Download Our App

Follow us

Home » ಸಿನಿಮಾ » ಮಗಳ ಜೊತೆ ದೀಪಾವಳಿ ಫೋಟೋಶೂಟ್ ಮಾಡಿಸಿಕೊಂಡ ಅದಿತಿ ಪ್ರಭುದೇವ ದಂಪತಿ..!

ಮಗಳ ಜೊತೆ ದೀಪಾವಳಿ ಫೋಟೋಶೂಟ್ ಮಾಡಿಸಿಕೊಂಡ ಅದಿತಿ ಪ್ರಭುದೇವ ದಂಪತಿ..!

ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳ ಮನೆಯಲ್ಲಿ ದೀಪಾವಳಿ ಸಂಭ್ರಮ ಜೋರಾಗಿದೆ. ನಟಿ ಅದಿತಿ ಪ್ರಭುದೇವ ದೀಪಾವಳಿ ಆಚರಿಸಿ ಮಗಳು, ಪತಿ ಯಶಸ್‌ ಜೊತೆ ಹೊಸ ಫೋಟೋಶೂಟ್‌ ಮಾಡಿಸಿದ್ದಾರೆ.

ನಟಿ ಅದಿತಿ ಪ್ರಭುದೇವ ಏಪ್ರಿಲ್‌ 4ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ರು. ಸಿನಿಮಾಗಳಿಂದ ದೂರ ಉಳಿದ ಅದಿತಿ ಸದ್ಯ, ನಟಿ ಮಗಳ ಆರೈಕೆಯಲ್ಲಿ ಬ್ಯುಸಿ ಆಗಿದ್ದಾರೆ. ಅದಿತಿ ಪ್ರಭುದೇವ ಮಗಳಿಗೆ 6 ತಿಂಗಳು ತುಂಬಿದ ಹಿನ್ನೆಲೆ ಮಗಳ ಫೋಟೋ ಹಾಗೂ ಹೆಸರನ್ನು ನಟಿ ರಿವೀಲ್ ಮಾಡಿದ್ದರು. ಇದೀಗ ದೀಪಾವಳಿ ಹಬ್ಬಕ್ಕೆ ಹೊಸ ಫೋಟೋಶೂಟ್‌ ಮಾಡಿಸಿ ಆ ಸುಂದರ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಹಾಗೂ ನಿಮ್ಮ ಮನೆ, ಮನಗಳಲ್ಲಿ ಸದಾ ಪ್ರೀತಿಯ ಜ್ಯೋತಿ ಬೆಳಗುತ್ತಿರಲಿ ಎಂದು ಆಶಿಸುತ್ತಾ ಈ ದೀಪಾವಳಿ ನಿಮಗೆ ಸಾಕಷ್ಟು ಖುಷಿ , ಆರೋಗ್ಯ, ನೆಮ್ಮದಿಯನ್ನು ತರಲಿ ಎಂದು ಹಾರೈಸುತ್ತೇವೆ ಎಂದು ಅದಿತಿ ಅವರು ಹಲವು ಫೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ.

ನಟಿ ಅದಿತಿ ಪ್ರಭುದೇವ, ಯಶಸ್‌ ಪಾಟ್ಲಾ ದಂಪತಿ ಮಗಳಿಗೆ ನೇಸರ ಎಂಬ ಹೆಸರನ್ನು ಇಟ್ಟಿದ್ದು, 6ನೇ ತಿಂಗಳಿಗೆ ಕಾಲಿಟ್ಟ ಮಗಳ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆಗಲೇ ನೇಸರ ಹೆಸರಿನಲ್ಲಿ ಫ್ಯಾನ್ಸ್ ಪೇಜ್‌ಗಳು ಕ್ರಿಯೇಟ್ ಆಗಿದ್ದು, ಮುದ್ದು ಕಂದಮ್ಮ ಸ್ಟಾರ್ ಕಿಡ್‌ ಪಟ್ಟಿ ಸೇರುತ್ತಿದ್ದಾಳೆ.

ಇದನ್ನೂ ಓದಿ : ಬೆನ್ನುನೋವಿನ ಚಿಕಿತ್ಸೆಗಾಗಿ BGS ಆಸ್ಪತ್ರೆಗೆ ಬಂದ ದರ್ಶನ್​ – ಆಸ್ಪತ್ರೆ ಸುತ್ತಲೂ ಬಿಗಿ ಭದ್ರತೆ..!

Leave a Comment

DG Ad

RELATED LATEST NEWS

Top Headlines

ನಟ ದರ್ಶನ್​ಗೆ ನಾಳೆ ನಿರ್ಣಾಯಕ ದಿನ – ಏನಾಗಲಿದೆ ಬೇಲ್ ಭವಿಷ್ಯ?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿಯಾಗಿರುವ ನಟ ದರ್ಶನ್​​ಗೆ ನಾಳೆ ನಿರ್ಣಾಯಕ ದಿನವಾಗಿದೆ. ಮಧ್ಯಂತರ ಜಾಮೀನು ಪಡೆದು ಜೈಲಿಂದ ಹೊರಗೆ ಬಂದಿರುವ ನಟ ದರ್ಶನ್ ಸದ್ಯ

Live Cricket

Add Your Heading Text Here