Download Our App

Follow us

Home » ಅಪರಾಧ » ಮಂಡ್ಯ : ತೂಕದಲ್ಲಿ ಮೋಸ ಆರೋಪ – 3 ಆಭರಣ ಮಳಿಗೆಗಳಿಗೆ ಬೀಗ ಜಡಿದ ಅಧಿಕಾರಿಗಳು..!

ಮಂಡ್ಯ : ತೂಕದಲ್ಲಿ ಮೋಸ ಆರೋಪ – 3 ಆಭರಣ ಮಳಿಗೆಗಳಿಗೆ ಬೀಗ ಜಡಿದ ಅಧಿಕಾರಿಗಳು..!

ಮಂಡ್ಯ : ತೂಕದಲ್ಲಿ ಮೋಸ ಮಾಡುತ್ತಿದ್ದ ಆರೋಪ ಹಿನ್ನೆಲೆಯಲ್ಲಿ ಮೂರು ಜ್ಯುವೆಲರ್ಸ್ ಶಾಪ್​ಗಳ ಮೇಲೆ ಕರ್ನಾಟಕ ಆಹಾರ ಆಯೋಗ ಹಾಗೂ ಅಳತೆ ಮತ್ತು ತೂಕ ಮಾಪನ ಅಧಿಕಾರಿಗಳು ದಾಳಿ ನಡೆಸಿ, ಸೀಜ್​ ಮಾಡಿರುವ ಘಟನೆ ಜಿಲ್ಲೆಯ ಪಾಂಡವಪುರದಲ್ಲಿ ಶನಿವಾರ ನಡೆದಿದೆ.

ಈ ಶಾಪ್​ಗಳಲ್ಲಿ ಗ್ರಾಹಕರು ಚಿನ್ನವನ್ನು ಖರೀದಿಸುವಾಗ ಅಳತೆಯ ವೇಳೆ ಒಂದರಿಂದ ಒಂದೂವರೆ ಗ್ರಾಂ ಚಿನ್ನವನ್ನ ಲಪಟಾಯಿಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿತ್ತು. ಖಚಿತ ಮಾಹಿತಿ ಪಡೆದ  ಅಧಿಕಾರಿಗಳು ಪಟ್ಟಣದ ಮೂರು ಜ್ಯುವೆಲರ್ಸ್ ಶಾಪ್​ಗಳ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ.

ಇನ್ನು ದಾಳಿ ವೇಳೆ ತೂಕದ ಮಾಪನಗಳನ್ನು ಪರಿಶೀಲಿಸಿದಾಗ ಸುಮಾರು ಒಂದರಿಂದ ಒಂದೂವರೆ ಗ್ರಾಂ ಮೋಸ ಮಾಡಿರುವುದು ಕಂಡು ಬಂದಿದೆ. ತಕ್ಷಣ ಅಧಿಕಾರಿಗಳು ಮಾಲೀಕರಿಗೆ ಎಚ್ಚರಿಕೆ ನೀಡಿದರಲ್ಲದೆ, ಮೂರು ಅಂಗಡಿಗಳನ್ನು ಸೀಜ್​ ಮಾಡಿದ್ದಾರೆ.

ಇದನ್ನೂ ಓದಿ : ಕೊಲ್ಲಾಪುರದಲ್ಲಿ ಹೊತ್ತಿ ಉರಿದ ಖಾಸಗಿ ಬಸ್ – ಓರ್ವ ಸಾ*ವು , 6 ಮಂದಿಗೆ ಗಾಯ..!

Leave a Comment

DG Ad

RELATED LATEST NEWS

Top Headlines

ತೆರೆಮೇಲೆ ಅಬ್ಬರಿಸಿದ “ಬಘೀರ” – ಸೂಪರ್ ಹೀರೋ ಆದ ರೋರಿಂಗ್ ಸ್ಟಾರ್ ಶ್ರೀಮುರಳಿ..!

ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಬಘೀರ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಹೊಂಬಾಳೆ ಫಿಲಂಸ್‌ ಬ್ಯಾನರ್‌ನಲ್ಲಿ ಮೂಡಿಬಂದ ಈ ಚಿತ್ರಕ್ಕೆ ಡಾ. ಸೂರಿ ನಿರ್ದೇಶನ ಮಾಡಿದ್ದಾರೆ.

Live Cricket

Add Your Heading Text Here