ತಮಿಳುನಾಡು : ತಮಿಳುನಾಡಿನ ತಿರುಚ್ಚಿ ಜಿಲ್ಲೆಯ ಅಂದನಲ್ಲೂರು ದೇವಸ್ಥಾನ ಬಳಿ ಹರಿಯುವ ಕಾವೇರಿ ನದಿ ದಡದಲ್ಲಿ ರಾಕೆಟ್ ಲಾಂಚರ್ ಪತ್ತೆಯಾಗಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಸದ್ಯ ಪೊಲೀಸರು ಅದನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿದ್ದಾರೆ.
ಬುಧವಾರದಂದು ಸಂಜೆ ಅಂದನಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡಿದ ಭಕ್ತರಿಗೆ ಇದು ಮೊದಲು ಕಾಣಿಸಿದೆ. ತಿಳಿ ನೀಲಿ ಮತ್ತು ಕಪ್ಪು ಲೋಹದ ವಸ್ತುವನ್ನು ಕಂಡ ಭಕ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ರಾಕೆಟ್ ಲಾಂಚರ್ ಅನ್ನು 117 ಪದಾತಿ ದಳದ ಬೆಟಾಲಿಯನ್ಗೆ ಹಸ್ತಾಂತರಿಸಿದ್ದಾರೆ. ಸದ್ಯ ಈ ಲಾಂಚರ್ ಎಲ್ಲಿಂದ ಬಂತು? ಅದು ಹೇಗೆ ನದಿದಲ್ಲಿ ತೇಲಿ ಬಂತು? ಇವೆಲ್ಲದರ ಕುರಿತು ತನಿಖೆ ನಡೆಯುತ್ತಿದೆ.
ಇದನ್ನೂ ಓದಿ : ರಿಲೀಸ್ಗೂ ಮುನ್ನ OTTಗೆ ಲಗ್ಗೆಯಿಟ್ಟ ‘ಮೂರು ಕಾಸಿನ ಕುದುರೆ’ ಸಿನಿಮಾ..!
Post Views: 274