ತಾಯಿಯನ್ನು ಕಳೆದುಕೊಂಡ ದು:ಖದಲ್ಲಿರುವ ಕಿಚ್ಚ ಸುದೀಪ್ ಈ ವಾರ ಬಿಗ್ಬಾಸ್ನ ವೀಕೆಂಡ್ ಪಂಚಾಯಿತಿಗೆ ಬಂದಿಲ್ಲ. ಹಾಗಾಗಿ ಶನಿವಾರದ ಎಪಿಸೋಡ್ಗೆ ನಿರ್ದೇಶಕ ಯೋಗರಾಜ್ ಭಟ್ ಮನೆಗೆ ಬಂದಿದ್ದರು. ಭಾನುವಾರದ ಎಪಿಸೋಡ್ಗೆ ಸೃಜನ್ ಲೋಕೇಶ್ ಬಂದಿದ್ದಾರೆ.
ಮನೆಗೆ ಬಂದಿರುವ ಸೃಜನ್ ಲೋಕೇಶ್ ತಮ್ಮೊಟ್ಟಿಗೆ ಎರಡು ಟಾಟಾ ಕರ್ವ್ ಕಾರುಗಳನ್ನು ಸಹ ತಂದಿದ್ದರು. ಮನೆಗೆ ಬಂದಿದ್ದ ಖಾಲಿ ಕಾರುಗಳು ಎಲಿಮಿನೇಟ್ ಆದ ಒಬ್ಬ ಸ್ಪರ್ಧಿಯನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗಿವೆ.
ಬಿಗ್‌ಬಾಸ್ ಮನೆಗೆ ಬಂದ ಸೃಜನ್ ಮೊದಲಿಗೆ ಸ್ಪರ್ಧಿಗಳಿಗೆ ವಿವಿಧ ಟಾಸ್ಕ್ಗಳನ್ನು ನೀಡಿದ್ದಾರೆ. ಕೆಲವು ತಮಾಷೆಯ ಆಟಗಳನ್ನು ಆಡಿಸಿದ್ದಾರೆ. ಆ ನಂತರ ಮನೆಯಿಂದ ಯಾರು ಹೊರಗೆ ಹೋಗಬೇಕು ಮತ್ತು ಏಕೆ? ಕಾರಣ ನೀಡಿ ಎಂದು ಸ್ಪರ್ಧಿಗಳಲ್ಲಿ ಹೇಳಿದ್ದಾರೆ ಅದರಂತೆ ಐಶ್ವರ್ಯಾ ಸೇರಿದಂತೆ ಇನ್ನು ಕೆಲವರು ವಿಕ್ರಂ ಹೆಸರು ಹೇಳಿದ್ದಾರೆ. ಕೆಲವರು ಉಗ್ರಂ ಮಂಜು ಹೆಸರು ಹೇಳಿದ್ದಾರೆ. ಹೀಗೆ ಒಬ್ಬೊಬ್ಬರು ಒಬ್ಬರ ಹೆಸರು ಹೇಳಿದ್ದಾರೆ. ಕೊನೆಗೆ ಮತಗಳ ಆಧಾರದಲ್ಲಿ ಒಬ್ಬ ಸ್ಪರ್ಧಿಯನ್ನು ಇಂದು ಬಿಗ್‌ಬಾಸ್ ಮನೆಯಿಂದ ಹೊರಗೆ ಹಾಕಲಾಗಿದೆ ಎನ್ನಲಾಗಿದೆ.
ಬಿಗ್‌ಬಾಸ್ ನಲ್ಲಿ ಕಳೆದ ವಾರ ಯಾರೂ ಸಹ ಎಲಿಮಿನೇಟ್ ಆಗಿರಲಿಲ್ಲ. ಸಾಮಾನ್ಯವಾಗಿ ಭಾನುವಾರ ಸ್ಪರ್ಧಿಯನ್ನು ಎಲಿಮಿನೇಟ್ ಮಾಡಲಾಗುತ್ತದೆ. ಆದರೆ ಸುದೀಪ್ ಅವರು ಭಾನುವಾರದ ಎಪಿಸೋಡ್ಗೆ ಬರಲಿಲ್ಲವಾದ್ದರಿಂದ ಯಾರೂ ಸಹ ಎಲಿಮಿನೇಟ್ ಆಗಿರಲಿಲ್ಲ. ಈ ವಾರವೂ ಸಹ ಸುದೀಪ್ ಅವರು ಬರಲಿಲ್ಲವಾದ್ದರಿಂದ ಈ ವಾರವೂ ಯಾರೂ ಎಲಿಮಿನೇಟ್ ಆಗಲ್ಲ ಎಂದು ಪ್ರೇಕ್ಷಕರು ನಿರೀಕ್ಷಿಸಿದ್ದರು. ಆದರೆ ಈ ವಾರ ಎಲಿಮಿನೇಷನ್ ನಡೆದಿದೆ. ಆದರೆ ಯಾರು ಎಲಿಮಿನೇಟ್ ಆಗಿದ್ದಾರೆ ಅನ್ನೋದನ್ನು ತಿಳಿದುಕೊಳ್ಳಲು ಕಾದುನೋಡಬೇಕಾಕಿದೆ.
ಇದನ್ನೂ ಓದಿ : ಕನ್ನಡ ಮಾತಾಡು ಎಂದು ಕ್ಯಾಶಿಯರ್ ಮೇಲೆ ಹಲ್ಲೆ ಮಾಡಿದ ಕುಡುಕ – ದೃಶ್ಯ ಸಿಸಿಟಿವಿಯಲ್ಲಿ ಸೆರೆ..!