Download Our App

Follow us

Home » ಸಿನಿಮಾ » BGS ಆಸ್ಪತ್ರೆಯಲ್ಲಿ ದರ್ಶನ್​​ ಅಡ್ಮಿಟ್ – ಹೈಟೆಕ್​ ಆಗಿರೋ ಸೂಟ್​ ರೂಮ್ ಬುಕ್..!

BGS ಆಸ್ಪತ್ರೆಯಲ್ಲಿ ದರ್ಶನ್​​ ಅಡ್ಮಿಟ್ – ಹೈಟೆಕ್​ ಆಗಿರೋ ಸೂಟ್​ ರೂಮ್ ಬುಕ್..!

ನಟ ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿರುವ ಹಿನ್ನೆಲೆ ಅವರಿಗೆ ಮಧ್ಯಂತರ ಜಾಮೀನು ಸಿಕ್ಕಿದೆ. ಒಂದು ವಾರದ ಒಳಗೆ ಅವರು ಚಿಕಿತ್ಸೆಯ ಕುರಿತು ನ್ಯಾಯಾಲಯಕ್ಕೆ ವರದಿ ಸಲ್ಲಿಕೆ ಮಾಡಬೇಕಿದೆ. ಈಗಾಗಲೇ ಜಾಮೀನು ಪಡೆದು 2 ದಿನ ಕಳೆದಿದ್ದು, ಇಂದು ಬಿಜಿಎಸ್​ ಗ್ಲೋಬಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ದರ್ಶನ್ ಆಗಮಿಸಿರುವ ಕಾರಣದಿಂದ ಆಸ್ಪತ್ರೆಗೆ ಹೊರಗೆ ಸಾಕಷ್ಟು ಸಂಖ್ಯೆಯ ಅಭಿಮಾನಿಗಳು ನೆರೆದಿದ್ದಾರೆ. ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ.

ದರ್ಶನ್​​ಗಾಗಿ ಆಸ್ಪತ್ರೆಯಲ್ಲಿ ಸ್ಪೆಷಲ್​​ ವಾರ್ಡ್​ಗಿಂತಲೂ ಸೂಟ್ ರೂಮ್ ಬುಕ್ ಮಾಡಲಾಗಿದ್ದು, ಫ್ಯಾಮಿಲಿ ಸಹಿತ ಉಳಿದುಕೊಳ್ಳಬಹುದಾದ ಸಪರೇಟ್​​ ಸೂಟ್​​​ ಆಗಿದೆ. ನಾಲ್ಕು ತಿಂಗಳ ಬಳಿಕ ಜೈಲಿನಿಂದ ಹೊರಗೆ ಬಂದಿರುವ ದರ್ಶನ್​ ಅವರನ್ನು ನೋಡಲು ಅಭಿಮಾನಿಗಳು ಜಮಾಯಿಸಿರುವುದರಿಂದ ಬಿಜಿಎಸ್ ಆಸ್ಪತ್ರೆಯ ಬಳಿ ಕೆಂಗೇರಿ ಠಾಣೆ ಪೊಲೀಸರಿಂದ ಬಂದೋಬಸ್ತ್ ಮಾಡಲಾಗಿದೆ.

2013ರಲ್ಲೂ ಬೆನ್ನುನೋವಿನ ಚಿಕಿತ್ಸೆಗೆ ದರ್ಶನ್​ ಅವರು ಬಿಜಿಎಸ್​ ಆಸ್ಪತ್ರೆಗೆ ದಾಖಲಾಗಿದ್ದರು. ‘ಬೃಂದಾವನ’ ಸಿನಿಮಾದ ಶೂಟಿಂಗ್​ ವೇಳೆ ಕುದುರೆ ಮೇಲಿಂದ ಬಿದ್ದಿದ್ದರಿಂದ ಅವರಿಗೆ ನೋವು ಕಾಣಿಸಿಕೊಂಡಿತ್ತು. ಆಗಲೂ ಇದೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಈಗ ಪತ್ನಿ ವಿಜಯಲಕ್ಷ್ಮಿ ಹಾಗೂ ಸ್ನೇಹಿತ ಧನ್ವೀರ್​ ಜೊತೆ ದರ್ಶನ್ ಅವರು ಆಸ್ಪತ್ರೆಗೆ ಬಂದಿದ್ದಾರೆ.

ಇದನ್ನೂ ಓದಿ : ಮಗಳ ಜೊತೆ ದೀಪಾವಳಿ ಫೋಟೋಶೂಟ್ ಮಾಡಿಸಿಕೊಂಡ ಅದಿತಿ ಪ್ರಭುದೇವ ದಂಪತಿ..!

Leave a Comment

DG Ad

RELATED LATEST NEWS

Top Headlines

ಶೃಂಗೇರಿ ಮಠದ ಜ್ಞಾನೋದಯ ಕಾಲೇಜು​ ಡೆಮಾಲಿಷನ್​​ಗೆ ತಡೆ – ಯಥಾಸ್ಥಿತಿಗೆ BBMP ಆದೇಶ..!

ಬೆಂಗಳೂರು : ರಾಜ್ಯ ಸರ್ಕಾರ ಶೃಂಗೇರಿಯ ಶಾರದ ಮಠದ ಅಧೀನದಲ್ಲಿ ನಡೆಯುತ್ತಿರೋ ಜ್ಞಾನೋದಯ ಕಾಲೇಜಿನ ಕಟ್ಟಡಕ್ಕೆ ಡೆಮಾಲಿಷನ್ ಆದೇಶ ನೀಡಿತ್ತು. ಈ ವಿಚಾರ ಹೊರ ಬರುತ್ತಿದ್ದಂತೆ ಸರ್ಕಾರದ

Live Cricket

Add Your Heading Text Here