ನಟ ದರ್ಶನ್ಗೆ ಪ್ರಾಣಿಗಳ ಮೇಲೆ ತುಂಬಾ ಪ್ರೀತಿಯಿದೆ. ಹಾಗಾಗಿ ಮೈಸೂರಿನಲ್ಲಿರುವ ತಮ್ಮ ಫಾರ್ಮ್ ಹೌಸ್‌ನಲ್ಲಿ ಸಾಕಷ್ಟು ಪ್ರಾಣಿಗಳನ್ನು ಸಾಕಿದ್ದಾರೆ. ಹಸು, ಎತ್ತು, ಮೊಲ, ವಿಶೇಷ ಹಕ್ಕಿಗಳು ಹೀಗೆ ಹಲವಾರು ರೀತಿಯ ಪ್ರಾಣಿಗಳು ದಾಸನ ಫಾರ್ಮ್ ಹೌಸ್‌ನಲ್ಲಿ ನೋಡುಬಹುದು. ಆದರೆ ಬಳ್ಳಾರಿ ಜೈಲಿನಲ್ಲಿ ದರ್ಶನ್ಗೆ ಕಪ್ಪು ನಾಯಿಯ ದೋಸ್ತಿ ಆಗಿದೆ.
ಹೌದು.. ದರ್ಶನ್ ಎಲ್ಲೇ ಹೋದರು ಅವರ ಹಿಂದೆನೇ ಈ ಜೀವ ಇರುತ್ತಿತ್ತಂತೆ. ಮಾತ್ರವಲ್ಲ ದರ್ಶನ್ ರಿಲೀಸ್ ಆಗ್ತಿದ್ದಂತೆ ಅವರ ಫ್ಯಾನ್ಸ್ ಖುಷಿ ವ್ಯಕ್ತಪಡಿಸಿದ್ದಾರೆ. ಆದರೆ ಈ ಜೀವ ಮಾತ್ರ ತುಂಬ ಬೇಸರ ಪಟ್ಟುಕೊಂಡಿದೆ.
ಜೈಲಲ್ಲಿ ದಿನಾಲೂ ದರ್ಶನ್ ಈ ಕಪ್ಪು ನಾಯಿಯ ಜೊತೆಗೆ ಟೈಮ್ ಸ್ಪೆಂಡ್ ಮಾಡುತ್ತಿದ್ದರು. ಸೆಲ್ ಬಳಿ ಬರೋ ಈ ಕಪ್ಪು ನಾಯಿಗೆ ಊಟವನ್ನು ದಾಸ ದರ್ಶನ್ ಕೊಡ್ತಿದ್ದರು. ಈ ಕಾರಣಕ್ಕೇನೆ ದರ್ಶನ್ ಎಲ್ಲಿಯೇ ಹೋದ್ರೂ ಈ ಕಪ್ಪು ನಾಯಿ ದರ್ಶನ್ ಜೊತೆಗೆ ಬರುತ್ತಿತ್ತಂತೆ. ಹಾಗಾಗಿಯೇ ದಾಸನ ಈ ಹೊಸ ದೋಸ್ತ್ ಬ್ಲ್ಯಾಕ್ ಡಾಗ್ ಅನ್ನೋ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಜೈಲಿನಲ್ಲಿ ಒಂಟಿಯಾಗಿಯೇ ಇದ್ದ ದರ್ಶನ್ ಈ ನಾಯಿ ಸಾಥ್ ಕೊಟ್ಟಿದೆ. ಬೇಸರವನ್ನ ಕಳೆಯಲು ಜೊತೆಯಾಗಿದೆ. ಇನ್ನುಳಿದಂತೆ ದಾಸನ ಈ ಒಂದು ಕಪ್ಪು ನಾಯಿಯ ದೊಸ್ತಿಯ ಸುದ್ದಿ ಸಿಕ್ಕಾಪಟ್ಟೆ ವೈರಲ್ ಕೂಡ ಆಗಿದೆ ಅಂತಲೂ ಹೇಳಬಹುದು.
ಇದನ್ನೂ ಓದಿ : ದರ್ಶನ್ಗೆ ಬಿಗ್ ಶಾಕ್ - ಮಧ್ಯಂತರ ಬೇಲ್ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಲು ಮಹತ್ವದ ಚರ್ಚೆ..!