ಬೆಂಗಳೂರು : ಜಮೀನು ಖಾತಾ ಮಾಡಿಕೊಡಲು ಫೋನ್ ಪೇ / ಆನ್ ಲೈನ್ ಮೂಲಕ ಲಂಚ ವಸೂಲಿ ಮಾಡಿದ್ದ ಬೆಂಗಳೂರು ದಕ್ಷಿಣ AC ರಜನಿಕಾಂತ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ದಕ್ಷಿಣ ವಿಭಾಗದ ನೂತನ ACಯಾಗಿ ಕೆ.ಎ.ಎಸ್ ಅಧಿಕಾರಿ ಅಪೂರ್ವ ಬಿದರಿ ಅವರನ್ನು ನೇಮಕ ಮಾಡಲಾಗಿದೆ.
ಕೆ.ಎ.ಎಸ್ ಅಧಿಕಾರಿ ಅಪೂರ್ವ ಬಿದರಿ ಅವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ರಜನಿಕಾಂತ್ ಇವರ ಸ್ಥಾನಕ್ಕೆ ವರ್ಗಾಯಿಸಿ ಸ್ಥಳನಿಯುಕ್ತಿಗೊಳಿಸಿ ಸರ್ಕಾರ ಆದೇಶಿಸಿದೆ. ಇನ್ನು ರಜನಿಕಾಂತ್ ಇವರಿಗೆ ಮುಂದಿನ ಸ್ಥಳನಿಯುಕ್ತಿಗಾಗಿ ಸಿಆಸು ಇಲಾಖೆಯಲ್ಲಿ ಕಾರ್ಯವರದಿ ಮಾಡಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ.
ಪ್ರಕರಣದ ಹಿನ್ನೆಲೆ : ಜಮೀನು ಖಾತಾ ಮಾಡಿಕೊಡಲು ಫೋನ್ ಪೇ / ಆನ್ ಲೈನ್ ಮೂಲಕ ಬೆಂಗಳೂರು ದಕ್ಷಿಣ AC ರಜನಿಕಾಂತ್ ವಿರುದ್ಧ ಜಮೀನು ಮಾಲೀಕ ಶಂಕರ್ ಗಂಭೀರ ಆರೋಪ ಮಾಡಿದ್ದರು. ಬಿಟಿವಿಗೆ AC ರಜನಿಕಾಂತ್ರ ಭ್ರಷ್ಟಾಚಾರದ ದಾಖಲೆ, ಆಡಿಯೋ ಸಾಕ್ಷಿಗಳು ಲಭ್ಯವಾಗಿತ್ತು. ತಾವರಕೆರೆ ಹೋಬಳಿಯ ಮುದ್ದಯ್ಯನಪಾಳ್ಯದಲ್ಲಿರುವ ಜಮೀನು ಭಾಗವಾದಾಗ ಖಾತಾ ಮಾಡಿಸಲು, ಸೆಪ್ಟಂಬರ್ 2ರಂದು AC ರಜನಿಕಾಂತ್ರನ್ನು ಶಂಕರ್ ಕುಟುಂಬ ಸಂಪರ್ಕಿಸಿದ್ದರು. ಬಂಗಾಲುರಮ್ಮ ಮತ್ತು ಜಯಮ್ಮ ಎಂಬವರಿಗೆ ಪಾಲಿನಲ್ಲಿ ಬಂದ ಸರ್ವೇ ನಂ 32/29ರಲ್ಲಿ 0.08 ಗುಂಟೆ, ಸರ್ವೇ ನಂ 32/11 ರಲ್ಲಿ 0.10 ಗುಂಟೆ ಖಾತಾ ಮಾಡಿಕೊಡಲು ಜಯಮ್ಮನ ಮಗ ಶಂಕರ, AC ರಜನೀಕಾಂತ್ ಬಳಿಗೆ ಹೋಗಿದ್ದರು.
ಈ ವೇಳೆ, AC ರಜನಿಕಾಂತ್ ತಮ್ಮ ಆಪ್ತರನ್ನು ಸಂಪರ್ಕಿಸಲು ಸೂಚಿಸಿದ್ದರು. ರಜನಿಕಾಂತ್ ಪರವಾಗಿ ಆಪ್ತ ಉಮೇಶ್ 60 ಸಾವಿರ ಫೋನ್ ಪೇ ಮಾಡಿಸಿಕೊಂಡಿದ್ದರು. 60 ಸಾವಿರ ಲಂಚ ಪಡೆದ ರಜನಿಕಾಂತ್, ಜಯಮ್ಮ ಹೆಸರಿಗೆ ಖಾತಾ ಮಾಡಿಕೊಟ್ಟಿದ್ದಾರೆ ಎಂದು ಬೆಂಗಳೂರು ದಕ್ಷಿಣ AC ರಜನಿಕಾಂತ್ ವಿರುದ್ಧ ಶಂಕರ್ ಗಂಭೀರ ಆರೋಪ ಮಾಡಿದ್ದರು.
ಇದನ್ನೂ ಓದಿ : ಮಗನ ಬರ್ತಡೇ ದಿನವೇ ಮನೆಗೆ ಅಪ್ಪನ ಎಂಟ್ರಿ.. ಇಂದು ದರ್ಶನ್ ಪುತ್ರ ವಿನೀಶ್ಗೆ ಹುಟ್ಟುಹಬ್ಬದ ಸಂಭ್ರಮ..!