ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿರುವ ದರ್ಶನ್ಗೆ ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ನಿರಾಕರಿಸಿತ್ತು. ಈ ಹಿನ್ನೆಲೆ ದರ್ಶನ್ ಪರ ವಕೀಲರು ಅನಾರೋಗ್ಯ ಕಾರಣ ನೀಡಿ ಹೈಕೋರ್ಟ್‌ಗೆ ತುರ್ತು ಜಾಮೀನು ಅರ್ಜಿ ಸಲ್ಲಿಸಿದ್ದರು. ಕಳೆದ ಸೋಮವಾರ ವಿಚಾರಣೆ ನಡೆಸಿದ ಹೈಕೋರ್ಟ್ ಬಳ್ಳಾರಿ ಜೈಲು ಅಧಿಕಾರಿಗಳಿಗೆ ದರ್ಶನ್ನ ಆರೋಗ್ಯ ಬಗ್ಗೆ ಮಾಹಿತಿ ನೀಡುವಂತೆ ಸೂಚನೆ ನೀಡಿತ್ತು. ಕೇಸ್‌ನ ವಿಚಾರಣೆಯನ್ನು ಅಕ್ಟೋಬರ್ 28ಕ್ಕೆ ಮುಂದೂಡಿತ್ತು.
ಅ.23ರಂದು ಬಳ್ಳಾರಿಯ ಬೀಮ್ಸ್ ವೈದ್ಯರು ದರ್ಶನ್ನ ವೈದ್ಯಕ್ಕೀಯ ಪರೀಕ್ಷೆಯನ್ನು ನಡೆಸಿದ್ದರು. ವೈದ್ಯರು ಕಾರಾಗೃಹದ ಅಧಿಕಾರಿಗಳಿಗೆ ಗುರುವಾರ ವೈದ್ಯಕೀಯ ವರದಿ ಸಲ್ಲಿಸಿದ್ದಾರೆ. ವರದಿ ಆಧಾರದ ಮೇಲೆ ದರ್ಶನ್ ಅವರ ಚಿಕಿತ್ಸೆಗೆ ಸಂಬಂಧಿಸಿದಂತೆ ಜೈಲಿನ ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ಜತೆಗೆ ಕೋರ್ಟ್‌ಗೂ ನಟನ ಆರೋಗ್ಯದ ಬಗ್ಗೆ ವರದಿ ನೀಡಿದ್ದಾರೆ.
ಹಿರಿಯ ವಕೀಲರಾದ ಸಿವಿ ನಾಗೇಶ್ ವಾದ ಮಂಡಿಸಲಿದ್ದು, ಗಂಭೀರ ಪ್ರಕರಣವಾಗಿರೋದ್ರಿಂದ ಬೇಲ್ ಸಿಗೋದು ಡೌಟ್ ಆಗಿದೆ. ಮೆಡಿಕಲ್ ಗ್ರೌಂಡ್ ಮೇಲೆ ಬಳ್ಳಾರಿಯಿಂದ ಶಿಫ್ಟ್ ಆಗಬಹುದು. ಬೆಂಗಳೂರಿನಲ್ಲಿ ತಜ್ಞ ವೈದ್ಯರ ಬಳಿ ಚಿಕಿತ್ಸೆಗೆ ಅನುಮತಿ ಸಿಗಬಹುದು. ಇಂದು ನಡೆಯುವ ವಾದ-ಪ್ರತಿವಾದ ಹೇಗಿರುತ್ತೆ..? ಸರ್ಕಾರಿ ಪರ ವಕೀಲರು ಏನ್ ಅಬ್ಜೆಕ್ಷನ್ ಸಲ್ಲಿಸ್ತಾರೆ..? ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ದರ್ಶನ್ ಬೇಲ್ ಅರ್ಜಿ ಭಾರೀ ಕುತೂಹಲ ಕೆರಳಿಸಿದೆ.
ಇದನ್ನೂ ಓದಿ : ‘ಬಘೀರ’ ಸಿನಿಮಾದಲ್ಲಿದೆ ಹಾಲಿವುಡ್ ರೇಂಜ್ನ ಹೈವೋಲ್ಟೇಜ್ ಆಕ್ಷನ್.. ಈ ಬಗ್ಗೆ ರೋರಿಂಗ್ ಸ್ಟಾರ್ ಶ್ರೀಮುರಳಿ ಹೇಳಿದ್ದೇನು.?