Download Our App

Follow us

Home » ಸಿನಿಮಾ » ಬಿಗ್​ಬಾಸ್ ಸೀಸನ್ 11ರ ಮೊದಲ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡ ಹನುಮಂತ..!

ಬಿಗ್​ಬಾಸ್ ಸೀಸನ್ 11ರ ಮೊದಲ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡ ಹನುಮಂತ..!

ಬಿಗ್‌ ಬಾಸ್‌ ಸೀಸನ್‌ 11ರ ಕಿಚ್ಚನ ಪಂಚಾಯಿತಿಗೆ ಮತ್ತೆ ಸುದೀಪ್‌ ಅವರು ಕಮ್‌ ಬ್ಯಾಕ್‌ ಆಗಿದ್ದಾರೆ. ತಾಯಿಯನ್ನು ನೆನೆದು ಕಿಚ್ಚ ವೇದಿಕೆಯಲ್ಲಿ ಕಣ್ಣೀರು ಹಾಕಿದ್ದಾರೆ. ಆ ಬಳಿಕ ಎಂದಿನಂತೆ ಸುದೀಪ್ ತನ್ನ ಪಂಚಾಯ್ತಿ ಆರಂಭಿಸಿದ್ದಾರೆ.

ಕನ್ನಡ ಬಿಗ್​ಬಾಸ್​ ಸೀಸನ್ 11 ಶುರುವಾಗಿ ನಾಲ್ಕನೇ ವಾರದ ಕೊನೆಯ ಹಂತಕ್ಕೆ ತಲುಪಿದ್ದು, ಒಟ್ಟು 17 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದ ಬಿಗ್​ಬಾಸ್​ ಸೀಸನ್​ 11ರಲ್ಲಿ ಈಗ 14 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಇನ್ನು ಬಿಗ್​ಬಾಸ್​ ಸೀಸನ್​ 11ರಲ್ಲಿ ಮೊದಲ ಬಾರಿಗೆ ಕಿಚ್ಚನ ಚಪ್ಪಾಳೆ ಯಾರಿಗೆ ಸಿಗುತ್ತದೆ ಅಂತ ವೀಕ್ಷಕರು ಹಾಗೂ ಬಿಗ್​ಬಾಸ್​ ಸ್ಪರ್ಧಿಗಳು ಕುತೂಹಲದಿಂದ ಕಾಯುತ್ತಿದ್ದರು. ಇದೀಗ ಅಚ್ಚರಿಯ ರೀತಿಯಲ್ಲಿ ಕಿಚ್ಚ ಸುದೀಪ್ ಚಪ್ಪಾಳೆ ತಟ್ಟಿ ಒಬ್ಬ ಸ್ಪರ್ಧಿಗೆ ಶಹಬ್ಬಾಸ್ ಎಂದಿದ್ದಾರೆ.

ಹೌದು.. ಬಿಗ್​ಬಾಸ್​ ಮನೆಗೆ ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ಟಿದ್ದ ಗಾಯಕ ಹನುಮಂತ ಅವರಿಗೆ ಈ ವಾರದ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ಬಿಗ್​ಬಾಸ್​ ಮನೆಗೆ ಬಂದ ಎರಡೇ ವಾರಕ್ಕೆ ಮೂರು ತ್ರಿಬಲ್ ಧಮಾಕಾ ಪಡೆದುಕೊಂಡಿದ್ದಾರೆ. ಒಂದು ಬಿಗ್​ಬಾಸ್​ಗೆ ಬಂದ ಮೊದಲ ದಿನವೇ ಕ್ಯಾಪ್ಟನ್​ ಪಟ್ಟ ಪಡೆದುಕೊಂಡಿದ್ದರು. ಎರಡನೇದು ಕಷ್ಟ ಪಟ್ಟು ಬಿಗ್​ಬಾಸ್​ ಕೊಟ್ಟ ಟಾಸ್ಕ್​ನಲ್ಲಿ ಉತ್ತಮ ಪ್ರದರ್ಶನ ನೀಡಿ ಮತ್ತೊಮ್ಮೆ ಕ್ಯಾಪ್ಟನ್ ಆಗಿದ್ದರು. ಇದೀಗ ಕಿಚ್ಚ ಸುದೀಪ್​ ಅವರಿಂದ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡು ಹನುಮಂತ ಮತ್ತೊಂದು ರೆಕಾರ್ಡ್ ಮಾಡಿದ್ದಾರೆ.

ಕಿಚ್ಚ ಸುದೀಪ್​ ಅವರು ಸುಖಾ ಸುಮ್ಮನೆ ಚೆಪ್ಪಾಳೆ ತಟ್ಟುವುದಿಲ್ಲ. ಉತ್ತಮ ಪ್ರದರ್ಶನ ತೋರಿದ ಸ್ಪರ್ಧಿಗೆ ಚಪ್ಪಾಳೆ ಹೊಡೆಯುತ್ತಿದ್ದರು. ಈ ಹೊಸ ಅಧ್ಯಾಯದೊಂದಿಗೆ ಬಿಗ್​ಬಾಸ್ ಮನೆಗೆ ಬಂದಿದ್ದ 17 ಸ್ಪರ್ಧಿಗಳಲ್ಲಿ ಮೊದಲ ವಾರದಿಂದ ಮೂರನೇ ವಾರದವರೆಗೂ ಕಿಚ್ಚ ಸುದೀಪ್​ ಯಾರುಗೂ ‘ಕಿಚ್ಚನ ಚಪ್ಪಾಳೆ’ ಸಿಕ್ಕಿರಲಿಲ್ಲ. ಆದರೆ ಇದೀಗ ನಾಲ್ಕನೇ ವಾರಕ್ಕೆ ಕಿಚ್ಚ ಸುದೀಪ್​ ತಮ್ಮ ಚಪ್ಪಾಳೆಯನ್ನು ಹನುಮಂತ ಅವರಿಗೆ ಕೊಟ್ಟಿದ್ದಾರೆ. ಇನ್ನೂ, ಕಿಚ್ಚ ಸುದೀಪ್​ ಈ ವಾರದ ಕಿಚ್ಚನ ಚಪ್ಪಾಳೆ ಹನುಮಂತಗೆ ಅಂತ ಹೇಳಿದ ಕೂಡಲೇ ಮನೆಯಲ್ಲಿರೋ ಸಹ ಸ್ಪರ್ಧಿಗಳು ಶಾಕ್​ ಆಗಿದ್ದಾರೆ.

ಇದನ್ನೂ ಓದಿ : ‘ಕಾಂತಾರ’ಕ್ಕಾಗಿ ಬಲ್ಗೇರಿಯಾದಿಂದ ಕುಂದಾಪುರಕ್ಕೆ ಬಂದಿಳಿದ ಆ್ಯಕ್ಷನ್ ಮಾಸ್ಟರ್.. ಇವರ ಹಿನ್ನೆಲೆ ಏನು?

Leave a Comment

DG Ad

RELATED LATEST NEWS

Top Headlines

ಪಂಚಭೂತಗಳಲ್ಲಿ ಲೀನರಾದ ಮನಮೋಹನ್ ಸಿಂಗ್ – ಅಂತ್ಯವಾಯ್ತು ‘ಸಾಧಕ’ನ ಪರ್ವ..!

ನವದೆಹಲಿ : ಹೊಸ ಭಾರತ ನಿರ್ಮಾಣದ ಕನಸು ಕಂಡ ಕನಸುಗಾರ ಮನಮೋಹನ್ ಸಿಂಗ್ ಇನ್ನು ನೆನಪು ಮಾತ್ರ. ಡಿ.​ 26ರಂದು ಇಹಲೋಕ ಯಾತ್ರೆ ಮುಗಿಸಿದ ಭಾರತದ ಮಾಜಿ

Live Cricket

Add Your Heading Text Here