ಕಾರವಾರ : ಮೀನುಗಾರಿಕೆ ಬೋಟ್ವೊಂದು ಮುಳುಗಡೆಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ತಾರೇಬಾಗಿಲು ಸಮೀಪದ ಸಮುದ್ರದಲ್ಲಿ ನಡೆದಿದೆ. ಬೋಟ್ನಲ್ಲಿದ್ದ ಏಳು ಜನ ಮೀನುಗಾರರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಂಕೋಲದ ಬೆಳಂಬಾರ ಕಡಲತೀರದಿಂದ ಮೀನುಗಾರಿಕೆಗೆ ಹೊರಟಿದ್ದ ಮಂಜುನಾಥ್ ಕಾರ್ವಿ ಎಂಬವರ ಮಾಲೀಕತ್ವದ ಶ್ರೀ ನವರತ್ನ ಹೆಸರಿನ ಬೋಟ್ ಹೊನ್ನಾವರದ ತಾರೇಬಾಗಿಲು ಸಮೀಪ ಮೀನುಗಾರಿಕೆ ನಡೆಸುವಾಗ ಬೋಟಿನ ಹೊರಭಾಗಕ್ಕೆ ಹಾನಿಯಾದ್ದರಿಂದ ಬೋಟ್ ಒಳಗೆ ನೀರು ತುಂಬಿ ಮುಳುಗಡೆಯಾಗಿದೆ.
ತಕ್ಷಣ ಸ್ಥಳೀಯ ಮೀನುಗಾರಿಕಾ ಬೋಟ್ನ ಇಕ್ಬಾಲ್ ಅಬ್ದುಲ್ ಗಫೂರ್ ಎಂಬುವವರು ತಮ್ಮ ಬೋಟ್ನಿಂದ ಏಳುಜನ ಮೀನುಗಾರರ ರಕ್ಷಣೆ ಮಾಡಿದ್ದಾರೆ.
ವೆಂಕಟೇಶ್ ಖಾರ್ವಿ, ನಾಗಪ್ಪ ಖಾರ್ವಿ, ಸಂದೀಪ್ ಖಾರ್ವಿ, ವಿಕಾಸ್ ಖಾರ್ವಿ, ವಿಘ್ನೇಶ್ ಖಾರ್ವಿ, ರಜತ್ ಬಾಣಾವಳಿಕರ್ ಹಾಗೂ ಲತೇಶ್ ಖಾರ್ವಿ ಎಂಬ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
ಇದನ್ನೂ ಓದಿ : ನೂತನ ಸಂಪುಟ ರಚನೆಗೆ ಕಸರತ್ತು – 15ಕ್ಕೂ ಹೆಚ್ಚು ಹಳಬರಿಗೆ ಕೊಕ್.. ದೆಹಲಿಯಲ್ಲಿ ಸಚಿವರ ಲಿಸ್ಟ್ ಫೈನಲ್?








