Download Our App

Follow us

Home » ಮೆಟ್ರೋ » ಬೆಂಗಳೂರಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ – ಹೂವು, ಹಣ್ಣು, ಪಟಾಕಿ ಖರೀದಿಗೆ ಮುಗಿಬಿದ್ದ ಜನರು..!

ಬೆಂಗಳೂರಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ – ಹೂವು, ಹಣ್ಣು, ಪಟಾಕಿ ಖರೀದಿಗೆ ಮುಗಿಬಿದ್ದ ಜನರು..!

ಬೆಂಗಳೂರು : ದೀಪಾವಳಿಯನ್ನು ದೀಪಗಳ ಹಬ್ಬ ಎಂದೂ ಕರೆಯುತ್ತಾರೆ. ಇದು ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತದ ಭಾರತೀಯ ಸಮುದಾಯಗಳಲ್ಲಿ ಅತ್ಯಂತ ವ್ಯಾಪಕವಾಗಿ ಆಚರಿಸಲಾಗುವ ಹಬ್ಬಗಳಲ್ಲಿ ಒಂದಾಗಿದೆ. ದೀಪಾವಳಿ ಹಬ್ಬವು ಕತ್ತಲಿನ ಮೇಲೆ ಬೆಳಕಿನ ಬಳಿತನ್ನು, ಕೆಡುಕಿನ ಮೇಲೆ ಒಳ್ಳೆಯತನದ ಬೆಳಕನ್ನು, ಅಜ್ಞಾನದ ಮೇಲೆ ಜ್ಞಾನದ ಬೆಳಕನ್ನು, ಅಧರ್ಮದ ಮೇಲೆ ಧರ್ಮದ ಬೆಳಕನ್ನು ಬೀರುವ ಹಬ್ಬವಾಗಿದೆ.

ಸಿಲಿಕಾನ್ ಸಿಟಿಯಲ್ಲಿಂತೂ ದೀಪಾವಳಿ ಹಬ್ಬದ ಕಲರವ ಜೋರಾಗಿದೆ. ಹೂ-ಹಣ್ಣು, ತರಕಾರಿ ಹಾಗೂ ಪೂಜೆ ಸಾಮಗ್ರಿಗಳು, ಬಣ್ಣ ಬಣ್ಣದ ಅತ್ಯಾಕರ್ಷಕ ಆಕಾಶಬುಟ್ಟಿ, ವಿವಿಧ ವಿನ್ಯಾಸಗಳ ಹಣತೆ, ವಿವಿಧ ರೀತಿಯ ಪಟಾಕಿಗಳ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಕೆ.ಆರ್.ಮಾರ್ಕೆಟ್​ನಲ್ಲಿ ಕಿಕ್ಕಿರಿದು ಜನರು ತುಂಬಿದ್ದು, ಹೂವಿನ ಬೆಲೆ ಗಗನಕ್ಕೇರಿದ್ರೂ ಖರೀದಿ ಭರಾಟೆ ಜೋರಾಗೇ ನಡೆಯುತ್ತಿದೆ.

ಹೂವಿನ ರೇಟ್ ದುಬಾರಿ :

  • ಮಲ್ಲಿಗೆ ಹೂ ಕೆ.ಜಿಗೆ – 800-1000 ರೂ.
  • ಸೇವಂತಿಗೆ- 200-250 ರೂ.
  • ಸೇವಂತಿಗೆ ಹಾರ- 50-60 ರೂ.
  • ಗುಲಾಬಿ- 400 ರೂ.
  • ಚೆಂಡು ಹೂ- 70-80 ರೂ.
  • ಮಲ್ಲಿಗೆ ಹಾರ- 800 ರೂ.
  • ಕಮಲದ ಹಾರ- 400 ರೂ.

ಹಣ್ಣಿನ ರೇಟ್​ ಹೇಗಿದೆ..? 

  • ಸೇಬು ಕೆಜಿಗೆ- 100-200 ರೂ.
  • ದಾಳಿಂಬೆ- 100-200 ರೂ.
  • ಕಿತ್ತಳೆ ಹಣ್ಣು- 150 ರೂ.
  • ಸೀತಾಫಲ- 80-100 ರೂ.
  • ಮೂಸಂಬಿ- 40-120 ರೂ.
  • ಸೀಬೆಕಾಯಿ- 60-120 ರೂ.
  • ಅನಾನಸ್- 40-60 ರೂ.
  • ಏಲಕ್ಕಿ ಬಾಳೆಹಣ್ಣು- 80-100 ರೂ.
  • ಸಪೋಟ- 80 ರೂ.
  • ವೀಳ್ಯದೆಲೆ ಕಟ್ಟು- 100-120 ರೂ.

ಇದನ್ನೂ ಓದಿ : ಮಗನ ಬರ್ತಡೇ ದಿನವೇ ಮನೆಗೆ ಅಪ್ಪನ ಎಂಟ್ರಿ.. ಇಂದು ದರ್ಶನ್​​ ಪುತ್ರ ವಿನೀಶ್​ಗೆ​ ಹುಟ್ಟುಹಬ್ಬದ ಸಂಭ್ರಮ..!

Leave a Comment

DG Ad

RELATED LATEST NEWS

Top Headlines

ಮಗ ದರ್ಶನ್​ನ್ನು ನೋಡಲು ವಿಜಯಲಕ್ಷ್ಮಿ ನಿವಾಸಕ್ಕೆ ಬಂದ ತಾಯಿ ಮೀನಾ ತೂಗುದೀಪ..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಅ.30ರಂದು ದರ್ಶನ್‌ಗೆ 6 ವಾರಗಳ ಕಾಲ ಮಧ್ಯಂತರ ಜಾಮೀನು ಸಿಕ್ಕ ಹಿನ್ನೆಲೆ ರಿಲೀಸ್ ಆಗಿದ್ದಾರೆ. 5 ತಿಂಗಳ ಜೈಲುವಾಸದ

Live Cricket

Add Your Heading Text Here