ಮಂಡ್ಯ : ಚನ್ನಪಟ್ಟಣ ಬೈ ಎಲೆಕ್ಷನ್ ವಾರ್ ಹೊತ್ತಲ್ಲೇ ಬಿಜೆಪಿಗೆ ಮತ್ತೊಂದು ಶಾಕ್ ಎದುರಾಗಿದೆ. ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಬಿಜೆಪಿಗೆ ರಾಜೀನಾಮೆ ನೀಡಿ, ಕಾಂಗ್ರೆಸ್ ಸೇರುವ ನಿರ್ಧಾರ ಮಾಡಿದ್ದಾರೆ.
ರಾಜೀನಾಮೆ ಘೋಷಿಸಿ ಹೆಚ್ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಅವರು, ಹಳೆ ಮೈಸೂರು ಭಾಗದಲ್ಲಿ ಹೆಚ್ಡಿಕೆ ಬಿಜೆಪಿ ನಾಯಕತ್ವ ಮುಗಿಸ್ತಿದ್ದಾರೆ. ಯೋಗೇಶ್ವರ್ ಹೊರಗಟ್ಟೋ ಕೆಲಸವನ್ನು ಹೆಚ್ಡಿಕೆ ಮಾಡಿದ್ದಾರೆ. ನಾವೆಲ್ಲಾ ಸೇರಿ ಬಿಜೆಪಿಯನ್ನು ಕಟ್ಟಿದ್ದೆವು, ಆದರೆ ಹೆಚ್ಡಿಕೆ ಎಲ್ಲರನ್ನೂ ಮುಗಿಸಿ ಹಾಕ್ತಿದ್ದಾರೆ ಎಂದು ಗುಡುಗಿದ್ದಾರೆ.
ಇನ್ನು ಪಾಪ ನಿಖಿಲ್ರನ್ನು ಹರಕೆ ಕುರಿ ಮಾಡುವ ಪ್ರಯತ್ನ ನಡೆದಿದೆ. ನವೆಂಬರ್ 13ರಂದು ಚನ್ನಪಟ್ಟಣದ ಜನರು ಜೆಡಿಎಸ್ಗೆ ಪಾಠ ಕಲಿಸ್ತಾರೆ. ಯೋಗೇಶ್ವರ್ ಚನ್ನಪಟ್ಟಣದಲ್ಲಿ ಗೆಲ್ಲುವುದು ಖಚಿತ ಎಂದು ಮಂಡ್ಯದಲ್ಲಿ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ತಿಳಿಸಿದ್ದಾರೆ.
ಇದನ್ನೂ ಓದಿ : ಕನ್ನಡದ ನಟನಿಗೆ ಥಿಯೇಟರ್ನಲ್ಲಿ ಮಹಿಳೆಯಿಂದ ಕಪಾಳಮೋಕ್ಷ – ಅಲ್ಲಿ ನಡೆದಿದ್ದೇನು?
Post Views: 382