ಕಲಬುರಗಿ : ಅಶ್ಲೀಲ ಮೇಸೆಜ್ಗಳನ್ನಇಟ್ಟುಕೊಂಡು ಮಾಜಿ ಸಚಿವ ಮಾಲೀಕಯ್ಯ ಗುತ್ತೆದಾರ್ ಮಗನಿಗೆ ಹಣಕ್ಕೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ದಂಪತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆಡಿಯೋ-ವಿಡಿಯೋ ಬಿಡುಗಡೆ ಮಾಡದಿರಲು 20 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ ನಲಪಾಡ್ ಬ್ರಿಗೇಡ್‌ನ ಕಲಬುರಗಿ ಘಟಕದ ಅಧ್ಯಕ್ಷೆ ಹಾಗೂ ಆಕೆಯ ಪತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇದೀಗ ಕಲಬುರಗಿಯಲ್ಲಿ ಹನಿಟ್ರ್ಯಾಪ್ನದ್ದೇ ಗದ್ದಲ ಶುರುವಾಗಿದೆ.
ಮಂಜುಳಾ ಪಾಟೀಲ್ ತನಿಖೆಯಲ್ಲಿ ಸ್ಫೋಟಕ ಸತ್ಯ ಬಯಲಾಗಿದೆ. ಹನಿಟ್ರ್ಯಾಪ್ ಮಾಡಲು ಹೋಗಿ ಸಿಸಿಬಿ ಬಲೆಗೆ ಬಿದ್ದಿರುವ ಮಂಜುಳಾ ಪಾಟೀಲ್ ಬ್ಯಾಗ್ ನಲ್ಲಿ 6 ಸ್ಮಾರ್ಟ್ ಪೋನ್ ಪತ್ತೆಯಾಗಿವೆ. ಈ ಆರು ಫೋನ್ಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡು ಪರಿಶೀಲನೆ ಮಾಡಿದಾಗ ಬರೋಬ್ಬರಿ ಎಂಟು ಜನರ ಖಾಸಗಿ ವಿಡಿಯೋಗಳು ಪತ್ತೆಯಾಗಿವೆ. ಮೊಬೈಲ್ ನಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ, ಪೊಲೀಸ್ ಅಧಿಕಾರಿ , ಪಿಡಬ್ಲೂಡಿ ಅಧಿಕಾರಿ ಸೇರಿ ಎಂಟು ಜನರ ವಿಡಿಯೋಗಳು ಪತ್ತೆಯಾಗಿದ್ದು, ಈ ಬಗ್ಗೆ ಸಿಸಿಬಿ ಪೊಲೀಸರು ಒಂದೊಂದಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಬಿಟಿವಿಗೆ ಕಲಬುರಗಿಯ ಹನಿಟ್ರ್ಯಾಪ್ ಸ್ಫೋಟಕ ಮಾಹಿತಿ ಲಭ್ಯವಾಗಿದೆ.
ಮಾಜಿ ಸಚಿವರ ಪುತ್ರನಿಗೆ ಡಿಮ್ಯಾಂಡ್ ಇಟ್ಟಿದ್ದ ಸ್ಫೋಟಕ ಆಡಿಯೋ ಲಭ್ಯವಾಗಿದೆ. ಪುತ್ರನಿಗೆ ಕರೆ ಮಾಡಿ 20 ಲಕ್ಷ ಕೇಳಿ, ನಾನು ಬಾರ್ಗೇನ್ ಮಾಡ್ತಾ ಕೂರಲ್ಲ ಬೇಗ ಕೊಟ್ಟು ಬಿಡಿ. 20 ಲ್ಯಾಕ್ಸ್ ಕೊಟ್ಟರೆ ನಾನು ಸುಮ್ಮನೆ ಇರ್ತೀನಿ, ತಂಗಿಗೆ ಕೊಟ್ಟೇ, ಮಗಳಿಗೆ ಕೊಟ್ಟೇ ಎಂದುಕೊಳ್ಳಿ. ಇದರಲ್ಲಿ ನನ್ನ ತಪ್ಪು ಏನಿದೆ ಹೇಳಿ ಎಂದು ಮಂಜುಳಾ ಪಾಟೀಲ್ ಹೇಳಿದ್ದಾರೆ.
ಇದನ್ನೂ ಓದಿ : ಮುಂಬೈನ ರೈಲು ನಿಲ್ದಾಣದಲ್ಲಿ ಕಾಲ್ತುಳಿತ – 9 ಮಂದಿಗೆ ಗಾಯ..!