Download Our App

Follow us

Home » ಮೆಟ್ರೋ » ಕನ್ನಡ ಮಾತಾಡು ಎಂದು ಕ್ಯಾಶಿಯರ್​ ಮೇಲೆ ಹಲ್ಲೆ ಮಾಡಿದ ಕುಡುಕ – ದೃಶ್ಯ ಸಿಸಿಟಿವಿಯಲ್ಲಿ ಸೆರೆ..!

ಕನ್ನಡ ಮಾತಾಡು ಎಂದು ಕ್ಯಾಶಿಯರ್​ ಮೇಲೆ ಹಲ್ಲೆ ಮಾಡಿದ ಕುಡುಕ – ದೃಶ್ಯ ಸಿಸಿಟಿವಿಯಲ್ಲಿ ಸೆರೆ..!

ಬೆಂಗಳೂರು : ಕನ್ನಡ ಮಾತಾಡು ಎಂದು ಕ್ಯಾಶಿಯರ್​ ಮೇಲೆ ಕುಡುಕನೊಬ್ಬ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ವಿಜಯನಗರದಲ್ಲಿ ನಡೆದಿದೆ. ಅಂಗಡಿಯಲ್ಲಿ ಕುಡುಕ ತನಗೆ ಬೇಕಾಗಿದ್ದನ್ನ ತೆಗೆದುಕೊಂಡು ಅನಂತರ ಹಣ ಕೊಟ್ಟಿಲ್ಲ, ಹಾಗಾಗಿ ಹಣ ಕೊಡುವಂತೆ ಕೇಳಿದಾಗ ಕನ್ನಡದಲ್ಲಿ ಮಾತಾಡು ಎಂದು ಅವಾಜ್​​ ಹಾಕಿದ್ದಾನೆ.

ಬಿಲ್ ಕೊಡುವಂತೆ ಕೇಳಿದಾಗ ಕುಡುಕ ಕಿರಿಕ್ ಮಾಡಿ ಹಲ್ಲೆ ನಡೆಸಿದ್ದಾನೆ. ಕನ್ನಡ ಕಲಿಬೇಕು ಎಂದು ಆರೋಪಿ ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿದ್ದಾನೆ. ಹಲ್ಲೆ ನಡೆಸುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಂಗಡಿ ಮಾಲೀಕ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ರಾಮಮೂರ್ತಿನಗರ ಠಾಣೆಯ ಇನ್ಸ್​​ಪೆಕ್ಟರ್ ಮುತ್ತುರಾಜ್​​ ವಿರುದ್ಧ ಕಿರುಕುಳ ಆರೋಪ – PSI, ಸಿಬ್ಬಂದಿಗಳಿಂದ ಗೃಹಸಚಿವರಿಗೆ ಪತ್ರ..!

Leave a Comment

DG Ad

RELATED LATEST NEWS

Top Headlines

ರಿಲೀಸ್​​ಗೂ ಮುನ್ನ OTTಗೆ ಲಗ್ಗೆಯಿಟ್ಟ ‘ಮೂರು ಕಾಸಿನ ಕುದುರೆ’ ಸಿನಿಮಾ..!

ಇತ್ತೀಚಿನ ದಿನಗಳಲ್ಲಿ ಒಂದು ಸಿನಿಮಾ ನಿರ್ಮಾಣ ಮಾಡೋದು ಎಷ್ಟು ಕಷ್ಟವೋ ಅದಕ್ಕಿಂತ ಕಷ್ಟಕರವಾದ್ದು, ಅದನ್ನು ರಿಲೀಸ್ ಮಾಡಿ ಜನರಿಗೆ ತಲುಪಿಸೋದು. ಹೀಗೇ ಅದೆಷ್ಟೋ ಚಿತ್ರತಂಡಗಳು ಸಿನಿಮಾ ನಿರ್ಮಿಸಿದ್ದರೂ

Live Cricket

Add Your Heading Text Here