Download Our App

Follow us

Home » ರಾಜಕೀಯ » ಬಿಜೆಪಿ ಬಂಡಾಯ ಟೀಂಗೆ ವರಿಷ್ಠರ ಬಿಗ್​ ಶಾಕ್ ​​​- ಬೈ ಎಲೆಕ್ಷನ್​ ಸ್ಟಾರ್​ ಪ್ರಚಾರಕರ ಪಟ್ಟಿಯಿಂದಲೇ ಕೊಕ್​​​..!

ಬಿಜೆಪಿ ಬಂಡಾಯ ಟೀಂಗೆ ವರಿಷ್ಠರ ಬಿಗ್​ ಶಾಕ್ ​​​- ಬೈ ಎಲೆಕ್ಷನ್​ ಸ್ಟಾರ್​ ಪ್ರಚಾರಕರ ಪಟ್ಟಿಯಿಂದಲೇ ಕೊಕ್​​​..!

ಬೆಂಗಳೂರು : ನ.13ರಂದು ಶಿಗ್ಗಾಂವಿ, ಸಂಡೂರು ಮತ್ತು ಚನ್ನಪಟ್ಟಣ ಉಪಚುನಾವಣೆ ನಡೆಯಲಿದೆ. ಈಗಾಗಲೇ ಮೂರು ಕ್ಷೇತ್ರದಲ್ಲಿ ಮೂರು ಪಕ್ಷಗಳು ಕಸರತ್ತು ಮಾಡುತ್ತಿವೆ. ಅಭ್ಯರ್ಥಿಗಳು ಈಗಾಗಲೇ ಪ್ರಚಾರ ಕೂಡ ಆರಂಭಿಸಿದ್ದಾರೆ. ಈ ಮಧ್ಯೆ ಬಿಜೆಪಿ ತನ್ನ ಸ್ಟಾರ್​ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದೆ.

ಬೈ ಎಲೆಕ್ಷನ್​ ಸ್ಟಾರ್​ ಪ್ರಚಾರಕರ ಪಟ್ಟಿಯಿಂದಲೇ ಬಿಜೆಪಿ ಬಂಡಾಯ ಟೀಂಗೆ ವರಿಷ್ಠರು ಕೊಕ್ ನೀಡಿದ್ದಾರೆ.​​​ 40 ಸ್ಟಾರ್​ ಪ್ರಚಾರಕರ ಪಟ್ಟಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಪ್ರತಾಪ್ ಸಿಂಹ, ಕುಮಾರ್ ಬಂಗಾರಪ್ಪ ಸೇರಿ ಹಲವರಿಗೆ ಕೊಕ್ ನೀಡಲಾಗಿದೆ. ಇದ್ದಕ್ಕೆ ನಾಯಕತ್ವದ ವಿರುದ್ಧ ಧ್ವನಿಯೆತ್ತಿದ್ದು ಕಾರಣ ಎನ್ನಲಾಗಿದೆ.

ಬಿ.ಎಸ್​.ಯಡಿಯೂರಪ್ಪ, ರಾಧಾಮೋಹನ್ ದಾಸ್ ಅಗರ್ವಾಲ್, ಪ್ರಹ್ಲಾದ್ ಜೋಶಿ, ಬಿ.ವೈ.ವಿಜಯೇಂದ್ರ, ಆರ್​.ಅಶೋಕ್, ಸುಧಾಕರ್ ರೆಡ್ಡಿ, ಸಿ.ಎನ್​.ಮಂಜುನಾಥ್, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ, ಸಿ.ಟಿ.ರವಿ, ಜಗದೀಶ್ ಶೆಟ್ಟರ್, ತಾರಾ ಅನುರಾಧ, ಶ್ರುತಿ ಸೇರಿದಂತೆ 40 ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಶಿಗ್ಗಾಂವಿಯಲ್ಲಿ ಮಾಜಿ ಸಿಎಂ ಬಸವರಾಜ್​ ಬೊಮ್ಮಾಯಿ ಪುತ್ರ ಭರತ್​ ಬೊಮ್ಮಾಯಿಗೆ ಟಿಕೆಟ್​ ಸಿಕ್ಕಿದ್ದರೆ, ಸಂಡೂರಿನಲ್ಲಿ ರೆಡ್ಡಿ ಆಪ್ತ ಬಂಗಾರು ಹನುಮಂತುಗೆ ಟಿಕೆಟ್​ ಕೊಡಲಾಗಿದೆ. ಹೈವೋಲ್ಟೇಜ್ ಚನ್ನಪಟ್ಟಣ ಕ್ಷೇತ್ರಕ್ಕೆ ನಿಖಿಲ್​ ಕುಮಾರಸ್ವಾಮಿಗೆ ಟಿಕೆಟ್ ನೀಡಲಾಗಿದೆ.

ಇದನ್ನೂ ಓದಿ : ಹಾಸನಾಂಬೆ ಉತ್ಸವದ ವೇಳೆ ಪೊಲೀಸ್-ಡಿಸಿ ಕಚೇರಿ ಸಿಬ್ಬಂದಿ ನಡುವೆ ಮಾರಾಮಾರಿ..!

Leave a Comment

DG Ad

RELATED LATEST NEWS

Top Headlines

ನಟ ಸಲ್ಮಾನ್ ಖಾನ್​ಗೆ ಮತ್ತೆ ಜೀವ ಬೆದರಿಕೆ.. 2 ಕೋಟಿ ರೂ.ಗೆ ಬೇಡಿಕೆ..!

ಮುಂಬೈ : ಬಾಲಿವುಡ್ ಸೂಪರ್‌ ಸ್ಟಾರ್ ಸಲ್ಮಾನ್ ಖಾನ್‌ ಅವರಿಗೆ ಮತ್ತೊಂದು ಕೊಲೆ ಬೆದರಿಕೆ ಬಂದಿದೆ. ಅನಾಮಧೇಯ ವ್ಯಕ್ತಿ 2 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟು, ಹಣ ಪಾವತಿಸದಿದ್ದರೆ ನಟನನ್ನು

Live Cricket

Add Your Heading Text Here