊರೆದ ಬೆನ್ನಲ್ಲೆ ಹಿರಿಯ ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್ ಅವರಿಗೆ ಸ್ಥಾನಮಾನ ನೀಡಲು ಎಲ್ಲೆಡೆ ಹೊಸ ಬಿಸಿ ಚರ್ಚೆ ಶುರುವಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೆಸುತ್ತಿದ್ದಾರೆ.
ಜಗದೀಶ್ ಶೆಟ್ಟರ್ ಕಾಂಗ್ರೆಸ್ ರಾಜೀನಾಮೆ ನೀಡಿದ ಬೆನ್ನಲ್ಲೇ “ಮನೆ ಮಕ್ಕಳನ್ನು ಗೌರವಿಸಿ, ಮಂದಿ ಮಕ್ಕಳನ್ನಲ್ಲ” ಎಂದು ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಫೊಸ್ಟ್ ಹಾಕುತ್ತಿದ್ದಾರೆ. ಇನ್ನು ಕೆಲ ಕಾಂಗ್ರೆಸ್ ಕಾರ್ಯಕರ್ತರು ಬಿಕೆ ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಿ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ಕಟ್ಟಾಳು ಬಿಕೆ ಹರಿಪ್ರಸಾದ್ ಅವರಿಗೆ ಸ್ಥಾನಮಾನ ನೀಡಲೇಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ.
ಇನ್ನು ಕೆಲವರು ಜಗದೀಶ್ ಶೆಟ್ಟರ್ ಹೋದ್ರೆ ತೊಂದ್ರೆ ಇಲ್ಲ, ನಡೆ ನುಡಿಯ ಬಿಕೆ ಹರಿಪ್ರಸಾದ್ ಗೆ ಸಚಿವ ಸ್ಥಾನ ನೀಡಿ ಎಂದು ಬರೆದುಕೊಂಡಿದ್ದಾರೆ. ಮನೆ ಕಟ್ಟಿದವರಿಗೆ ಮೊದಲು ಗೌರವ ಕೊಡಿ, ಅನ್ನ ತಿಂದ ಮನೆಗೆ ದ್ರೋಹ ಬಗೆದವರಿಗಲ್ಲ. ಪಕ್ಷ ನಿಷ್ಠೆಯ ಪ್ರತಿರೂಪ ಬಿಕೆ ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ಕೊಡಿ ಎಂದು ಅನ್ವಿತ್ ಕಟೀಲ್ ಎಂಬವರು ಬರೆದುಕೊಂಡಿದ್ದಾರೆ.
ಸೈದ್ದಾಂತಿಕಾ ಬದ್ಧತೆ, ಪಕ್ಷ ನಿಷ್ಠೆಗೆ ಇನ್ನೊಂದು ಹೆಸರೇ ಬಿಕೆ ಹರಿಪ್ರಸಾದ್ ಸರ್, ಪಕ್ಷಕ್ಕಾಗಿ ತ್ಯಾಗ ಮಾಡಿ ಪ್ರಾಮಾಣಿಕ ಸೇವೆ ಸೇವಿಸುತ್ತಿರುವ ಶೋಷಿತ ಸಮುದಾಯ ನಾಯಕರಿಗೆ ಸ್ಥಾನಮಾನ ಕೊಡಿ ಎಂದು ಕಾಂಗ್ರೆಸ್ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ : ಅಂದು ಕೊಡಗಿನಲ್ಲಿ ಮೊಟ್ಟೆ, ಇಂದು ಸಿದ್ದುಗೆ ಹೂಮಳೆ ಸ್ವಾಗತ..!