ಬೆಂಗಳೂರು : ಅಶ್ಲೀಲ ಮೇಸೆಜ್ಗಳನ್ನಇಟ್ಟುಕೊಂಡು ಮಾಜಿ ಸಚಿವ ಮಾಲೀಕಯ್ಯ ಗುತ್ತೆದಾರ್ ಮಗನಿಗೆ ಬೆದರಿಕೆ ಹಾಕಿದ್ದ ಇಬ್ಬರನ್ನ ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನಲಪಾಡ್ ಬಿಗ್ರೇಡ್ ಸಂಘದ ಅಧ್ಯಕ್ಷೆ ಮಂಜುಳ ಪಾಟೀಲ್ ಹಾಗೂ ಆಕೆಯ ಪತಿ ಶಿವರಾಜ್ ಪಾಟೀಲ್ರನ್ನ ಸಿಸಿಬಿ ಬಂಧಿಸಿದೆ.
ಮಹಿಳೆ ಜೊತೆ ಮಾಜಿ ಸಚಿವ ಮಾಲೀಕಯ್ಯ ಗುತ್ತೆದಾರ್ ನಿಂದನೀಯ ಮೇಸೆಜ್ ಗಳನ್ನ ವಾಟ್ಸಪ್ ಚಾಟ್ ಮೂಲಕ ಮಾಡಿದ್ದಾರೆ ಎನ್ನಲಾಗಿದೆ. ಈ ಮೇಸೆಜ್ಗಳನ್ನ ಇಟ್ಟುಕೊಂಡು ಮಹಿಳೆ ಮಾಜಿ ಸಚಿವರ ಪುತ್ರನಿಗೆ ರಿತೇಶ್ಗೆ ಕರೆ ಮಾಡಿ ನಿಮ್ಮನು ಭೇಟಿಯಾಗಬೇಕು ಎಂದು ಕರೆ ಮಾಡಿದ್ದಾರೆ. ಕೊಡಿಗೇಹಳ್ಳಿ ಹೊಟೇಲ್ನಲ್ಲಿ ಭೇಟಿಯಾಗಿ ನಿಮ್ಮ ತಂದೆ ನನ್ನ ಜೊತೆ ನಿಂದನಿಯ ಮೇಸೆಜ್ಗಳನ್ನ ವಾಟ್ಸಪ್ ಮೂಲಕ ಮಾಡಿದ್ದಾರೆ. ಮೇಸೆಜ್ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡದಿರಲು 20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ.
ಭೇಟಿಯಾದ ಎರಡು ದಿನ ನಂತರ ಪದೇ ಪದೇ ಹಣ ನೀಡುವಂತೆ ಒತ್ತಾಯ ಮಾಡಿದ್ದಾರೆ. ಇದರಿಂದ ಮಾಲೀಕಯ್ಯ ಪುತ್ರ ಮಂಜುಳ ಹಾಗೂ ಶಿವರಾಜ್ ಪಾಟೀಲ್ ವಿರುದ್ದ ಸಿಸಿಬಿಗೆ ದೂರು ನೀಡಿದ್ದಾರೆ. ದೂರಿನ್ವಯ ಸಿಸಿಬಿ ಇಂದು ಮಧ್ಯಾಹ್ನ ಇಬ್ಬರನ್ನ ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಿದ್ರು. 1ನೇ ಎಸಿಎಮ್ಎಮ್ ಕೋರ್ಟ್ ಇಬ್ಬರನ್ನ 8 ದಿನಗಳ ಕಾಲ ಹೆಚ್ಚಿನ ವಿಚಾರಣೆಗಾಗಿ ನೀಡಿ ಆದೇಶ ಮಾಡಿತ್ತು.
ಇದನ್ನೂ ಓದಿ : ‘ನಾ ನಿನ್ನ ಬಿಡಲಾರೆ’ ರಿಲೀಸ್ ಡೇಟ್ ಫಿಕ್ಸ್ – ನ.29ಕ್ಕೆ ಪ್ರೇಕ್ಷಕರ ಮುಂದೆ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ..!