ವಿಜಯಪುರ : ವಿಜಯಪುರ ಜಿಲ್ಲೆಯಲ್ಲಿ ರೈತರ ಜಮೀನುಗಳನ್ನು ವಕ್ಫ್ ಬೋರ್ಡ್‌ಗೆ ಸೇರಿಸುವ ವಿಚಾರ ತೀವ್ರ ಚರ್ಚೆಗೆ ಕಾರಣವಾಗಿದೆ. ಇದೀಗ ಈ ವಿಚಾರವಾಗಿ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೀಗ ಈ ವಿಚಾರವಾಗಿ ವಿಜಯಪುರದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಒಂದ್ ಫೂಟ್ ಜಮೀನು ವಕ್ಫ್ಗೆ ಬಿಟ್ಟು ಕೊಡಲ್ಲ. ಜಮೀನು ಉಳಿಸಿಕೊಳ್ಳಲು ಪ್ರಾಣ ಹೋದ್ರೂ ಪರವಾಗಿಲ್ಲ ಎಂದಿದ್ದಾರೆ.
ಇನ್ನು16 ಸಾವಿರ ಎಕರೆ ಆಗೈತಿ, ಜಮೀರ ಬರುವ ಮೊದಲ 11 ಸಾವಿರ ಎಕರೆ ಅಂದಿದ್ದರು. ಈಗ 16 ಸಾವಿರ ಎಕರೆ ಅನ್ನಲಿಲಕತ್ತಾರ, ಮುಂದ 20 ಸಾವಿರ ಅಂತಾರ, ಮುಂದೆ ವಿಧಾನಸಭೆ ನಮ್ಮದು ಅಂತಾರೆ. ದೇವಸ್ಥಾನ ನಮ್ಮವು ಅಂತಾರೆ ಮೊದಲು ವಕ್ಪ್ ಕಾಯ್ದೆ ತೊಲಗಬೇಕಿದೆ ಎಂದು ಗುಡುಗಿದ್ದಾರೆ.
ನೋಟಿಸ್ ಬಂದಿರೋ ರೈತರು ಆತಂಕ ಪಡೋದು ಬೇಡ. ನ್ಯಾಯ ಕೊಡಿಸಲು ಹೈಕೋರ್ಟ್ನಲ್ಲಿ ಹೋರಾಟ ಮಾಡ್ತೀನಿ. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಜನಜಾಗೃತಿ ಮಾಡುತ್ತೇವೆ ಎಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಯತ್ನಾಳ್ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ : ಯಲಹಂಕದಲ್ಲಿ ಮತ್ತೆ ಭೂ ಮಾಫಿಯಾ ಸದ್ದು.. ಸೂರಿಗಾಗಿ ಬೀದಿಗೆ ಬಂದ ದೇಶ ಕಾದಿದ್ದ ನೂರಾರು ಸೈನಿಕರು..!
Post Views: 43