Download Our App

Follow us

Home » ಮೆಟ್ರೋ » ಬೆಂಗಳೂರಲ್ಲಿ ಸಾಲು ಸಾಲು ಪಟಾಕಿ ಅವಘಡ – ಮೂರು ದಿನದಲ್ಲಿ 94 ಜನರ ಕಣ್ಣಿಗೆ ಹಾನಿ..!

ಬೆಂಗಳೂರಲ್ಲಿ ಸಾಲು ಸಾಲು ಪಟಾಕಿ ಅವಘಡ – ಮೂರು ದಿನದಲ್ಲಿ 94 ಜನರ ಕಣ್ಣಿಗೆ ಹಾನಿ..!

ಬೆಂಗಳೂರು : ಪಟಾಕಿ ಅವಘಡಗಳಿಂದ ಕಣ್ಣಿಗೆ ಹಾನಿಯಾಗುತ್ತಿರುವ ಪ್ರಕರಣಗಳು ನಗರದಲ್ಲಿ ಹೆಚ್ಚಾಗುತ್ತಲೆ ಇದೆ. ಅಕ್ಟೋಬರ್​ 31ರಿಂದ ನವೆಂಬರ್​ 2ರವರೆಗೆ ಕಣ್ಣಿನ ತೊಂದರೆಗೆ ಒಳಗಾದವರ ಸಂಖ್ಯೆ 94ಕ್ಕೆ ಏರಿಕೆಯಾಗಿದೆ. ಇದ್ರಲ್ಲಿ ಬಹುತೇಕರು ಬೇರೆಯವರು ಸಿಡಿಸಿರುವ ಪಟಾಕಿಯಿಂದ ಕಣ್ಣಿನ ಹಾನಿಗೊಳಗಾಗಿದ್ದಾರೆ.

ದೀಪಾವಳಿ ಹಬ್ಬ ಒಂದ್ಕಡೆ ಸಂಭ್ರಮ ಹೆಚ್ಚಿಸಿದ್ರೆ, ಮತ್ತೊಂದ್ಕಡೆ ಪಟಾಕಿ ಅವಘಡಗಳ ಸಂಖ್ಯೆಯನ್ನೂ ಏರಿಕೆ ಮಾಡಿದೆ. ನಿನ್ನೆಯಷ್ಟೇ ಪಟಾಕಿ ಅವಘಡದಿಂದ ಮಿಂಟೋ ಆಸ್ಪತ್ರೆಗೆ ದಾಖಲಾದವರ ಸಂಖ್ಯೆ 22ಕ್ಕೆ ಏರಿಕೆಯಾಗಿತ್ತು ಅಂತ ವೈದ್ಯರು ಮಾಹಿತಿ ನೀಡಿದ್ರು. ಆದ್ರೀಗ ಪಟಾಕಿ ಅವಘಡದಿಂದ ಮಿಂಟೋ ಆಸ್ಪತ್ರೆಗೆ ದಾಖಲಾದವರ ಸಂಖ್ಯೆ 39ಕ್ಕೆ ಏರಿಕೆಯಾಗಿದೆ.

ಇತ್ತ ನಾರಾಯಣ ನೇತ್ರಾಲಯದಲ್ಲಿ ಪಟಾಕಿ ಸಿಡಿತದಿಂದ ಗಾಯಗೊಂಡ 55 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 27 ಮಕ್ಕಳೇ ಆಗಿದ್ದಾರೆ. ಇನ್ನು ಬಿಜಲಿ ಪಟಾಕಿ ಹಾಗೂ ಆಟಂ ಬಾಂಬ್‌ಗಳಿಂದ ಹೆಚ್ಚಿನ ಹಾನಿಯಾಗಿದ್ದು, ಪಟಾಕಿ ಹೊಡೆದವರಿಗಿಂತ ನೋಡ್ತಾ ನಿಂತವರಿಗೇ ಹೆಚ್ಚು ಹಾನಿಯಾಗಿದೆ ಎಂದು ವರದಿಯಾಗಿದೆ. ಚಿಕಿತ್ಸೆ ಪಡೆಯುತ್ತಿರುವ 94 ಮಂದಿಯಲ್ಲಿ 15ಕ್ಕೂ ಹೆಚ್ಚು ಮಂದಿಗೆ ಶಸ್ತ್ರಚಿಕಿತ್ಸೆ ಆತಂಕ ಎದುರಾಗಿದ್ದು, ಈಗಾಗಲೇ ನಾರಾಯಣ ನೇತ್ರಾಲಯದಲ್ಲಿ ನಾಲ್ವರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.

ಇದನ್ನೂ ಓದಿ : ದರ್ಶನ್ ಸರ್ಜರಿ ಭವಿಷ್ಯ ಇಂದೇ ನಿರ್ಧಾರ.. ದಾಸನ​ ಆರೋಗ್ಯ ಸ್ಥಿತಿ ಈಗ ಹೇಗಿದೆ?

Leave a Comment

DG Ad

RELATED LATEST NEWS

Top Headlines

ಕಮಲ್ ಹಾಸನ್ ಅಭಿನಯದ ‘ಥಗ್ ಲೈಫ್’ ಚಿತ್ರದ ರಿಲೀಸ್​ ಡೇಟ್​​ ಅನೌನ್ಸ್..!

ಕಮಲ್ ಹಾಸನ್ ಅಭಿನಯದ ಮತ್ತು ಮಣಿರತ್ನಂ ನಿರ್ದೇಶನದ ‘ಥಗ್ ಲೈಫ್’ ಚಿತ್ರ ವಿಶ್ವದಾದ್ಯಂತ 2025ರ ಜೂನ್ 5ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಇಂದು ಕಮಲ್ ಹಾಸನ್ ಅವರ ಹುಟ್ಟುಹಬ್ಬದ

Live Cricket

Add Your Heading Text Here