ಬೆಂಗಳೂರು : ಶಿಗ್ಗಾಂವಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅಜ್ಜಂಪೀರ್ ಖಾದ್ರಿ ಬದಲಿಗೆ ಯಾಸಿರ್ ಅಹ್ಮದ್ ಖಾನ್ಗೆ ಟಿಕೆಟ್ ಘೋಷಣೆಯಾಗಿತ್ತು. ಇದರಿಂದ ಬೇಸರಗೊಂಡಿದ್ದ, ಅಜ್ಜಂಪೀರ್ ಖಾದ್ರಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ನಿನ್ನೆ ಕೊನೆಯ ದಿನವಾಗಿತ್ತು. ನಾಮಪತ್ರ ಸಲ್ಲಿಕೆಗೆ ಇನ್ನು 13 ನಿಮಿಷ ಬಾಕಿ ಇರುವಂತೆ ಬೈಕ್ನಲ್ಲಿ ಬಂದ ಅಜ್ಜಂಪೀರ್ ಖಾದ್ರಿ ನಾಮಪತ್ರ ಸಲ್ಲಿಸಿದ್ದಾರೆ. ಅಜ್ಜಂಪೀರ್ ಖಾದ್ರಿಯ ಈ ನಡೆ ಕಾಂಗ್ರೆಸ್‌ಗೆ ಬಿಗ್ ಶಾಕ್ ನೀಡಿತ್ತು.
ಆದರೆ ಶಿಗ್ಗಾಂವಿ ಬಂಡಾಯಕ್ಕೆ ಸಿಎಂ ಸಿದ್ದು ಮದ್ದು ಅರೆದಿದ್ದಾರೆ. ಶಿಗ್ಗಾಂವಿ ಉಪ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಅಜ್ಜಂಪೀರ್ ಖಾದ್ರಿ ಅವರನ್ನು ಸಚಿವ ಜಮೀರ್ ಅಹಮದ್ ಖಾನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಕರೆದುಕೊಂಡು ಬಂದು ಚರ್ಚಿಸಿದರು. ಬಂಡಾಯವೆದ್ದ ಖಾದ್ರಿಯ ಮನವೊಲಿಕೆ ಮಾಡಿದ ಸಿಎಂ ಸಿದ್ದು, ಸಚಿವ ಜಮೀರ್ ಅಹ್ಮದ್ ಖಾನ್, ಮುಂದೆ ಉತ್ತಮ ಸ್ಥಾನ ಮಾನಗಳು ಸಿಗಲಿವೆ. ಆತುರ ಮಾಡಬೇಡಿ, ನಾಮಪತ್ರ ವಾಪಸ್ ಪಡೆಯಿರಿ ಆಜಂಪೀರ್ ಖಾದ್ರಿಗೆ ಸಿದ್ದರಾಮಯ್ಯ ಬುದ್ಧಿವಾದ ಹೇಳಿದ್ದರು.
ಖಾದ್ರಿ ಮನವೊಲಿಕೆ ಬಗ್ಗೆ ಸಿಎಂ ಸಿದ್ದು ಟ್ವೀಟ್ ಮೂಲಕ ರಿಯಾಕ್ಷನ್ ಕೊಟ್ಟಿದ್ದಾರೆ. ಶಿಗ್ಗಾಂವ್ ಪಕ್ಷೇತರ ಅಭ್ಯರ್ಥಿ ಖಾದ್ರಿ ಜೊತೆ ಚರ್ಚಿಸಿದ್ದೇನೆ, ಪಕ್ಷದ ಹಿತದೃಷ್ಟಿಯಿಂದ ನಾಮಪತ್ರ ಹಿಂಪಡೆಯಲು ತಿಳಿಸಿದೆ. ನಾಮಪತ್ರ ವಾಪಸ್ ಜೊತೆಗೆ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡ್ತಾರೆ, ಪಠಾಣ್ ಗೆಲುವಿಗೆ ಸಕ್ರಿಯವಾಗಿ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಇದೀಗ ಅಜಂಪೀರ್ ಖಾದ್ರಿ ಬಂಡಾಯ ಕೈಬಿಡ್ತಾರಾ..? ಶಿಗ್ಗಾಂವಿ ಕಣದಿಂದ ಹಿಂದೆ ಸರೀತಾರಾ ಖಾದ್ರಿ..? ಸಿಎಂ ನಡೆಸಿದ ಮನವೊಲಿಕೆ ಸಕ್ಸಸ್ ಆಯ್ತಾ..? ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.
ಇದನ್ನೂ ಓದಿ : ಚನ್ನಪಟ್ಟಣ ಬೈ ಎಲೆಕ್ಷನ್ನಲ್ಲಿ ಜನರು JDSಗೆ ಪಾಠ ಕಲಿಸ್ತಾರೆ – ರಾಜೀನಾಮೆ ಘೋಷಿಸಿ ಹೆಚ್ಡಿಕೆ ವಿರುದ್ಧ ಶಿವರಾಮೇಗೌಡ ವಾಗ್ದಾಳಿ..!