Download Our App

Follow us

Home » ಸಿನಿಮಾ » ದರ್ಶನ್‌ ರಿಲೀಸ್​​ ಆಗಿದ್ಕೆ ಈ ಜೀವಕ್ಕೆ ಮಾತ್ರ ಎಲ್ಲಿಲ್ಲದ ನೋವು..!

ದರ್ಶನ್‌ ರಿಲೀಸ್​​ ಆಗಿದ್ಕೆ ಈ ಜೀವಕ್ಕೆ ಮಾತ್ರ ಎಲ್ಲಿಲ್ಲದ ನೋವು..!

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ಬಳ್ಳಾರಿ ಜೈಲಿನಲ್ಲಿದ್ದ ನಟ ದರ್ಶನ್ ಮಧ್ಯಂತರ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ನಟನ ಜಾಮೀನಿಗಾಗಿ ಬಹಳಷ್ಟು ಪ್ರಯತ್ನ ನಡೆದರೂ ಕೊನೆಗೆ ಮೆಡಿಕಲ್ ಗ್ರೌಂಡ್ಸ್ ಮೇಲೆ ನಟನಿಗೆ ಜಾಮೀನು ಕೊಡಲಾಗಿದೆ. ಈ ವಿಚಾರ ತಿಳಿದ ಅಭಿಮಾನಿಗಳಂತೂ ಫುಲ್​ ಖುಷ್​ ಆಗಿದ್ದರು. ಆದರೆ ಈ ಜೀವ ಮಾತ್ರ ತುಂಬ ಬೇಸರ ಪಟ್ಟುಕೊಂಡಿದೆ.

ಹೌದು, ಬೆಂಗಳೂರು ಪರಪ್ಪನ ಅಗ್ರಹಾರದಲ್ಲಿ ವಿಶೇಷ ಆತಿಥ್ಯ ಪಡೆಯುತ್ತಿದ್ದ ಆರೋಪದ ಮೇಲೆ ನಟ ದರ್ಶನ್​​ರನ್ನು ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಬಳ್ಳಾರಿ ಜೈಲಿನಲ್ಲಿ ಒಬ್ಬಂಟಿಯಾಗಿದ್ದ, ದರ್ಶನ್​ಗೆ ಕಪ್ಪು ನಾಯಿಯ ದೋಸ್ತಿ ಆಗಿತ್ತಂತೆ. ನಿತ್ಯವೂ ದರ್ಶನ್  ಈ ಕಪ್ಪು ನಾಯಿಯ ಜತೆಗೆ ಟೈಮ್ ಸ್ಪೆಂಡ್  ಮಾಡುತ್ತಿದ್ದರು. ಸೆಲ್‌ ಬಳಿ ಬರೋ ಈ ಕಪ್ಪು ನಾಯಿಗೆ ಊಟವನ್ನು ದರ್ಶನ್ ಕೊಡ್ತಿದ್ದರಂತೆ. ಈ ಕಾರಣಕ್ಕೇನೆ ದರ್ಶನ್ ಎಲ್ಲಿಯೇ ಹೋದ್ರೂ ಈ ಕಪ್ಪು ನಾಯಿ  ದರ್ಶನ್‌ ಜತೆಗೆ ಬರುತ್ತಿತಂತೆ.

ಇನ್ನು ಜೈಲಿನಲ್ಲಿ ಒಂಟಿಯಾಗಿಯೇ ಇದ್ದ ದರ್ಶನ್‌ಗೆ ಈ ನಾಯಿ ಸಾಥ್‌‌ ಕೊಟ್ಟಿದೆ ಎಂಬ ಸುದ್ದಿಗಳು ವೈರಲ್‌ ಆಗಿದ್ದವು.  ಜೈಲಿನಿಂದ ಹೊರ ಬರುವಾಗಲೂ ಶ್ವಾನ ನಿಂತು ದರ್ಶನ್ ಅವರನ್ನೇ ನೋಡ್ತಾ ಇತ್ತು.

ದರ್ಶನ್‌ ಅವರು ಜೈಲಿನಿಂದ ಹೊರ ಬರುವಾಗ ಕುಂಟುತ್ತಲೇ ನಡೆದುಕೊಂಡು ಬಂದಿದ್ದಾರೆ. ಆ ವೇಳೆ ಈ ಶ್ವಾನ ನಿಂತುಕೊಂಡು ದರ್ಶನ್‌ ಅವರನ್ನೇ ನೋಡಿದೆ. ಬಳಿಕ ಅವರ ಹಿಂದಿಂದೆ ಬಂದಿದೆ. ದರ್ಶನ್‌‌ ಒಂದು ಕ್ಷಣ ಶ್ವಾನದ ಕಡೆಗೆ ನೋಡಿ ಅಲ್ಲಿಂದ ಹೊರಟು ಬಂದಿದ್ದಾರೆ.

ಇದನ್ನೂ ಓದಿ : ಮಗ ದರ್ಶನ್​ನ್ನು ನೋಡಲು ವಿಜಯಲಕ್ಷ್ಮಿ ನಿವಾಸಕ್ಕೆ ಬಂದ ತಾಯಿ ಮೀನಾ ತೂಗುದೀಪ..!

Leave a Comment

DG Ad

RELATED LATEST NEWS

Top Headlines

ನಕಲಿ ನಕ್ಷೆ ಸೃಷ್ಟಿಸಿ ಕಟ್ಟಡ ನಿರ್ಮಾಣ – ಮಾಲೀಕನ ವಿರುದ್ಧ FIR ದಾಖಲು..!

ಬೆಂಗಳೂರು : ಬಾಬುಸಾಬ್ ಪಾಳ್ಯ ಕಟ್ಟಡ ಕುಸಿತ ದುರಂತದ ಬೆನ್ನಲ್ಲೇ ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ನಕಲಿ ನಕ್ಷೆ ತಯಾರಿಸಿ ಕಟ್ಟಡ ನಿರ್ಮಿಸಿರುವ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ರಾಜರಾಜೇಶ್ವರಿನಗರ

Live Cricket

Add Your Heading Text Here