Download Our App

Follow us

Home » ಸಿನಿಮಾ » ಮಗನ ಬರ್ತಡೇ ದಿನವೇ ಮನೆಗೆ ಅಪ್ಪನ ಎಂಟ್ರಿ.. ಇಂದು ದರ್ಶನ್​​ ಪುತ್ರ ವಿನೀಶ್​ಗೆ​ ಹುಟ್ಟುಹಬ್ಬದ ಸಂಭ್ರಮ..!

ಮಗನ ಬರ್ತಡೇ ದಿನವೇ ಮನೆಗೆ ಅಪ್ಪನ ಎಂಟ್ರಿ.. ಇಂದು ದರ್ಶನ್​​ ಪುತ್ರ ವಿನೀಶ್​ಗೆ​ ಹುಟ್ಟುಹಬ್ಬದ ಸಂಭ್ರಮ..!

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲು ಸೇರಿದ್ದ ದರ್ಶನ್​ಗೆ ಮಧ್ಯಂತರ ಜಾಮೀನು ಸಿಕ್ಕಿದೆ. ಬೆನ್ನು ನೋವಿಗೆ ಚಿಕಿತ್ಸೆ ಪಡೆಯಲು ಅವರಿಗೆ ಅವಕಾಶ ಮಾಡಿಕೊಡಲಾಗಿದೆ. ಈಗ ಜೈಲಿನಿಂದ ಹೊರ ಬಂದಿರೋ ಅವರು ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ಪತ್ನಿ ವಿಜಯಲಕ್ಷ್ಮೀ ನಿವಾಸಕ್ಕೆ ತೆರಳಿದ್ದಾರೆ. ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಇಂದು (ಅಕ್ಟೋಬರ್ 31) ಮಗ ವಿನೀಶ್ ಜನ್ಮದಿನ. ಈ ವಿಶೇಷ ದಿನಕ್ಕೆ ಸರಿಯಾಗಿ ಅವರು ಮನೆಗೆ ಬಂದಿದ್ದಾರೆ.

ಮಗನ ಹುಟ್ಟುಹಬ್ಬದ ಹಿಂದಿನ ದಿನವೇ ದರ್ಶನ್ ರಿಲೀಸ್ ಆಗಿದ್ದು, ಇದು ದರ್ಶನ್ ಕುಟುಂಬದ ಡಬಲ್ ಖುಷಿಗೆ ಕಾರಣವಾಗಿದೆ. ಇಂದು (ಅಕ್ಟೋಬರ್ 31) ಹುಟ್ಟುಹಬ್ಬ ಆಚರಿಸಿಕೊಳ್ಳಲಿರೋ ವಿನೀಶ್ ಫುಲ್ ಖುಷಿಯಾಗಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಅಪ್ಪನಿಂದ ಮಗ ವಿನೀಶ್ ದೂರವಿದ್ದರು. ಇದೀಗ ಸಹಜವಾಗಿ ಅಪ್ಪನ ಜೈಲಿಂದ ರಿಲೀಸ್​ ಆಗಿ ವಾಪಸ್​ ಬಂದಿರೋದು ಆತನಿಗೆ ಸಖತ್ ಸಂತೋಷ ನೀಡಿದೆ.

ನಿನ್ನೆ ಬಳ್ಳಾರಿಯಿಂದ ಕಾರಿನಲ್ಲಿ ಪತ್ನಿ ಜೊತೆ ಹೊಸಕೆರೆಹಳ್ಳಿ ನಿವಾಸಕ್ಕೆ ದರ್ಶನ್ ಆಗಮಿಸಿದ್ದಾರೆ. ದರ್ಶನ್ ಅವರನ್ನು ನೋಡಲು ಫ್ಯಾನ್ಸ್ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದರು. ಅವರಿಂದ ತಪ್ಪಿಸಿಕೊಂಡು ದರ್ಶನ್ ಮನೆ ಸೇರಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯಬಾರದು ಎನ್ನುವ ಕಾರಣಕ್ಕೆ ದರ್ಶನ್​ ಮನೆಗೆ ಪೊಲೀಸ್ ಬಿಗಿ ಭದ್ರತೆ ನೀಡಲಾಗಿದೆ. ಒಟ್ಟಿನಲ್ಲಿ ಜೈಲಿಂದ ದರ್ಶನ್ ಹೊರ ಬರುತ್ತಿದ್ದಂತೆ ಅಭಿಮಾನಿಗಳು ಸಂಭ್ರಮಿಸಿದ್ದು, ಹಲವು ಕಡೆಗಳಲ್ಲಿ ಪಟಾಕಿ ಕೂಡ ಸಿಡಿಸಲಾಗಿದೆ.

ಇನ್ನು ದರ್ಶನ್​ಗೆ ಸದ್ಯದ ಮಟ್ಟಿಗೆ ಇದು ಮಧ್ಯಂತರ ಜಾಮೀನು. ದರ್ಶನ್​ ಅವರು ಆರು ವಾರಗಳ ಬಳಿಕ ಮತ್ತೆ ಜೈಲು ಸೇರಬೇಕಿದೆ. ಅಲ್ಲಿಯವರೆಗೆ ಅವರ ಆರೋಗ್ಯ ಯಾವ ರೀತಿಯಲ್ಲಿ ಚೇತರಿಕೆ ಕಾಣುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ : ಬಳ್ಳಾರಿಯಿಂದ ಬೆಂಗಳೂರಿಗೆ ಬಂದ ದರ್ಶನ್ ​​​- ಅಭಿಮಾನಿಗಳನ್ನು ಸಮಾಧಾನಪಡಿಸಲು ರೋಡಿಗಿಳಿದ ಪುತ್ರ ವಿನೀಶ್​..!

Leave a Comment

DG Ad

RELATED LATEST NEWS

Top Headlines

ರಿಲೀಸ್​​ಗೂ ಮುನ್ನ OTTಗೆ ಲಗ್ಗೆಯಿಟ್ಟ ‘ಮೂರು ಕಾಸಿನ ಕುದುರೆ’ ಸಿನಿಮಾ..!

ಇತ್ತೀಚಿನ ದಿನಗಳಲ್ಲಿ ಒಂದು ಸಿನಿಮಾ ನಿರ್ಮಾಣ ಮಾಡೋದು ಎಷ್ಟು ಕಷ್ಟವೋ ಅದಕ್ಕಿಂತ ಕಷ್ಟಕರವಾದ್ದು, ಅದನ್ನು ರಿಲೀಸ್ ಮಾಡಿ ಜನರಿಗೆ ತಲುಪಿಸೋದು. ಹೀಗೇ ಅದೆಷ್ಟೋ ಚಿತ್ರತಂಡಗಳು ಸಿನಿಮಾ ನಿರ್ಮಿಸಿದ್ದರೂ

Live Cricket

Add Your Heading Text Here