ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A-2 ಆರೋಪಿಯಾಗಿ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿದ್ದ ನಟ ದರ್ಶನ್ಗೆ ಹೈಕೋರ್ಟ್ ಇಂದು ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಬೇಲ್ ಸಿಕ್ಕ ಹಿನ್ನೆಲೆ ಇದೀಗ ನಟ ದರ್ಶನ್ ಜೈಲಿನಿಂದ ಹೊರ ಬಂದಿದ್ದಾರೆ.
ಬೆನ್ನು ನೋವಿನ ಹಿನ್ನೆಲೆಯಲ್ಲಿ ದರ್ಶನ್ ಅವರು ಜಾಮೀನಿಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದರು. ದರ್ಶನ್ ಅವರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಇಂದು 6 ವಾರಗಳ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಹೈಕೋರ್ಟ್ ಜಾಮೀನು ಕರುಣಿಸಿದ ಹಿನ್ನೆಲೆಯಲ್ಲಿ ದರ್ಶನ್ ಕುಟುಂಬಸ್ಥರು ಕಾನೂನು ಪ್ರಕ್ರಿಯೆಗಳನ್ನ ಮುಗಿಸಿದ್ದಾರೆ. ಹೈಕೋರ್ಟ್ ಜಾಮೀನು ಮಂಜೂರು ಪ್ರತಿಯನ್ನ CCH 57 ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. CCH 57 ಕೋರ್ಟ್ ದರ್ಶನ್ ರಿಲೀಸ್‌ಗೆ ಆರ್ಡರ್ ಮಾಡಿದೆ. ಬಿಡುಗಡೆಯ ಆರ್ಡರ್ ಕಾಪಿಯನ್ನು ಬಳ್ಳಾರಿ ಜೈಲಿಗೆ ಕಳುಹಿಸಲಾಗಿದೆ.
ದರ್ಶನ್ ಜಾಮೀನಿನ ಪ್ರತಿ ಜೈಲಾಧಿಕಾರಿಗಳ ಕೈ ಸೇರಿದ ಮೇಲೆ ದರ್ಶನ್ ಪರ ವಕೀಲರು ಬಿಡುಗಡೆಗೆ ತಯಾರಿ ನಡೆಸಿದರು. ಜೈಲು ಅಧಿಕಾರಿಗಳು ರಿಜಿಸ್ಟರ್ ಪುಸ್ತಕ ಹಾಗೂ ಹೈಕೋರ್ಟ್ ಜಾಮೀನು ಆದೇಶದ ಪ್ರತಿಯ ಮೇಲೆ ದರ್ಶನ್ ಅವರಿಂದ ಸಹಿ ಪಡೆದು ಬಿಡುಗಡೆಗೆ ಸೂಚಿಸಿದ್ದಾರೆ.
ಹೈ ಸೆಕ್ಯೂರಿಟಿ ಸೇಲ್ನಿಂದ ದರ್ಶನ್ ಹೊರ ಬಂದಿದ್ದಾರೆ. ದರ್ಶನ್ ರಿಲೀಸ್ ಆದ ಖುಷಿಯನ್ನು ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. ಅಖಿಲ ಕರ್ನಾಟಕ ದರ್ಶನ್ ಅಭಿಮಾನಿಗಳ ಸಂಘದಿಂದ ಸೆಲೆಬ್ರೇಷನ್ ನಡೆಯುತ್ತಿದೆ.
ಇದನ್ನೂ ಓದಿ : ರಾಜ್ಯೋತ್ಸವ ಪ್ರಶಸ್ತಿಗೆ ಘನತೆ ತಂದುಕೊಟ್ಟ ಹಿರಿಯ ವಕೀಲ ಎಸ್. ಬಾಲನ್..!